ಧೋನಿಗೂ ನನ್ನ ಹೆಲಿಕಾಪ್ಟರ್ ಶಾಟ್ ಇಷ್ಟ: ಪಾಂಡ್ಯ

ಹೊಸದಿಲ್ಲಿ, ಏಪ್ರಿಲ್ 19: ಐಪಿಎಲ್‌ನಲ್ಲಿ ಮುಂಬಯಿ ಇಂಡಿಯನ್ಸ್ ಪರ ಧೂಳೆಬ್ಬಿಸುತ್ತಿರುವ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಹೆಲಿಕಾಪ್ಟರ್ ಶಾಟ್‌ಗಳೊಂದಿಗೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಂದಹಾಗೆ ಹೆಲಿಕಾಪ್ಟರ್ ಶಾಟ್‌ನ ಹೆಗ್ಗುರುತು ಎಂ.ಎಸ್ ಧೋನಿ ಅವರದ್ದು. ಇದೀಗ ಧೋನಿಗೂ ಪಾಂಡ್ಯ ಅವರ ಹೆಲಿಕಾಪ್ಟರ್ ಶಾಟ್ ಇಷ್ಟವಂತೆ.
ದಿಲ್ಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಎದುರು 40 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು.
ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ 32 ರನ್‌ಗಳನ್ನು ಸಿಡಿಸಿ ಅಬ್ಬರಿಸಿದ್ದರು. ಈ ಸ್ಫೋಟಕ ಇನಿಂಗ್ಸ್‌ನಲ್ಲಿ ಪಾಂಡ್ಯ ಅವರ ಬ್ಯಾಟ್‌ನಿಂದ ಮೂರು ಭರ್ಜರಿ ಸಿಕ್ಸರ್‌ಗಳು ಹೊರಹೊಮ್ಮಿದ್ದವು. ಇದರಲ್ಲಿ ಒಂದು ಹೆಲಿಕಾಪ್ಟರ್ ಶಾಟ್ ಎಂಬುದು ವಿಶೇಷ.
ಇನಿಂಗ್ಸ್‌ನ 20ನೇ ಓವರ್‌ನ 2ನೇ ಎಸೆತದಲ್ಲಿ ಕಗಿಸೊ ರಬಾಡ ಎಸೆದ ಫುಲ್ ಲೆನ್ತ್ ಚೆಂಡನ್ನು ಪಾಂಡ್ಯ ಲಾಂಗ್ ಆನ್ ಮತ್ತು ಡೀಪ್ ಮಿಡ್‌ವಿಕೆಟ್ ಮಧ್ಯದ ಕಡೆಗೆ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ಗೆ ಅಟ್ಟಿದ್ದರು. ಇದಕ್ಕೆ ದಿಟ್ಟ ಉತ್ತರ ನೀಟಡಿದ ರಬಾಡ ಮರು ಎಸೆತದಲ್ಲಿ ಪಾಂಡ್ಯ ಅವರ ವಿಕೆಟ್ ಪಡೆದರು.
ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ಪಾಂಡ್ಯ ಇದೇ ರೀತಿಯ ಹೊಡೆತಗಳನ್ನು ಆಡಿದ್ದರು. ಈ ಸಂದರ್ಭದಲ್ಲಿ ಧೋನಿ ಕೂಡ ಅವರ ಹೆಲಿಕಾಪ್ಟರ್ ಹೊಡೆತವನ್ನು ಮೆಚ್ಚಿಕೊಂಡರು ಎಂದು ಪಾಂಡ್ಯ ಹೇಳಿಕೊಂಡಿದ್ದರು.
"ಪಂದ್ಯದಲ್ಲಿ ಹೆಲಿಕಾಪ್ಟರ್ ಶಾಟ್ ಹೊಡೆಯುತ್ತೇನೆಂದು ನಾನು ಎಂದಿಗೂ ಊಹಿಸಿರಲಿಲ್ಲ. ಬಳಿಕ ಧೋನಿಯಲ್ಲಿ ಹೋಗಿ ಹೆಲಿಕಾಪ್ಟರ್ ಶಾಟ್ ಹೇಗಿತ್ತು ಎಂದು ಕೇಳಿದಕ್ಕೆ ಅವರು ಉತ್ತಮವಾಗಿದೆ ಎಂದು ಉತ್ತರಿಸಿದ್ದರು,'' ಎಂದು ಪಾಂಡ್ಯ ಹೇಳಿದ್ದರು.
25 ವರ್ಷದ ಆಲ್‌ರೌಂಡರ್ ನೆಟ್ಸ್ ವೇಳೆಯೂ ಹೆಲಿಕಾಪ್ಟರ್ ಶಾಟ್‌ಗಳ ಅಭ್ಯಾಸ ಮಾಡುತ್ತಿರುವುದು ಈ ಹಿಂದೆ ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡಿತ್ತು. ಅಭ್ಯಾಸದ ಪೂರ್ಣ ಲಾಭ ಪಡೆದು ಪಂದ್ಯಗಳಲ್ಲೂ ಅಂಥದ್ದೇ ಶಾಟ್‌ಗಳನ್ನು ಹೊಡೆಯುವಲ್ಲಿ ಪಾಂಡ್ಯ ಸಫಲರಾಗಿದ್ದಾರೆ.
ಸದ್ಯ ಮುಂಬಯಿ ಇಂಡಿಯನ್ಸ್ ತಂಡ 9 ಪಂದ್ಯಗಳಿಂದ 12 ಅಂಕಗಳನ್ನು ಗಳಿಸಿ ಅಂಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಚೆನ್ನೈ ಅಗ್ರಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications