Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕುಮಾರ ಸಂಗಕ್ಕಾರ ದಾಖಲೆ ಸಮಕ್ಕೆ ನಿಂತ ಧೋನಿ

ಪಲ್ಲೆಕೆಲೆ, ಆಗಸ್ಟ್ 25: ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ ಅವರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮತ್ತೊಂದು ಮೈಲಿಗಲ್ಲು ದಾಟಿದ್ದಾರೆ. ಅತಿಹೆಚ್ಚು ಸ್ಟಂಪಿಂಗ್ ಮಾಡಿರುವ ದಾಖಲೆ ಹೊಂದಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ದಾಖಲೆ ಸಮಕ್ಕೆ ನಿಂತಿದ್ದಾರೆ.

ದ್ವಿತೀಯ ಏಕದಿನ: ಭಾರತಕ್ಕೆ ಜಯ ತಂದುಕೊಟ್ಟ ಭುವಿ, ಧೋನಿ

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆರಂಭಿಕ ಆಟಗಾರ ಗುಣತಿಲಕ ಅವರನ್ನು ಸ್ಟಂಪ್ ಮಾಡುವ ಮೂಲಕ, ಧೋನಿ ಅವರು 99ನೇ ಸ್ಟಂಪಿಂಗ್ ದಾಖಲಿಸಿದರು.

 MS Dhoni gets 99th stumping victim; equals Kumar Sangakkara's record


ಧೋನಿಯವರ ಅಂತಾರಾಷ್ಟ್ರೀಯ ಏಕದಿನದ ಸ್ಟಂಪಿಂಗ್ ಲೆಕ್ಕ 99ಕ್ಕೆ ಬಂದು ಮುಟ್ಟಿದೆ. ಮುಂದಿನ ಪಂದ್ಯದಲ್ಲಿ ಇನ್ನೊಂದೇ ಸ್ಟಂಪ್ ಮಾಡಿದರೆ, ಅದು ಅವರ 100ನೇ ಸ್ಟಂಪಿಂಗ್ ಆಗಲಿದೆ.

ಸಂಗಕ್ಕಾರ ಅವರು 404 ಪಂದ್ಯಗಳಲ್ಲಿ 99 ಸ್ಟಂಪಿಂಗ್ ಸಾಧಿಸಿದರೆ, ಜಾರ್ಖಂಡ್ ನ ವಿಕೆಟ್ ಕೀಪರ್ ಧೋನಿ 298 ಪಂದ್ಯಗಳಲ್ಲೇ ಈ ಸಾಧನೆ ಮಾಡಿದ್ದಾರೆ.

ಧೋನಿ, ಧವನ್, ರೋಹಿತ್ ಸಾಧನೆಗೆ ವೇದಿಕೆಯಾದ 2ನೇ ಏಕದಿನ

ಮಿಕ್ಕಂತೆ ಟಾಪ್ ವಿಕೆಟ್ ಕೀಪರ್ ಗಳಲ್ಲಿ ಶ್ರೀಲಂಕಾದ ಮಾಜಿ ಆಟಗಾರ ರೊಮೆಶ್ ಕಲುವಿಥರಣ ಅವರು 189 ಪಂದ್ಯಗಳಲ್ಲಿ 75 ಸ್ಟಂಪಿಂಗ್ಸ್ ಗಳಿಸಿದ್ದಾರೆ. ಪಾಕಿಸ್ತಾನದ ಮಾಜಿ ಆಟಗಾರ ಮೊಯಿನ್ ಖಾನ್ ಅವರು 219 ಪಂದ್ಯಗಳಲ್ಲಿ 73 ಸ್ಟಂಪಿಂಗ್ಸ್ ಹಾಗೂ ಆಡಂ ಗಿಲ್ ಕ್ರಿಸ್ಟ್ ಅವರು 287 ಪಂದ್ಯಗಳಲ್ಲಿ 55 ಸ್ಟಂಪಿಂಗ್ಸ್ ಗಳಿಸಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+