
ವೀರೂ ಹೊಸ ರೀತಿಯ ಕ್ರಿಕೆಟ್ ವಿಶ್ಲೇಷಣೆ ಪ್ರಯೋಗ
ಸಾಮಾಜಿಕ ಜಾಲತಾಣಗಳಲ್ಲಿ ಅದ್ರಲ್ಲೂ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ವೀರೂ ಐಪಿಎಲ್ ಆರಂಭವಾದ ಮೇಲೆ ತಮ್ಮದೇ ಶೈಲಿಯಲ್ಲಿ ಕ್ರಿಕೆಟ್ ವಿಶ್ಲೇಷಣೆಯ ವೀಡಿಯೋಗಳನ್ನು ಹರಿಬಿಟ್ಟಿದ್ದಾರೆ. ಇವರ ಕಾರ್ಯಕ್ರಮಕ್ಕೆ ವೀರೂ ಬೈಟಕ್ ಎಂದೇ ಹೆಸರಿಸಲಾಗಿದ್ದು, ಅತ್ಯಂತ ವರ್ಣರಂಜಿತವಾಗಿ ಪಂದ್ಯದ ಪೂರ್ವ ಮತ್ತು ಪಂದ್ಯದ ಬಳಿಕ ವರದಿಯನ್ನು ಮಂಡಿಸುತ್ತಾರೆ.

ಕ್ರಿಕೆಟ್‌ಗೂ-ಸಿನಿಮಾಗೂ ನಂಟು ಮಾಡಿ ವೀರೂ ವಿಶ್ಲೇಷಣೆ
ಹೌದು, ಸೆಹ್ವಾಗ್‌ರ ವೀರೂ ಬೈಟಕ್ ಕಾರ್ಯಕ್ರಮ ತುಂಬಾನೇ ವಿಶೇಷವಾಗಿದ್ದು, ಸಾಕಷ್ಟು ವೀಕ್ಷಣೆಗೆ ಕಾರಣವಾಗಿದೆ. ಕ್ರಿಕೆಟ್ ವಿಶ್ಲೇಷಣೆಯನ್ನು ಸಿನಿಮಾದ ಹೆಸರಿಗೂ ಇಲ್ಲವೇ ನಟರಿಗೆ ನಂಟು ಮಾಡಿ ಮಾತನಾಡುವ ಸೆಹ್ವಾಗ್ ಮಾತು ಕೇಳೋಕೆ ತುಂಬಾನೆ ಚೆನ್ನಾಗಿದೆ.
ತುಂಬಾ ತಮಾಷೆಯಾಗಿ ತಮ್ಮ ಮಾತನ್ನು ಮಂಡಿಸುವ ಸೆಹ್ವಾಗ್ ಐಪಿಎಲ್‌ನಲ್ಲಿ ಆಡುತ್ತಿರುವ ಆಟಗಾರರಿಗೆ ತಮ್ಮದೇ ಆದ ವಿಶೇಷ ಪೆಟ್ ನೇಮ್ ಕೊಟ್ಟಿದ್ದಾರೆ.
ಗೆಲುವಿನ ಬಗ್ಗೆ ಒಂದು ದಿನ ಮೊದಲೇ ಶೇನ್ ವಾಟ್ಸನ್ ''Viral" ಟ್ವೀಟ್

ಸಿಎಸ್‌ಕೆ ಡೀಸೆಲ್ ಎಂಜಿನ್ ಕೊನೆಗೂ ಸ್ಟಾರ್ಟ್ ಆಯ್ತು ಎಂದ ಸೆಹ್ವಾಗ್
ಮೂರು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಸಿಂಗ್ಸ್ ಐಪಿಎಲ್ 13ನೇ ಆವೃತ್ತಿಯಲ್ಲಿ ಮೊದಲು ಒಂದು ಪಂದ್ಯ ಗೆದ್ದ ಬಳಿಕ ಹ್ಯಾಟ್ರಿಕ್ ಸೋಲನ್ನ ಕಂಡಿತ್ತು. ಆದರೆ ಭಾನುವಾರ (ಅಕ್ಟೋಬರ್ 04) ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವಿನ ಮೂಲಕ CSK ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ತಳ ಮುಟ್ಟಿದ್ದ ಸಿಎಸ್‌ಕೆ ಸ್ವಲ್ಪ ಸುಧಾರಿಸಿಕೊಂಡಿದೆ.
ಸಿಎಸ್‌ಕೆ ಭರ್ಜರಿ ಗೆಲುವಿನ ಬಳಿಕ ಸೆಹ್ವಾಗ್ ಸಿಎಸ್‌ಕೆ ಡೀಸೆಲ್ ಎಂಜಿನ್ ಕೊನೆಗೂ ಸ್ಟಾರ್ಟ್ ಆಯ್ತು ಎಂದು ಕರೆದಿದ್ದಾರೆ.

ಸಿಎಸ್‌ಕೆ ಡೀಸೆಲ್ ಎಂಜಿನ್ ಯಾರು?
ವೀರೂ ಸಿಎಸ್‌ಕೆ ಡೀಸೆಲ್ ಎಂಜಿನ್ ಅಂತ ಯಾರನ್ನ ಏಕೆ ಖರೀತಿದ್ರೂ ಎಂದು ಬಹುತೇಕರಿಗೂ ತಿಳಿದಿರ್ಲಿಲ್ಲ. ಆದರೆ ಸೆಹ್ವಾಗ್ ಬೈಟಕ್ ನೋಡೋರಿಗೆ ಚೆನ್ನಾಗಿ ತಿಳಿದಿರುತ್ತೆ. ಆತ ಬೇರೆ ಯಾರು ಅಲ್ಲ ಸಿಎಸ್‌ಕೆ ಓಪನರ್ ಶೇನ್ ವ್ಯಾಟ್ಸನ್
ಈ ಸೀಸನ್ ಆರಂಭದಿಂದಲೂ ರನ್‌ಗಳಿಸಲು ಹೆಣಗಾಡ್ತಿದ್ದ ಶೇನ್ ವ್ಯಾಟ್ಸನ್ ಕುರಿತು ಸಾಕಷ್ಟು ಟೀಕೆಗಳು ಎದುರಾಗಿತ್ತು. ವಿರೇಂದ್ರ ಸೆಹ್ವಾಗ್ ವ್ಯಾಟ್ಸನ್‌ಗೆ ಪೆಟ್ ನೇಮ್ ಆಗಿ ಡೀಸೆಲ್ ಎಂಜಿನ್ ಎಂದು ಹೆಸರಿಟ್ಟಿದ್ದರು. ಮತ್ತೊಬ್ಬ ಓಪನರ್ ಫಾಫ್ ಡುಪ್ಲೆಸಿಸ್‌ಗೆ 'ಸಂಭಾ' ಎಂದು ಕರೆಯುತ್ತಿದ್ದರು.

ಡೀಸೆಲ್ ಎಂಜಿನ್ ಸಖತ್ತಾಗೆ ಸೌಂಡ್ ಮಾಡ್ತಿದೆ!
ಕೆ.ಎಲ್ ರಾಹುಲ್ ಟೀಮ್ ಭಾನುವಾರ ನೀಡಿದ 179 ರನ್ ಟಾರ್ಗೆಟ್ ಬೆನ್ನತ್ತಿದ ಸಿಎಸ್‌ಕೆ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿದು. ಈ ಪಂದ್ಯದಲ್ಲಿ ಶೇನ್ ವ್ಯಾಟ್ಸನ್ 53 ಎಸೆತಗಳಲ್ಲಿ ಅಜೇಯ 83 ರನ್ ಸಿಡಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು ಮೂರು ಭರ್ಜರಿ ಸಿಕ್ಸರ್‌ಗಳಿದ್ದವು.
ಇವರ ಇನ್ನಿಂಗ್ಸ್ ಆಟಕ್ಕೆ ಸೆಹ್ವಾಗ್ ಕೊನೆಗೂ ಡೀಸೆಲ್ ಎಂಜಿನ್ ಸ್ಟಾರ್ಟ್ ಆಯ್ತು ಎಂದು ಹೇಳುವ ಮೂಲಕ ಸಿಎಸ್‌ಕೆ ಅಬ್ಬರಿಸೋಕೆ ಸಿದ್ಧವಾಯ್ತು ಎಂದು ಹೇಳಿದ್ದಾರೆ.
"ಸೆಪ್ಟೆಂಬರ್ 19 ರಿಂದ ಪ್ರಾರಂಭಿಸಲು ಪ್ರಯತ್ನಿಸುತ್ತಿರುವ ಮೂಲಕ, ಡೀಸೆಲ್ ಎಂಜಿನ್ ವ್ಯಾಟ್ಸನ್ ಅಂತಿಮವಾಗಿ ಪ್ರಾರಂಭವಾಯಿತು. ಅವರು ಮತ್ತು ‘ಸಂಭಾ' ಫಾಫ್ ಡು ಪ್ಲೆಸಿಸ್ ಒಟ್ಟಿಗೆ ಸೇರಿಕೊಂಡು ಪಂಜಾಬಿ ಹುಡುಗರನ್ನು ಕ್ರೀಡಾಂಗಣದ ಪ್ರವಾಸಕ್ಕೆ ಕರೆದೊಯ್ದು ಚೆಂಡನ್ನು ಎಲ್ಲೆಡೆ ಹೊಡೆದರು "ಎಂದು ಸೆಹ್ವಾಗ್ ಅವರು ತಮ್ಮ ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.
ಸೆಹ್ವಾಗ್ ಈ ರೀತಿಯ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಗಿ ಪ್ರತಿಕ್ರಿಯೆ ಬಂದಿದೆ.


Click it and Unblock the Notifications











