ವೈರಲ್ ಆಯ್ತು ಧೋನಿ-ಜಿವಾರ ಈ ಮುದ್ದಾದ ವಿಡಿಯೋ


ಭಾರತ ಕ್ರಿಕೆಟ್ ತಂಡದ ನಾಯಕ ಎಂ.ಎಸ್. ಧೋನಿಯಷ್ಟೇ ಈಗ ಅವರ ಮಗಳು ಜಿವಾ ಕೂಡ ಸೆಲೆಬ್ರಿಟಿ. ಧೋನಿ ಮೈದಾನದಲ್ಲಿದ್ದಾಗ ಒಂದು ಕ್ಯಾಮೆರಾ ಕಣ್ಣು ಧೋನಿಯ ಪತ್ನಿ ಸಾಕ್ಷಿ ಮತ್ತು ಮಗಳು ಜಿವಾ ಅವರತ್ತ ನೆಟ್ಟಿರುತ್ತದೆ.
ಐಪಿಎಲ್ ಆವೃತ್ತಿಯುದ್ದಕ್ಕೂ ಚೆನ್ನೈ ತಂಡದ ಆಟದಂತೆಯೇ ಜಿವಾಳ ಮುದ್ದಾದ ನಗುವನ್ನು ಕಂಡ ಅಭಿಮಾನಿಗಳು ಫಿದಾ ಆಗಿದ್ದರು. ಅಭ್ಯಾಸದ ವೇಳೆ, ಡ್ರೆಸ್ಸಿಂಗ್ ರೂಮ್‌ನಲ್ಲಿ ಮಗಳೊಂದಿಗೆ ಧೋನಿ ಕಾಲಕಳೆಯುವ ವಿಡಿಯೋಗಳು ತುಂಬಾ ಜನಪ್ರಿಯವಾಗಿವೆ.
ತಂಡದ ಸಹ ಆಟಗಾರರೂ ಜಿವಾ ಜತೆ ಆಟವಾಡಿ, ಆಕೆಯೊಂದಿಗೆ ಫೋಟೊ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಫೈನಲ್‌ನಲ್ಲಿ ಕಪ್ ಕೈಗೆತ್ತಿಕೊಂಡ ಬಳಿಕ ಧೋನಿ ಅದನ್ನು ಉಳಿದ ಆಟಗಾರರ ಕೈಗೆ ಒಪ್ಪಿಸಿ ಮಗಳನ್ನು ಎತ್ತಿಕೊಂಡು ತಮ್ಮದೇ ಲೋಕದಲ್ಲಿ ವಿಹರಿಸಿದ್ದು ಎಲ್ಲರ ಮನಸೂರೆಗೊಂಡಿತ್ತು.
ಈಗ ಅಪ್ಪ-ಮಗಳ ಮತ್ತೊಂದು ಸೊಗಸಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಫೈನಲ್ ಪಂದ್ಯ ಮುಗಿದ ಬಳಿಕ ಸಿಎಸ್‌ಕೆ ತಂಡ ಡಗ್‌ಔಟ್‌ನಿಂದ ಮೈದಾನದೊಳಕ್ಕೆ ಪ್ರವೇಶಿಸುವ ವೇಳೆ ಅಮ್ಮನ ತೋಳಿನಲ್ಲಿದ್ದ ಜಿವಾ ಅಪ್ಪನನ್ನು ಕಂಡು ಸಂಭ್ರಮಿಸುತ್ತಾಳೆ. ತನ್ನ ಕೈಯಲ್ಲಿದ್ದ 'ಫ್ರೂಟಿ'ಯನ್ನು ಚಾಚುತ್ತಾಳೆ. ಧೋನಿ ಸ್ಟ್ರಾಗೆ ತುಟಿಯಿಟ್ಟು ಸ್ವಲ್ಪ ಕುಡಿಯುತ್ತಾರೆ. ಬಳಿಕ ಕೈ ಚಾಚಿ ಮಗಳನ್ನು ಎತ್ತಿಕೊಂಡು ಮೈದಾನದತ್ತ ಧಾವಿಸುತ್ತಾರೆ.
ಈ ದೃಶ್ಯವನ್ನು ಕಂಡ ಅಭಿಮಾನಿಗಳು ಹರ್ಷೋದ್ಗಾರ ಮಾಡಿದ್ದರು. ಅದರ ವಿಡಿಯೋವನ್ನು ಸಹ ಯಾರೋ ಚಿತ್ರೀಕರಿಸಿದ್ದರು. ಈಗ ಅದು ಎಲ್ಲೆಡೆ ಹರಿದಾಡುತ್ತಿದೆ.
ಪ್ರೆಸೆಂಟೇಷನ್ ಕಾರ್ಯಕ್ರಮ ಮುಗಿದ ಬಳಿಕವೂ ಧೋನಿ ಮಗಳೊಂದಿಗೆ ಹೆಚ್ಚು ಕಾಲ ಕಳೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications