ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಹೊಸ ತಂಡಗಳಾಗಿ ಸೇರ್ಪಡೆಯಾಗಬಹುದಾದ 5 ನಗರಗಳು

 Here is the list of 5 Cities That Might Become An IPL Franchise In IPL 2022
IPL ಮುಂದಿನ ವರ್ಷದಿಂದ ಸಾಕಷ್ಟು ಬದಲಾಗಲಿದೆ | Oneindia Kannada

2022ರ ಐಪಿಎಲ್ ಟೂರ್ನಿಯಲ್ಲಿ ಮಹಾ ಬದಲಾವಣೆಗಳಾಗಲಿದ್ದು ಎರಡು ಹೊಸ ಫ್ರಾಂಚೈಸಿಗಳು ಸೇರ್ಪಡೆಯಾಗಲಿವೆ ಎನ್ನಲಾಗುತ್ತಿದೆ. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ 10 ತಂಡಗಳು ಸೆಣಸಾಡಲಿದ್ದು ಐಪಿಎಲ್ ಕಾಳಗ ಮತ್ತಷ್ಟು ದೊಡ್ಡದಾಗಲಿದೆ. ಅಂದಹಾಗೆ ಐಪಿಎಲ್ ಟೂರ್ನಿಯೊಂದರಲ್ಲಿ ಹತ್ತು ತಂಡಗಳು ಕಣಕ್ಕಿಳಿಯುವುದು ಇದೇ ಮೊದಲೇನಲ್ಲ. ಈ ಹಿಂದೆ ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ಪುಣೆ ವಾರಿಯರ್ಸ್ ಇಂಡಿಯಾ ತಂಡಗಳು ಹೊಸದಾಗಿ ಸೇರ್ಪಡೆಗೊಂಡ ಕಾರಣ 2011ರಲ್ಲಿ ಹತ್ತು ತಂಡಗಳು ಸೆಣಸಾಡಿದ್ದವು.

ಯುಎಇಯಲ್ಲಿ ಐಪಿಎಲ್ ಮುಂದುವರೆದಾಗ ಈ 3 ತಂಡಗಳು ಕಂಗಾಲಾಗುವುದು ಖಚಿತ!

ಒಂದೇ ಒಂದು ವರ್ಷ ಕಳೆದ ಬಳಿಕ ಕೊಚ್ಚಿ ಟಸ್ಕರ್ಸ್ ಕೇರಳ ಅಮಾನತುಗೊಂಡು 2012 ಹಾಗೂ 2013ರ ಐಪಿಎಲ್ ಟೂರ್ನಿಗಳಲ್ಲಿ 9 ತಂಡಗಳು ಕಣಕ್ಕಿಳಿದಿದ್ದವು. ಇದಾದ ಬಳಿಕ ಪುಣೆ ವಾರಿಯರ್ಸ್ ಇಂಡಿಯಾ ತಂಡ ಕೂಡ ಐಪಿಎಲ್‌ನಿಂದ ದೂರ ಸರಿದ ಕಾರಣ ತಂಡಗಳ ಸಂಖ್ಯೆ ಮತ್ತೆ 8ಕ್ಕೆ ಇಳಿಕೆಯಾಯಿತು.

ಕೊಹ್ಲಿ ಪಡೆ 42 ದಿನ ವ್ಯರ್ಥವಾಗಿ ಇಂಗ್ಲೆಂಡ್‌ನಲ್ಲಿ ಏನು ಮಾಡಲಿದೆ? ಬಿಸಿಸಿಐಗೆ ಮಾಜಿ ಆಟಗಾರನ ಖಡಕ್ ಪ್ರಶ್ನೆ!

ಮುಂಬರುವ ಐಪಿಎಲ್ ಟೂರ್ನಿಗೆ 2 ಹೊಸ ತಂಡಗಳ ಸೇರ್ಪಡೆಯಾಗಲಿದೆ ಎನ್ನಲಾಗುತ್ತಿದ್ದು, ಈ ಕೆಳಕಂಡ 5 ನಗರಗಳ ಹೆಸರುಗಳು ಕೇಳಿಬರುತ್ತಿವೆ..

1. ಪುಣೆ

1. ಪುಣೆ

ಪುಣೆ ನಗರ ಈ ಹಿಂದೆ ಪುಣೆ ವಾರಿಯರ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜಿಯಂಟ್ಸ್ ತಂಡಗಳಾಗಿ ಐಪಿಎಲ್ ಟೂರ್ನಿಗಳಲ್ಲಿ ಭಾಗವಹಿಸಿತ್ತು. ಪುಣೆ ಮಹಾನಗರವಾಗಿದ್ದು ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ಸಹ ಹೊಂದಿದೆ. ಇಲ್ಲಿಯವರೆಗೂ 2 ಟೆಸ್ಟ್, 4 ಏಕದಿನ ಹಾಗೂ 3 ಟಿ ಟ್ವೆಂಟಿ ಪಂದ್ಯಗಳನ್ನು ಪುಣೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಐಪಿಎಲ್ ತಂಡವಾಗಲು ಬೇಕಾದ ಎಲ್ಲಾ ಅರ್ಹತೆಗಳು ಪುಣೆ ನಗರಕ್ಕಿದ್ದು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಈ ನಗರವು ಕೂಡ ಒಂದು ತಂಡವಾಗಿ ಕಣಕ್ಕಿಳಿಯಬಹುದು.

2. ಅಹ್ಮದಾಬಾದ್

2. ಅಹ್ಮದಾಬಾದ್

ಅಹ್ಮದಾಬಾದ್ ನಗರ ಕೂಡ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ತಂಡವಾಗಿ ಕಣಕ್ಕಿಳಿಯುವ ಅರ್ಹತೆಯನ್ನು ಹೊಂದಿದೆ. ನಗರದಲ್ಲಿ ವಿಶ್ವದಲ್ಲಿಯೇ ಅತಿದೊಡ್ಡ ಕ್ರೀಡಾಂಗಣವಿದ್ದು 1,32,000 ಜನರು ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಈ ಹಿಂದೆ 2016 ಹಾಗೂ 2017ರಲ್ಲಿ ಗುಜರಾತ್ ಲಯನ್ಸ್ ತಂಡ ಭಾಗವಹಿಸಿತ್ತು. ಪ್ರಸ್ತುತ ಐಪಿಎಲ್ ಟೂರ್ನಿಯ ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳನ್ನು ಅಹಮದಾಬಾದ್ ಕ್ರೀಡಾಂಗಣದಲ್ಲಿಯೇ ಆಯೋಜಿಸಲಾಗಿತ್ತು.

3. ಲಕ್ನೋ

3. ಲಕ್ನೋ

ಲಕ್ನೋ ನಗರ ಕೂಡ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ತಂಡವಾಗಿ ಕಣಕ್ಕಿಳಿಯುವ ಅರ್ಹತೆಯನ್ನು ಹೊಂದಿದೆ. ನಗರದಲ್ಲಿ 50,000 ಪ್ರೇಕ್ಷಕರು ವೀಕ್ಷಿಸಬಹುದಾದ ಕ್ರೀಡಾಂಗಣವಿದ್ದು, ಇದರಲ್ಲಿ ಕೆಲವೊಂದಷ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನು ಸಹ ಆಯೋಜಿಸಲಾಗಿದೆ.

4. ಇಂಧೋರ್

4. ಇಂಧೋರ್

ಭಾರತದ ಸ್ವಚ್ಛ ನಗರ ಎಂದೇ ಖ್ಯಾತಿಯನ್ನು ಪಡೆದಿರುವ ಇಂಧೋರ್ ಕೂಡ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ತಂಡವಾಗುವ ಸಾಧ್ಯತೆಗಳಿವೆ. ಇಂದೋರ್ ನಗರದಲ್ಲಿಯೇ ಅಂತಾರಾಷ್ಟ್ರೀಯ ಕ್ರೀಡಾಂಗಣವಿದ್ದು ಇದರಲ್ಲಿ 4 ಏಕದಿನ ಮತ್ತು ಒಂದು ಟೆಸ್ಟ್ ಪಂದ್ಯಗಳು ನಡೆದಿವೆ.

5. ಕೊಚ್ಚಿ

5. ಕೊಚ್ಚಿ

ಈ ಹಿಂದೆಯೊಮ್ಮೆ ಐಪಿಎಲ್ ತಂಡವಾಗಿದ್ದ ಕೊಚ್ಚಿ ನಗರ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಮತ್ತೊಮ್ಮೆ ತಂಡವಾಗುವ ಸಾಧ್ಯತೆಯಿದೆ. ಕೊಚ್ಚಿ ನಗರ ಕೂಡ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ಹೊಂದಿದೆ. 2011ರಲ್ಲಿ ತಮ್ಮ ಎಲ್ಲಾ ಪಂದ್ಯಗಳನ್ನು ಕೊಚ್ಚಿ ಕ್ರೀಡಾಂಗಣದಲ್ಲಿಯೇ ಕೊಚ್ಚಿ ಟಸ್ಕರ್ಸ್ ಕೇರಳ ತಂಡ ಆಯೋಜನೆ ಮಾಡಿಕೊಂಡಿತ್ತು. ಹೀಗಾಗಿ ಐಪಿಎಲ್ ತಂಡವಾಗುವ ಅರ್ಹತೆ ಕೊಚ್ಚಿ ನಗರಕ್ಕಿದೆ.

Story first published: Wednesday, June 2, 2021, 9:47 [IST]
Other articles published on Jun 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X