Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹೇಂದ್ರ ಸಿಂಗ್ ಧೋನಿ ಪುತ್ರಿಗೆ ಅತ್ಯಾಚಾರದ ಬೆದರಿಕೆ

Dhoni Daughter Ziva Is Getting Rape Threats After CSKs Defeat Against KKR

ಭಾರತದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೇನು ಲೆಕ್ಕವೇ ಇಲ್ಲ. ತಮ್ಮ ನೆಚ್ಚಿನ ಆಟಗಾರರನ್ನು ಪೂಜಿಸುವವರು ಇದ್ದಾರೆ. ಚೆನ್ನಾಗಿ ಆಡುವಾಗ ಹೊಗಳಿ ಅಟ್ಟಕ್ಕೇರಿಸುವವರು, ಪ್ರದರ್ಶನ ಕುಂದಿದಾಗ ಕಾಲೆಳೆಯುವವರು ಕಮ್ಮಿ ಏನಿಲ್ಲ.

ನಮ್ಮ ನೆಚ್ಚಿನ ಕ್ರಿಕೆಟಿಗರನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಅಭಿಮಾನಿಗಳು ಸಾಕಷ್ಟಿದ್ದಾರೆ. ಅದರ ಜೊತೆಗೆ ಪ್ರಮುಖ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಕೈ ಕೊಟ್ಟಾಗ ಹಿಡಿ ಶಾಪ ಹಾಕುವವರು, ಕ್ರಿಕೆಟಿಗರ ಮನೆ ಮೇಲೆ ಕಲ್ಲೆಸೆಯುವವರು ಬೀದಿ ಬೀದಿಯಲ್ಲಿ ಕಾಣಸಿಗುವರು. ಇದೀಗ ಆ ಹಂತ ಮತ್ತಷ್ಟು ಎಲ್ಲೆ ಮೀರಿದೆ.

ಬುಧವಾರ ಕೊಲ್ಕತ್ತಾ ನೈಟ್‌ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಗೆಲ್ಲುವ ಪಂದ್ಯವನ್ನ ಕೈ ಚೆಲ್ಲಿತು. ಈ ಪಂದ್ಯದಲ್ಲಿ ಧೋನಿ ಚೆನ್ನಾಗಿ ಆಡಿಲ್ಲವೆಂದು ಆತನ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಿರುವ ಹೇಯ ಘಟನೆಯೊಂದು ಬೆಳಕಿಗೆ ಬಂದಿದೆ.

ಬುಧವಾರ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಸಿಎಸ್​ಕೆ 10 ರನ್​ಗಳಿಂದ ಸೋಲನ್ನಪ್ಪಿತು. ಈ ಪಂದ್ಯದಲ್ಲಿ ವಿಫಲರಾದ ಸಿಎಸ್​ಕೆ ಮಹೇಂದ್ರ ಸಿಂಗ್ ಧೋನಿ ಮತ್ತು ಕೇದಾರ್ ಜಾಧವ್​ ಸಾಮಾಜಿಕ ತಾಣದಲ್ಲಿ ಟ್ರೋಲ್ ಆಗಿದ್ದರು.

ಆದರೆ ಅದೆಲ್ಲವನ್ನೂ ಮೀರಿ ಇದೀಗ ಕೆಲವರ ವರ್ತನೆ ಮಿತಿ ಮೀರಿದೆ. ಆಟಗಾರರ ಮೇಲಿನ ಈ ನಿಂದನೆ ವಿಡಂಬನೆಯನ್ನು ದಾಟಿ ಇದೀಗ ಮಕ್ಕಳ ವಿರುದ್ದ ಬೆದರಿಕೆಯೊಡ್ಡಿರುವ ಘಟನೆ ಜರುಗಿದೆ. ಸತತ ವಿಫಲರಾಗುತ್ತಿರುವ ಧೋನಿಯನ್ನು ಟೀಕಿಸಿ ಹಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ನಡುವೆ ಮಿಸ್ಟರ್ ವಿಜಯ್ ಎಂಬ ಹೆಸರಿನ ವ್ಯಕ್ತಿಯೊಬ್ಬರು ಧೋನಿ ಮಗಳು ಝೀವಾಳನ್ನು ಅತ್ಯಾಚಾರ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ.

ಅಷ್ಟೇ ಅಲ್ಲದೆ ಧೋನಿ ಮಗಳ ಹೆಸರನ್ನು ಬಳಸಿ ಅಶ್ಲೀಲ ಕಮೆಂಟ್ ಮೂಲಕ ಸೋಷಿಯಲ್ ಮೀಡಿಯಾ ವಿಕೃತರು ಹೌಹಾರಿದ್ದಾರೆ. ಈ ಚಾಟ್​ಗಳ ಸ್ಕ್ರೀನ್ ಶಾಟ್, ಹಾಗೂ ಕಮೆಂಟ್​ಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಲವರು ಇಂತಹ ನೀಚ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ರೀತಿಯ ಜನರಿಗೆ ತಕ್ಷ ಶಿಕ್ಷೆಯಾಗಬೇಕು ಎಂಬ ಮಾತು ಕೇಳಿಬಂದಿದೆ.

Story first published: Saturday, October 10, 2020, 10:03 [IST]
Other articles published on Oct 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+