For Quick Alerts
ALLOW NOTIFICATIONS  
For Daily Alerts
 

IPL 2024: ನಿವೃತ್ತಿಯ ಸುಳಿವು ನೀಡಿದ ಆರ್‌ಸಿಬಿ ತಂಡದ ಮ್ಯಾಚ್ ಫಿನಿಶರ್‌

ಚೆನ್ನೈನ ಎಂ ಚಿದಂಬರಂ ಕ್ರೀಡಾಗಣದಲ್ಲಿ ನಡೆದ ಸಿಎಸ್‌ಕೆ ಹಾಗೂ ಆರ್‌ಸಿಬಿ ಪಂದ್ಯದಲ್ಲಿ ಆತಿಥೇಯ ರುತುರಾಜ್ ಗಾಯಕ್ವಾಡ್‌ ಮುಂದಾಳತ್ವದ ತಂಡ ಗೆಲುವಿನ ಖಾತೆ ತೆರೆದಿದೆ. ಆರ್‌ಸಿಬಿ ಮೊದಲ ಸೋಲು ಕಂಡಿದೆ. 17ನೇ ಆವೃತ್ತಿಯ ಬಳಿಕ ಹಲವು ಆಟಗಾರರು ನಿವೃತ್ತಿ ಹೇಳಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿದೆ. ಈ ಬಗ್ಗೆ ಆರ್‌ಸಿಬಿಯ ಸ್ಟಾರ್‌ ಫಿನಿಶರ್‌ ಒಬ್ಬರು ಸುಳಿವು ನೀಡಿದ್ದಾರೆ.

ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ಮೊದಲು ಬ್ಯಾಟ್ ಮಾಡಿತು. ದಿನೇಶ್‌ ಕಾರ್ತಿಕ್‌ ಹಾಗೂ ಅನುಜ್ ರಾವತ್‌ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 173 ರನ್‌ ಕಲೆ ಹಾಕಿತು. ಇದಕ್ಕುತ್ತರವಾಗಿ ಸಿಎಸ್‌ಕೆ 18.4 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 176 ರನ್‌ ಸೇರಿಸಿ ಜಯ ಸಾಧಿಸಿತು. ಅಲ್ಲದೆ ಪೂರ್ಣ ಅಂಕವನ್ನು ಕಲೆ ಹಾಕಿತು.

Dinesh Karthik s Reflective Statement on Retirement Surfaces After RCB s Loss to CSK

ಹೀಗೆ ಹೇಳಿದ್ದು ಯಾರು?

ಕೊನೆಯ ಐಪಿಎಲ್ ಸೀಸನ್ ಆಗಿರಬಹುದು ಎಂದು ಪಂದ್ಯದ ನಂತರ ತಮ್ಮ ಹೇಳಿದ್ದಾರೆ. ಚೆಪಾಕ್ ಸ್ಟೇಡಿಯಂನಲ್ಲಿ ಇದು ಅವರ ಕೊನೆಯ ಪಂದ್ಯವಾಗಬಹುದು, ತಮ್ಮ ತಂಡ ಪ್ಲೇ ಆಫ್ ತಲುಪಿದರೆ ಮತ್ತು ಇಲ್ಲಿ ಪಂದ್ಯ ನಡೆದರೆ, ಆ ಸಂದರ್ಭದಲ್ಲಿ ಈ ಮೈದಾನದಲ್ಲಿ ಆಡುವ ಅವಕಾಶ ಸಿಗುತ್ತದೆ ಎಂದು ದಿನೇಶ್‌ ಕಾರ್ತಿಕ್ ಹೇಳಿದ್ದಾರೆ.

ಸಿಕ್ಕ ಸಮಯದಲ್ಲಿ ಕಷ್ಟಪಟ್ಟಿದ್ದೇನೆ. ಹಾಗಾಗಿ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದೆ. ಕೆಲವು ರನ್ ಗಳಿಸಿದ ನಂತರ ಉತ್ತಮವಾಗಿ ರನ್‌ ಕಲೆ ಹಾಕುವ ಸೂಚನೆ ಸಿಕ್ಕಿತು. ನಮ್ಮ ತಂಡವು ಈ ಬಾರಿ ಪ್ಲೇಆಫ್‌ಗೆ ತಲುಪುವಲ್ಲಿ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವಿದೆ. ಪ್ಲೇಆಫ್ ಪಂದ್ಯಗಳನ್ನು ಇಲ್ಲಿ ಆಡಲಾಗುತ್ತದೆ. ಆರ್‌ಸಿಬಿ ಮುಂದಿನ ಹಂತಕ್ಕೆ ತಲುಪಿದರೆ, ಚೆನ್ನೈ ತಂಡದಲ್ಲಿ ಆಡಬಹುದು. ನೆಚ್ಚಿನ ಅಂಗಳದಲ್ಲಿ ಆಡಿದ ಅನುಭವ ಅಪಾರ. ಈ ಮೈದಾನದಲ್ಲಿ ಆಡುವುದು ತುಂಬ ಖುಷಿ ನೀಡುತ್ತದೆ ಎಂದು ದಿನೇಶ್ ತಿಳಿಸಿದ್ದಾರೆ.

ದಿನೇಶ್‌ ಕಾರ್ತಿಕ್‌ ಐಪಿಎಲ್‌ನಲ್ಲಿ ಆರು ತಂಡಗಳ ಪರ ಆಡಿದ್ದಾರೆ. ಆರ್‌ಸಿಬಿ ಇವರಿಗೆ ಮ್ಯಾಚ್‌ ಫಿನಿಶರ್‌ ಪಾತ್ರವನ್ನು ನೀಡಿದೆ. ಈ ಜವಾಬ್ದಾರಿಯನ್ನು ದಿನೇಶ್‌ ಯಶಸ್ವಿಯಾಗಿ ನಿಭಾಯಿಸಿದ್ದಾರೆ. 2022ರಲ್ಲಿ ನೀಡಿದ ಅದ್ಭುತ ಪ್ರದರ್ಶನದ ಫಲವಾಗಿಯೇ ಮತ್ತೇ ಇವರಿಗೆ ಬ್ಲ್ಯೂ ಜೆರ್ಸಿ ತೊಡುವ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಅವರು ಭಾರತದ ಪರ ಹಲವು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ.

ಚೆನ್ನೈ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 26 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 38 ರನ್ ಬಾರಿಸಿ ತಂಡಕ್ಕೆ ನೆರವಾದರು. ಅಲ್ಲದೆ ಆರ್‌ಸಿಬಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ನೆರವಾದರು.

ಹೇಗಿದೆ ಐಪಿಎಲ್‌ನಲ್ಲಿ ಪ್ರದರ್ಶನ

2022ರ ಹರಾಜಿನಲ್ಲಿ ಆರ್‌ಸಿಬಿ ಈ ಸ್ಟಾರ್ ಆಟಗಾರನನ್ನು 5.5 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಆ ಋತುವಿನಲ್ಲಿ ದಿನೇಶ್‌ ಆಡಿದ 16 ಪಂದ್ಯಗಳಲ್ಲಿ 330 ರನ್‌ ಗಳಿಸಿದರೆ, 2023ರಲ್ಲಿ ಆಡಿದ 13 ಪಂದ್ಯಗಳಲ್ಲಿ 140 ರನ್‌ ಸಿಡಿಸಿದ್ದಾರೆ. ಒಟ್ಟಾರೆ ಐಪಿಎಲ್‌ನಲ್ಲಿ 243 ಪಂದ್ಯಗಳಲ್ಲಿ 4554 ರನ್‌ ಸಿಡಿಸಿದ್ದಾರೆ. ಇದರಲ್ಲಿ 442 ಬೌಂಡರಿ, 141 ಸಿಕ್ಸರ್ ಸೇರಿವೆ.

Story first published: Saturday, March 23, 2024, 15:59 [IST]
Other articles published on Mar 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+