Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನ್ಯೂಜಿಲೆಂಡ್‌ಗೆ ಅನುಕೂಲ ಹೆಚ್ಚು ಎನ್ನುವವರು ಯಾವುದೇ ಕಾರಣಕ್ಕೂ ವಿಮಾನ ಹತ್ತಬೇಡಿ ಎಂದಿದ್ದ ವಿರಾಟ್ ಕೊಹ್ಲಿ!

Don’t board the flight if you think New Zealand have an extra edge in the finals says Virat Kohli
ನ್ಯೂಜಿಲೆಂಡ್ ಸ್ಟ್ರಾಂಗ್ ಅಂತೆ ಅಂದಿದ್ದಕ್ಕೆ ಕೋಪಗೊಂಡ ಕೊಹ್ಲಿ | Oneindia kannada

ಜೂನ್ 18ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಆಗಸ್ಟ್ 4ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಟೀಮ್ ಇಂಡಿಯಾ ಈಗಾಗಲೇ ಸೌತಂಪ್ಟನ್ ತಲುಪಿದೆ.

ನೋಡಿ, ಆತನೇ ಬೇರೆ ನಾನೇ ಬೇರೆ; ಕೊಹ್ಲಿ ಜೊತೆ ಹೋಲಿಕೆ ಮಾಡುವವರಿಗೆ ಬಾಬರ್ ಅಜಮ್ ಹೇಳಿದ್ದಿಷ್ಟು

ಜೂನ್ 18ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾಭಿಮಾನಿಗಳು, ಕ್ರಿಕೆಟ್ ಪಂಡಿತರು ಹಾಗೂ ಮಾಜಿ ಕ್ರಿಕೆಟಿಗರು ಯಾವ ತಂಡ ಗೆಲುವು ಸಾಧಿಸಲಿದೆ ಮತ್ತು ಯಾವ ಆಟಗಾರರು ಮಿಂಚಲಿದ್ದಾರೆ ಎಂಬ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ.

ಐಪಿಎಲ್ 2022: ಹೊಸ ತಂಡಗಳಾಗಿ ಸೇರ್ಪಡೆಯಾಗಬಹುದಾದ 5 ನಗರಗಳು

ಇನ್ನು ಟೀಮ್ ಇಂಡಿಯಾ ತಂಡದ ಆಟಗಾರರು ಈಗಾಗಲೇ ಸೌತಾಂಪ್ಟನ್ ತಲುಪಿದ್ದು ವಿಮಾನ ಹತ್ತುವ ಮುನ್ನ ನಾಯಕ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿ ಪತ್ರಿಕಾ ಗೋಷ್ಠಿಯೊಂದನ್ನು ನಡೆಸಿ ಪ್ರವಾಸದ ಕುರಿತು ಮಾತನಾಡಿದರು. ಈ ವೇಳೆ ವಿರಾಟ್ ಕೊಹ್ಲಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಟೀಮ್ ಇಂಡಿಯಾಗಿಂತ ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚಿನ ಅನುಕೂಲವಿದೆ ಎನ್ನುವ ವಿಚಾರದ ಕುರಿತು ಪ್ರತಿಕ್ರಿಯಿಸಿದರು. ಈ ವಿಷಯದ ಕುರಿತು ವಿರಾಟ್ ಕೊಹ್ಲಿ ಈ ಕೆಳಕಂಡ ಅಂಶವನ್ನು ಹಂಚಿಕೊಂಡಿದ್ದಾರೆ..

ನ್ಯೂಜಿಲೆಂಡ್‌ಗೆ ಅನುಕೂಲ ಹೆಚ್ಚಿದೆ ಎನ್ನುವವರು ವಿಮಾನ ಹತ್ತಲೇಬೇಡಿ

ನ್ಯೂಜಿಲೆಂಡ್‌ಗೆ ಅನುಕೂಲ ಹೆಚ್ಚಿದೆ ಎನ್ನುವವರು ವಿಮಾನ ಹತ್ತಲೇಬೇಡಿ

ಪತ್ರಿಕಾಗೋಷ್ಠಿಯ ವೇಳೆ ಕೆಲ ದಿನಗಳಿಂದ ಭಾರತ ತಂಡಕ್ಕಿಂತ ಇಂಗ್ಲೆಂಡ್ ನೆಲದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚಿನ ಅನುಕೂಲವಿದೆ ಎಂಬ ಚರ್ಚೆ ನಡೆಯುತ್ತಿದ್ದು ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಎಂಬ ಪ್ರಶ್ನೆಯನ್ನು ವಿರಾಟ್ ಎದುರಿಸಿದರು. ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ವಿರಾಟ್ ಕೊಹ್ಲಿ ನಮಗಿಂತ ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚಿನ ಅನುಕೂಲ ಇದೆ ಎನ್ನುವವರು ಯಾವುದೇ ಕಾರಣಕ್ಕೂ ವಿಮಾನ ಹತ್ತಲೇಬಾರದು ಎಂದು ಉತ್ತರಿಸಿದರು.

ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚಿನ ಅನುಕೂಲ ಇದೆ ಎನ್ನಲು ಕಾರಣ

ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚಿನ ಅನುಕೂಲ ಇದೆ ಎನ್ನಲು ಕಾರಣ

ಭಾರತಕ್ಕಿಂತ ನ್ಯೂಜಿಲೆಂಡ್ ತಂಡಕ್ಕೆ ಇಂಗ್ಲೆಂಡ್ ನೆಲದಲ್ಲಿ ಹೆಚ್ಚಿನ ಅನುಕೂಲ ಇದೆ ಎಂದು ಸುದ್ದಿ ಹಬ್ಬಲು ಕಾರಣ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ನೆಲದಲ್ಲಿ ನ್ಯೂಜಿಲೆಂಡ್ ತಂಡ ಆಡುತ್ತಿರುವ ಆ 2 ಟೆಸ್ಟ್ ಪಂದ್ಯಗಳು. ಹೌದು ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ 2 ಟೆಸ್ಟ್ ಪಂದ್ಯಗಳನ್ನಾಡುತ್ತಿದೆ ಹಾಗೂ ಟೀಮ್ ಇಂಡಿಯಾ ಯಾವುದೇ ಪಂದ್ಯಗಳನ್ನು ಆಡದೇ ನೇರವಾಗಿ ಇಂಗ್ಲೆಂಡ್ ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನಾಡಲಿದ್ದು, ಟೀಂ ಇಂಡಿಯಾಗಿಂತ ನ್ಯೂಜಿಲೆಂಡ್ ತಂಡ ಹೆಚ್ಚಿನ ಅನುಕೂಲವನ್ನು ಹೊಂದಿದೆ ಎಂಬ ಚರ್ಚೆಗಳು ನಡೆದಿದ್ದವು.

ನಮ್ಮ ತಂಡ ಯಾರಿಗೂ ಕಡಿಮೆಯಿಲ್ಲ ಎಂದ ವಿರಾಟ್ ಕೊಹ್ಲಿ

ನಮ್ಮ ತಂಡ ಯಾರಿಗೂ ಕಡಿಮೆಯಿಲ್ಲ ಎಂದ ವಿರಾಟ್ ಕೊಹ್ಲಿ

ಇದೇ ವೇಳೆ ಮಾತನಾಡಿದ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಅತ್ಯುತ್ತಮ ಆಟಗಾರರಿಂದ ಕೂಡಿದ್ದು ಬಲಿಷ್ಠವಾಗಿದೆ. ಈ ಹಿಂದೆ ನಡೆದ ಹಲವಾರು ಸರಣಿಗಳಲ್ಲಿ ಸರಣಿಗೆ ಕೇವಲ ಎರಡು, ಮೂರು ದಿನಗಳು ಬಾಕಿ ಇರುವಾಗ ವಿದೇಶಗಳನ್ನು ತಲುಪಿ ಉತ್ತಮ ಪ್ರದರ್ಶನ ನೀಡಿದ ಉದಾಹರಣೆಗಳಿವೆ. ಅಲ್ಲದೆ ನ್ಯೂಜಿಲೆಂಡ್ ತಂಡಕ್ಕೆ ಸರಿಸಮನಾದ ತಂಡ ನಮ್ಮದಾಗಿದ್ದು ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದು ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದರು

Story first published: Thursday, June 3, 2021, 18:54 [IST]
Other articles published on Jun 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+