For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 5000ರನ್ ಕ್ಲಬ್ಬಿಗೆ ಎಂಟ್ರಿ ಕೊಟ್ಟ ''ಗಬ್ಬರ್'' ಶಿಖರ್ ಧವನ್

Dhawan becomes fourth Indian, Fifth overall to score 5,000 IPL runs

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020ರಲ್ಲಿ ಆರಂಭಿಕ ಆಟಗಾರರಾಗಿ ಮಿಂಚುತ್ತಿರುವವರ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಿಖರ್ ಧವನ್ ಎದ್ದು ಕಾಣುತ್ತಾರೆ. ಉತ್ತಮ ಲಯದಲ್ಲಿರುವ ಗಬ್ಬರ್ ಧವನ್ ಇಂದು ಐಪಿಎಲ್ ವೃತ್ತಿ ಬದುಕಿನಲ್ಲಿ 5000ರನ್ ಗಳಿಸಿದ ಕ್ರಿಕೆಟರ್ಸ್ ಪಟ್ಟಿ ಸೇರಿದ ಸಾಧನೆ ಮಾಡಿದರು.

ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧದ ಲೀಗ್ ಪಂದ್ಯದಲ್ಲಿಂದು(ಅ.20) 61 ಎಸೆತಗಳಲ್ಲಿ 106ರನ್ ಚೆಚ್ಚಿದ ಶಿಖರ್ ಅವರು ತಂಡದ ಮೊತ್ತ 20 ಓವರ್ ಗಳಲ್ಲಿ 164/5 ಸ್ಕೋರ್ ಮಾಡಲು ನೆರವಾಗಿ ಅಜೇಯರಾಗಿ ಉಳಿದರು.

5000ರನ್ ಗಳಿಸಿರುವ ಟಾಪ್ 5 ರನ್ ಸ್ಕೋರರ್ಸ್:
ಹೆಸರು-ಪಂದ್ಯ-ಇನ್ನಿಂಗ್ಸ್-ರನ್-ಗಳಿಸಿದ ದಿನಾಂಕ

* ವಿರಾಟ್ ಕೊಹ್ಲಿ 186 ಪಂದ್ಯ, 178 ಇನ್ನಿಂಗ್ಸ್, 5759ರನ್, (28 ಮಾರ್ಚ್ 2019)
* ಸುರೇಶ್ ರೈನಾ 193 ಪಂದ್ಯ, 192 ಇನ್ನಿಂಗ್ಸ್ , 5368 ರನ್, (23 ಮಾರ್ಚ್ 2019)
* ರೋಹಿತ್ ಶರ್ಮ 197 ಪಂದ್ಯ, 192 ಇನ್ನಿಂಗ್ಸ್, 5158 ರನ್, (01 ಅಕ್ಟೋಬರ್ 2020)
* ಡೇವಿಡ್ ವಾರ್ನರ್ 135 ಪಂದ್ಯ, 135 ಇನ್ನಿಂಗ್ಸ್, 5037ರನ್, (18 ಅಕ್ಟೋಬರ್ 2020)
* ಶಿಖರ್ ಧವನ್ 169 ಪಂದ್ಯ, 169 ಇನ್ನಿಂಗ್ಸ್, 5044 ರನ್, (20 ಅಕ್ಟೋಬರ್ 2020)

ಈ ಇನ್ನಿಂಗ್ಸ್ ಮೂಲಕ 5000ರನ್ ಗಳಿಸಿದ ಕ್ರಿಕೆಟರ್ಸ್ ಕ್ಲಬ್ಬಿಗೆ ಎಂಟ್ರಿ ಕೊಟ್ಟ ನಾಲ್ಕನೇ ಭಾರತೀಯ ಆಟಗಾರ ಹಾಗೂ ಒಟ್ಟಾರೆ ಐದನೇ ಕ್ರಿಕೆಟರ್ ಎನಿಸಿಕೊಂಡರು. ಐಪಿಎಲ್ ನಲ್ಲಿ ಸತತ ಶತಕ ಸಿಡಿಸಿದ ಧವನ್ ಅವರು ಐಪಿಎಲ್ ನಲ್ಲಿ ಆರಂಭಿಕ ಆಟಗಾರರಾಗಿ ಕೂಡಾ ಗೇಲ್ ಹಿಂದಿಕ್ಕಿ ಅತಿ ಹೆಚ್ಚು ರನ್ ಗಳಿಸಿದ ಓಪನರ್ ಎಂಬ ಸಾಧನೆ ಮಾಡಿದ್ದಾರೆ. ಐಪಿಎಲ್ 2020ರಲ್ಲಿ 10 ಪಂದ್ಯಗಳಿಂದ 465 ರನ್ ಗಳಿಸಿದ್ದಾರೆ.

Story first published: Wednesday, October 21, 2020, 10:27 [IST]
Other articles published on Oct 21, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+