ವಿರಾಟ್ ಕೊಹ್ಲಿ ಜೀವನದಲ್ಲಿ ಎಲ್ಲವನ್ನೂ ಸಾಧಿಸಿ ಬಿಟ್ಟೆ ಎಂದು ಭಾವಿಸಿದ್ದಾರೆಯೇ? ಶಾಹಿದ್ ಅಫ್ರಿದಿ ಪ್ರಶ್ನೆ

ಒಂದು ಕಾಲದಲ್ಲಿ ವಿರಾಟ್ ಕೊಹ್ಲಿ ಎಂಬ ಹೆಸರು ವಿಶ್ವ ಕ್ರಿಕೆಟ್‌ನ ದಿಗ್ಗಜ ವೇಗಿಗಳ ನಿದ್ದೆಗೆಡಿಸಿತ್ತು. ಸಾಮಾನ್ಯವಾಗಿ ರನ್ ಚೇಸ್ ಮಾಡುವಾಗ ತಡಬಡಾಯಿಸುವ ಬ್ಯಾಟ್ಸ್‌ಮನ್‌ಗಳಿಗೆ ಕೊಹ್ಲಿ ತದ್ವಿರುದ್ಧ. ಸಿಂಹ ಜಿಂಕೆಯನ್ನು ಹಿಂಬಾಲಿಸಿದಂತೆ ಗೆಲುವಿನತ್ತ ದಾಪುಗಾಲಿಡುತ್ತಿರುವ ಕೊಹ್ಲಿ ಬ್ಯಾಟಿಂಗ್ ನಡೆ ಕ್ರಿಕೆಟ್ ಅಭಿಮಾನಿಗಳನ್ನು ಸಂಭ್ರಮದ ಉತ್ತುಂಗಕ್ಕೆ ಕೊಂಡೊಯ್ಯುತ್ತಿತ್ತು.
ಆದರೆ ಕಳೆದ ಮೂರು ವರ್ಷಗಳಲ್ಲಿ ಕೊಹ್ಲಿಯ ಪ್ರದರ್ಶನವನ್ನು ನೋಡಿದರೆ ಗ್ರಾಫ್ ಕುಸಿಯುತ್ತಿದೆ. ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಸಾಧನೆ ಮಾಡಲು ಕೊಹ್ಲಿ ಅಸಮರ್ಥರಾಗಿದ್ದಾರೆ. ಕೊಹ್ಲಿಗೆ ಹಳೆಯ ನಿಖರತೆ ಅಥವಾ ಟೈಮಿಂಗ್ ಕೂಡ ಇಲ್ಲ. ಆಕ್ರಮಣಶೀಲತೆಯನ್ನೂ ತೋರಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಕೊಹ್ಲಿ ಫಾರ್ಮ್ ಬಗ್ಗೆ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಆಲ್ ರೌಂಡರ್ ಶಾಹಿದ್ ಅಫ್ರಿದಿ ಮಾತನಾಡಿದ್ದಾರೆ.

ಕೊಹ್ಲಿ ಮತ್ತೆ ನಂಬರ್ ಒನ್ ಆಗುವುದೇ ಅನುಮಾನ!
ಹಳೆಯ ಕೊಹ್ಲಿ ಈಗಿಲ್ಲ ಮತ್ತು ಅವರು ಮೊದಲಿನಂತೆ ಈಗ ನಂಬರ್ ಒನ್ ತಲುಪಲು ಬಯಸುತ್ತಾರೆಯೇ ಎಂಬ ಅನುಮಾನವೂ ಇದೆ ಎಂದು ಆಫ್ರಿದಿ ಪ್ರತಿಕ್ರಿಯಿಸಿದ್ದಾರೆ.
''ಕ್ರಿಕೆಟ್‌ನಲ್ಲಿ ವರ್ತನೆ(Attitude) ಬಹಳ ಮುಖ್ಯ. ಅದನ್ನೇ ನಾನು ಹೆಚ್ಚು ಮಾತನಾಡುತ್ತೇನೆ. ಈ ಹಿಂದೆ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ನಂಬರ್ ಒನ್ ಆಗಲು ಪ್ರಯತ್ನಿಸುತ್ತಿದ್ದರು. ಅವರು ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಲು ಬಯಸಿದ್ದರು. ಆದರೆ ಈಗ ಅದೇ ಧೋರಣೆಯಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆಯೇ? ಎಂಬುದು ಮುಖ್ಯವಾದ ಪ್ರಶ್ನೆ. ಅವನಲ್ಲಿ ಪ್ರತಿಭೆ ಇದೆ. ಅವರು ಮೊದಲಿನಂತೆ ಈಗ ನಂಬರ್ ಒನ್ ಆಗಲು ಬಯಸುತ್ತಾರೆಯೇ? ಅಥವಾ ನೀವು ಎಲ್ಲವನ್ನೂ ಸಾಧಿಸಿದ್ದೀರಿ ಎಂದು ಭಾವಿಸಿದ್ದಾರೆಯೇ ಆತನ ವರ್ತನೆ ಎಲ್ಲವನ್ನೂ ನಿರ್ಧರಿಸುತ್ತದೆ" ಎಂದು ಅಫ್ರಿದಿ ಹೇಳಿದರು.
ನನಗೀಗ ವಯಸ್ಸಾಗಿದೆ ಎಂದ ಚಾಹಲ್: ಹೊಸ ಸೆಲೆಬ್ರೇಶನ್ ಬಗ್ಗೆ ಯುಜಿ ಹೇಳಿದ್ದಿಷ್ಟು!

ಕೊಹ್ಲಿ ಶತಕ ಸಿಡಿಸಿ ವರ್ಷಗಳೇ ಕಳೆದು ಹೋಗಿದೆ.
ಏಕದಿನ ಕ್ರಿಕೆಟ್‌ನಲ್ಲಿ 43 ಶತಕ ದಾಖಲಿಸಿರುವ ವಿರಾಟ್ ಕೊಹ್ಲಿ ಸಚಿನ್ ದಾಖಲೆ ಮುರಿಯುತ್ತಾರೆ ಎಂದೆಲ್ಲಾ ಭವಿಷ್ಯ ನುಡಿದಿದ್ರು. ಆದ್ರೆ ವಿರಾಟ್ ಶತಕ ದಾಖಲಿಸಿ ಮೂರು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ.
ಕಳೆದ ಮೂರು ವರ್ಷಗಳಲ್ಲಿ ನಾನು ಕೊಹ್ಲಿಯನ್ನು ಹಳೆಯ ವೈಭವದಿಂದ ನೋಡಲೂ ಸಾಧ್ಯವಾಗಿಲ್ಲ ಎಂಬುದು ಸತ್ಯ. ಕೊಹ್ಲಿ ಮತ್ತೊಮ್ಮೆ ಕಮ್ ಬ್ಯಾಕ್ ಮಾಡಲು ಸಾಧ್ಯವೇ ಎಂಬುದನ್ನು ಕಾದು ನೋಡಬೇಕಿದೆ. ಟಿ20 ವಿಶ್ವಕಪ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೊಹ್ಲಿ ಬ್ಯಾಟಿಂಗ್ ಮೇಲೆ ಭಾರತ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ ಅವರ ಇತ್ತೀಚಿನ ಪ್ರದರ್ಶನ ಈ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿದೆ ಎಂದು ಅಫ್ರಿದಿ ಹೇಳಿದ್ದಾರೆ.
ರಿಷಭ್ ಪಂತ್ ಬ್ಯಾಟಿಂಗ್ ಕುರಿತು ಬಹುಮುಖ್ಯವಾದ ಸಲಹೆ ನೀಡಿದ ಸುನಿಲ್ ಗವಾಸ್ಕರ್

ಕೊಹ್ಲಿಗೆ ವಿಶ್ರಾಂತಿ ನೀಡಬೇಕೆಂದು ಸಲಹೆ ನೀಡಿದ್ದರು
ಕೊಹ್ಲಿಯ ಕೆಟ್ಟ ಫಾರ್ಮ್‌ನಲ್ಲಿ ಅನೇಕ ಪ್ರಮುಖ ಆಟಗಾರರು ಅವರಿಗೆ ಹಲವಾರು ಸಲಹೆಗಳನ್ನು ನೀಡಿದ್ದರು. ಭಾರತ ತಂಡದ ಮಾಜಿ ನಾಯಕ ಹಾಗೂ ಕೋಚ್ ರವಿಶಾಸ್ತ್ರಿ ಹಾಗೂ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಬ್ರೆಟ್ ಲೀ ಕೊಹ್ಲಿಗೆ ವಿಶ್ರಾಂತಿ ನೀಡುವಂತೆ ಕೇಳಿಕೊಂಡಿದ್ದಾರೆ. ಕೊಹ್ಲಿಗೆ ಮಾನಸಿಕ ವಿಶ್ರಾಂತಿ ಅಗತ್ಯವಿದೆ ಎಂದಿದ್ದರು.
ಕೊಹ್ಲಿ ಸದ್ಯ ದಕ್ಷಿಣ ಆಫ್ರಿಕಾ ಸರಣಿಯಿಂದ ವಿಶ್ರಾಂತಿ ಪಡೆದಿದ್ದು, ಇಂಗ್ಲೆಂಡ್ ಪ್ರವಾಸದಲ್ಲಿ ಸೇರ್ಪಡೆಗೊಂಡಿದ್ದಾರೆ. ಕೊಂಚ ವಿಶ್ರಾಂತಿಯ ಬಳಿಕ ವಾಪಸಾಗುತ್ತಿರುವ ಕೊಹ್ಲಿ ಬಲಿಷ್ಠ ಪುನರಾಗಮನ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಅದೇನೇ ಇರಲಿ, ಕೊಹ್ಲಿಯ ಬಲಿಷ್ಠ ಪುನರಾಗಮನವನ್ನು ನೋಡಲು ಕ್ರಿಕೆಟ್ ಜಗತ್ತು ಕಾಯುತ್ತಿದೆ. ಹಳೇ ವೈಭವದೊಂದಿಗೆ ಶತಕ ಬಾರಿಸಿ ಬ್ಯಾಟ್ ಎತ್ತಲು ಕೊಹ್ಲಿಗೆ ಸಾಧ್ಯವಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications