ರೋಹಿತ್, ಕೊಹ್ಲಿ ಕೂಡ ಈ ಬೌಲರ್ ವಿರುದ್ಧ ಆಡಲು ಹಿಂಜರಿಯುತ್ತಾರೆ ಎಂದ ದಿನೇಶ್ ಕಾರ್ತಿಕ್!

ಟೀಂ ಇಂಡಿಯಾದಲ್ಲಿ ಸದ್ಯ ಅತ್ಯುತ್ತಮ ವೇಗದ ಬೌಲರ್ ಗಳು ಇದ್ದಾರೆ. ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಭಾರತ ತಂಡದ ಹಿರಿಯ ಮತ್ತು ಅನುಭವಿ ವೇಗಿಗಳಾಗಿದ್ದಾರೆ. ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಉಮ್ರಾನ್ ಮಲಿಕ್ ಭಾರತ ತಂಡದಲ್ಲಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವಂತೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಭಾರತ ತಂಡದಲ್ಲಿರುವ ಈ ಬೌಲರ್ ಕಂಡರೆ ಭಾರತೀಯ ಬ್ಯಾಟರ್ ಗಳೇ ಭಯಪಡುತ್ತಾರೆ. ನೆಟ್ಸ್‌ನಲ್ಲಿ ಆತನ ವಿರುದ್ಧ ಹಿಂಜರಿಯುತ್ತಾರೆ. ಈ ಬಗ್ಗೆ ದಿನೇಶ್ ಕಾರ್ತಿಕ್ ಮಾತನಾಡಿದ್ದಾರೆ.
ನೆಟ್ಸ್‌ನಲ್ಲಿ ಎದುರಿಸಿದ ಕಠಿಣ ಬೌಲರ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ದಿನೇಶ್ ಕಾರ್ತಿಕ್, ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿಯನ್ನು ಅತ್ಯಂತ ಕಠಿಣ ಬೌಲರ್ ಎಂದು ಕರೆದಿದ್ದಾರೆ. ಅಲ್ಲದೆ ನೆಟ್ಸ್‌ನಲ್ಲಿ ಶಮಿ ವಿರುದ್ಧ ಆಡುವುದು ಹಿಂಸೆ ಎಂದು ಹೇಳಿದ್ದಾರೆ.
ದಿನೇಶ್ ಕಾರ್ತಿಕ್ ಮಾತ್ರವಲ್ಲದೆ ಭಾರತದ ಸ್ಟಾರ್ ಬ್ಯಾಟರ್ ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಆಡುವುದನ್ನು ಇಷ್ಟಪಡುವುದಿಲ್ಲ ಎನ್ನುವ ಆಸಕ್ತಿಕರ ವಿಚಾರ ಹಂಚಿಕೊಂಡಿದ್ದಾರೆ. ಆತನ ವಿರುದ್ಧ ನೆಟ್ಸ್‌ನಲ್ಲಿ ಆಡಲು ತುಂಬಾ ಕಷ್ಟವಾಗುತ್ತದೆ ಎನ್ನುವುದನ್ನು ದಿನೇಶ್ ಕಾರ್ತಿಕ್ ಒಪ್ಪಿಕೊಂಡಿದ್ದಾರೆ.

ಶಮಿ ಅಪಾಯಕಾರಿ ಬೌಲರ್
ಕ್ರಿಕ್‌ಬಜ್‌ನಲ್ಲಿನ 'ರೈಸ್ ಆಫ್ ನ್ಯೂ ಇಂಡಿಯಾ' ಶೋನಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್ ತಾವು ನೆಟ್ಸ್‌ನಲ್ಲಿ ಎದುರಿಸಿದ ಕಠಿಣ ಬೌಲರ್ ಯಾರು ಎನ್ನುವ ಪ್ರಶ್ನಗೆ ಶಮಿಯನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೆ ನೆಟ್ಸ್‌ನಲ್ಲಿ ಶಮಿಯನ್ನು ಎದುರಿಸುವ ಕೆಲಸವನ್ನು ಹಿಂಸೆ ಎಂದು ಕರೆದಿದ್ದಾರೆ.
"ನನಗೊಬ್ಬನಿಗೆ ಮಾತ್ರವಲ್ಲ ರೋಹಿತ್ ಮತ್ತು ವಿರಾಟ್ ಕೂಡ ಆತನ ಬೌಲಿಂಗ್‌ನಲ್ಲಿ ಆಡುವುದನ್ನು ದ್ವೇಷಿಸುತ್ತಾರೆ. ಶಮಿ ತಮ್ಮ ಕರಾರುವಕ್ಕಾದ ಬೌಲಿಂಗ್‌ನಿಂದ ಆ ರೀತಿ ಕಾಡುತ್ತಾರೆ" ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಟಾರ್ಚರ್ ಶಮಿ ಎಂದ ಡಿಕೆ
"ನಾನು ಮೊಹಮ್ಮದ್ ಶಮಿಗೆ ಒಂದು ಪದವನ್ನು ಬಳಸಬೇಕು ಎಂದಾದರೆ ಅದು 'ಟಾರ್ಚರ್ ಶಮಿ' ಆಗಿರುತ್ತದೆ. ಏಕೆಂದರೆ ನನ್ನ ಇಡೀ ವೃತ್ತಿಜೀವನದಲ್ಲಿ ನೆಟ್ಸ್‌ನಲ್ಲಿ ಎದುರಿಸಿದ ಅತ್ಯಂತ ಕಠಿಣ ಬೌಲರ್. ಅವರು ಪಂದ್ಯಗಳಲ್ಲೂ ನನ್ನನ್ನು ಒಂದೆರಡು ಔಟ್ ಮಾಡಿದ್ದಾರೆ" ಎಂದು ಹೇಳಿದ್ದಾರೆ.
"ಅವರ ಬೌಲಿಂಗ್‌ನಲ್ಲಿ ನೆಟ್ಸ್‌ನಲ್ಲಿ ಆಡುವುದನ್ನು ನಾನೊಬ್ಬನೆ ದ್ವೇಷಿಸುತ್ತೇನೆ ಎಂದುಕೊಂಡಿದ್ದೆ, ಆದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಕೇಳಿದೆ ಅಂತಹ ದಿಗ್ಗಜ ಬ್ಯಾಟರ್ ಗಳು ಕೂಡ ಶಮಿ ವಿರುದ್ಧ ನೆಟ್ಸ್‌ನಲ್ಲಿ ಆಡಲು ಹಿಂಜರಿಯುತ್ತಾರೆ" ಎಂದು ಹೇಳಿದರು.
"ಮೊಹಮ್ಮದ್ ಶಮಿ ಯಾವಾಗಲೂ ತಮ್ಮ ಸಾಮರ್ಥ್ಯಗಳನ್ನು ಬಳಸಿಕೊಂಡು ನೆಟ್ಸ್‌ನಲ್ಲಿ ಪೂರ್ಣ ಶಕ್ತಿಯಿಂದ ಬೌಲಿಂಗ್ ಮಾಡುತ್ತಾರೆ" ಎಂದು ದಿನೇಶ್ ಕಾರ್ತಿಕ್ ಹೇಳಿದರು.

ಶಮಿ ವಿರುದ್ಧ ಆಡುವುದು ಕಷ್ಟ
ಮೊಹಮ್ಮದ್ ಶಮಿ ಲೈನ್ ಮತ್ತು ಲೆಂಗ್ತ್ ಪ್ರಮುಖ ಅಸ್ತ್ರವಾಗಿದೆ. ಅವರು ಎಲ್ಲಾ ಶಕ್ತಿಯನ್ನು ಬಳಸಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಾರೆ. ಅವರು ತಮ್ಮ ಲೆಂಗ್ತ್‌ನಿಂದ ಬ್ಯಾಟರ್ ಗಳನ್ನು ಹೆಚ್ಚಿನದಾಗಿ ಕಾಡುತ್ತಾರೆ. ಅವರು ವಿಕೆಟ್ ಪಡೆಯುವುದು ಕಡಿಮೆಯಾದರು ಅವರ ವಿರುದ್ಧ ಸುಲಭವಾಗಿ ರನ್ ಗಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.
"ವೇಗದ ಬೌಲರ್ ಚೆಂಡನ್ನು ಬಿಡುಗಡೆ ಮಾಡಿದಾಗ ರೆವ್‌ಗಳು 1000 ಆರ್‌ಪಿಎಮ್‌ಗೆ ಹತ್ತಿರದಲ್ಲಿರುತ್ತದೆ. ಆದರೆ ಮೊಹಮ್ಮದ್ ಶಮಿಗೆ 1500-1600 ರ ಸಮೀಪದಲ್ಲಿದೆ. ಇದು ಅವರ ವಿಶೇಷತೆಯಾಗಿದೆ. ಅಷ್ಟು ಪ್ರಮಾಣದ ಬ್ಯಾಕ್ಸ್-ಸ್ಪಿನ್ ಹೊಂದಿರುವಾಗ, ಅವರ ವಿರುದ್ಧ ಆಡುವುದು ಸುಲಭವಲ್ಲ" ಎಂದು ದಿನೇಶ್ ಕಾರ್ತಿಕ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications