ವಿರಾಟ್ ಕೊಹ್ಲಿ ಶತಕ ಬಾರಿಸಿದ್ದು ಆಡೋ ಮಕ್ಕಳ ಮೇಲಾ?; ಅಫ್ಘಾನ್ ಬೌಲರ್‌ಗಳ ಶ್ರೇಯಾಂಕ ಹೇಗಿದೆ ನೋಡಿ

ಆಗಸ್ಟ್ 27ರಿಂದ ಆರಂಭವಾಗಿದ್ದ 2022ರ ಏಷ್ಯಾ ಕಪ್ ಟೂರ್ನಿ ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ಕಳೆದ 2 ವಾರಗಳಿಂದ ಜಗತ್ತಿನ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಒದಗಿಸಿದ ಏಷ್ಯಾ ಕಪ್ ಟೂರ್ನಿ ಮುಕ್ತಾಯಕ್ಕೆ ಕೇವಲ ಒಂದು ಪಂದ್ಯ ಮಾತ್ರ ಬಾಕಿ ಇದೆ.
ಸೂಪರ್ 4 ಹಂತದ ಪಾಯಿಂಟ್ ಟೇಬಲ್‌ನಲ್ಲಿ ಮೊದಲ ಎರಡು ಸ್ಥಾನ ಗಳಿಸಿದ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಫೈನಲ್ ಪಂದ್ಯದಲ್ಲಿ ಸೆಣಸಾಡಲಿವೆ. ಇನ್ನು ಟೂರ್ನಿಯ ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ಅಫ್ಘಾನಿಸ್ತಾನ ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿವೆ.
ಇನ್ನು ಭಾರತ ಮತ್ತು ಅಫ್ಘಾನಿಸ್ತಾನ ಸೂಪರ್ 4 ಹಂತದ ಪಂದ್ಯದ ಕುರಿತು ಮಾತನಾಡುವುದಾದರೆ, ವಿರಾಟ್ ಕೊಹ್ಲಿಯ ಮೊದಲ ಟಿ20 ಅಂತಾರಾಷ್ಟ್ರೀಯ ಶತಕದ ನೆರವಿನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಇದರಲ್ಲಿ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 122 ರನ್ ಗಳಿಸಿ ಅಫ್ಘಾನಿಸ್ತಾನ ಬೌಲರ್‌ಗಳನ್ನು ದಂಡಿಸಿದರು.

ಭುವನೇಶ್ವರ್ ಕುಮಾರ್ 5 ವಿಕೆಟ್
ನಂತರ ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿ ಸೋತರು. ಈ ವೇಳೆ ಭಾರತದ ವೇಗಿ ಭುವನೇಶ್ವರ್ ಕುಮಾರ್ ಅವರ ಸ್ವಿಂಗ್ ದಾಳಿಗೆ ತತ್ತರಿಸಿ ಹೋಯಿತು. ಭುವನೇಶ್ವರ್ ತಮ್ಮ 4 ಓವರ್‌ಗಳಲ್ಲಿ ಕೇವಲ 4 ರನ್ ನೀಡಿ 5 ವಿಕೆಟ್‌ಗಳನ್ನು ಪಡೆದು ದಾಖಲೆ ಬರೆದರು.
ಆದಾಗ್ಯೂ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ತಮ್ಮ ಏಷ್ಯಾ ಕಪ್ ಟ್ರೋಫಿಯನ್ನು ಉಳಿಸಿಕೊಳ್ಳಲು ವಿಫಲವಾದ ಕಾರಣ ಯುಎಇನ ಭಾರತದ ಪ್ರವಾಸ ಸಂತೋಷದಾಯಕವಾಗಿರಲಿಲ್ಲ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಎರಡು ಸೂಪರ್ 4 ಪಂದ್ಯಗಳನ್ನು ಸೋತ ನಂತರ ಬೇಗನೆ ತವರಿನತ್ತ ಮುಖ ಮಾಡಿತು.

ಅಫ್ಘಾನಿಸ್ತಾನದ ವಿರುದ್ಧ ಭಾರತದ ಬೃಹತ್ 101 ರನ್‌ಗಳ ಜಯ
ಅಫ್ಘಾನಿಸ್ತಾನದ ವಿರುದ್ಧ ಭಾರತ ಗೆದ್ದ ನಂತರ, ವಿರಾಟ್ ಕೊಹ್ಲಿ ಶತಕ ಬಾರಿಸಿದ ನಂತರ ಕೆಲವರು, ಭಾರತ ತಂಡ ಆಡೋ ಮಕ್ಕಳ ಗೆದ್ದಿದ್ದಾರೆ ಮತ್ತು ವಿರಾಟ್ ಕೊಹ್ಲಿ ಆಡೋ ಮಕ್ಕಳ ಶತಕ ಗಳಿಸಿದ್ದಾರೆ ಎಂದು ಲೇವಡಿ ಮಾಡಿದರು. ಇದಕ್ಕೆ ಉತ್ತರವೆಂಬಂತೆ ಅಫ್ಘಾನಿಸ್ತಾನದ ಬೌಲರ್‌ಗಳು ಸಣ್ಣ ಮಕ್ಕಳಲ್ಲ, ಇದಕ್ಕೆ ಅವರ ಶ್ರೇಯಾಂಕ ನೋಡಿದರೆ ಗೊತ್ತಾಗುತ್ತದೆ.
ಗುರುವಾರ ನಡೆದ ಏಷ್ಯಾ ಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಭಾರತದ ಬೃಹತ್ 101 ರನ್‌ಗಳ ಜಯವನ್ನು ಗಳಿಸಲು ಮತ್ತು 1021 ದಿನಗಳ ನಂತರ ಮೂರು ಅಂಕಿಗಳ ಗಡಿಯನ್ನು ತಲುಪಿದ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಹುನಿರೀಕ್ಷಿತ ಶತಕವನ್ನು ಬಾರಿಸಿದರು.

ವಿರಾಟ್ ಕೊಹ್ಲಿ ಶತಕ ಬಾರಿಸಿದ್ದು ಯಾರ ಮೇಲೆ?
ಐಸಿಸಿ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿರುವ ರಶೀದ್ ಖಾನ್.
ಐಸಿಸಿ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿರುವ ಮುಜೀಬ್ ಉರ್ ರೆಹಮಾನ್.
ಐಸಿಸಿ ಆಲ್‌ರೌಂಡರ್‌ಗಳ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಮೊಹಮ್ಮದ್ ನಬಿ.
ಐಸಿಸಿ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ 30ನೇ ಸ್ಥಾನದಲ್ಲಿರುವ ಫಜಲ್ ಫಾರೂಕಿಯ ಬೌಲರ್‌ಗಳ ಮೇಲೆ ಬ್ಯಾಟಿಂಗ್ ಸವಾರಿ ಮಾಡಿದರು ಎಂಬುದನ್ನು ಗಮನಿಸಬೇಕಾದ ಅಂಕಿಅಂಶವಾಗಿದೆ.
ಏಷ್ಯಾ ಕಪ್ ಪಂದ್ಯಾವಳಿಯು ಯುಎಇನಲ್ಲಿ ನಡೆಯುತ್ತಿದ್ದು, ಅಲ್ಲಿನ ಪಿಚ್ ಪರಿಸ್ಥಿತಿಗಳು ಯಾವುದೇ SENA(ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯ) ಬೌಲರ್‌ಗಳಿಗಿಂತ ಕಡಿಮೆಯೇನು ಇರಲಿಲ್ಲ ಮತ್ತು ಕಠಿಣವಾಗಿ ಹಾಕುತ್ತಿದ್ದರು. ಇನ್ನೊಂದು ವಿಷಯ ನೆನಪಿರಲಿ, ಅಫ್ಘಾನಿಸ್ತಾನ ತಂಡ ಗ್ರೂಪ್ ಹಂತದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳನ್ನು ಸೋಲಿಸಿತ್ತು.

ಅಭಿಮಾನಿಗಳ ಹೃದಯ ಗೆದ್ದ ಕೊಹ್ಲಿ
ಆದಾಗ್ಯೂ, ವಿಶೇಷ ಇನ್ನಿಂಗ್ಸ್‌ನೊಂದಿಗೆ ಶತಕೋಟಿ ಭಾರತೀಯ ಅಭಿಮಾನಿಗಳ ಹೃದಯವನ್ನು ಮೆಚ್ಚಿಸಿದ್ದು ವಿರಾಟ್ ಕೊಹ್ಲಿ, ಗುರುವಾರ ರಾತ್ರಿ ಅವರಿಗೆ ಸೇರಿತ್ತು. 61 ಎಸೆತಗಳಲ್ಲಿ ಅವರ ಅಜೇಯ ಶತಕವು ನವೆಂಬರ್ 2019ರಿಂದ ಈಚೆಗೆ ಅವರ ಮೊದಲ ಶತಕವಾಗಿದೆ ಮತ್ತು ಒಟ್ಟಾರೆ 71ನೇ ಶತಕವನ್ನು ಗಳಿಸಿದರು. ಆಸ್ಟ್ರೇಲಿಯ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಅಂತಾರಾಷ್ಟ್ರೀಯ ಶತಕಗಳ ಸಂಖ್ಯೆಯನ್ನು ಸಮಬಲಗೊಳಿಸಿದರು. ಅವರು ಈಗ ಸಾರ್ವಕಾಲಿಕ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ನಂತರ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಇದು ಅತಿ ಕಡಿಮೆ ಕ್ರಿಕೆಟ್ ಮಾದರಿಯಲ್ಲಿ ವಿರಾಟ್ ಕೊಹ್ಲಿ ಗಳಿಸಿದ ಚೊಚ್ಚಲ ಶತಕವೂ ಹೌದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications