ನನ್ನ ಕುಂಗ್ ಫೂ ಪಾಂಡ್ಯನನ್ನು ಕಡಿಮೆ ಅಂದಾಜು ಮಾಡಬೇಡಿ; ಹಾರ್ದಿಕ್ ಪತ್ನಿ ನತಾಶ

2022ರ 15ನೇ ಐಪಿಎಲ್ ಋತುವಿನಲ್ಲಿ ಗುಜರಾತ್ ಟೈಟನ್ಸ್ ತಂಡ ತಮ್ಮ ಮೊದಲ ಋತುವಿನಲ್ಲಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಳ್ಳುವಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಅವರು ಪ್ರಮುಖ ಪಾತ್ರ ವಹಿಸಿದರು. ಹಾರ್ದಿಕ್ ಗುಜರಾತ್ ತಂಡವನ್ನು ಮುಂದೆ ನಿಂತು ಮುನ್ನಡೆಸಿ ಇತಿಹಾಸವನ್ನು ಸೃಷ್ಟಿಸಿದರು.
ಭಾನುವಾರ (ಮೇ 29) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022ರ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ಏಳು ವಿಕೆಟ್‌ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿತು.
ಹಾರ್ದಿಕ್ ಅವರ ಪತ್ನಿ ನತಾಶ ಸ್ಟಾಂಕೋವಿಕ್ ಅವರು ತಮ್ಮ ಮಗ ಅಗಸ್ತ್ಯನೊಂದಿಗೆ ಐಪಿಎಲ್ ಟುರ್ನಿಯಯುದ್ದಕ್ಕೂ ತಂಡವನ್ನು ಹಾಗೂ ಪತಿ ಹಾರ್ದಿಕ್‌ರನ್ನು ಬೆಂಬಲಿಸಿದ್ದಾರೆ. ಸೆರ್ಬಿಯಾದ ಬಾಲಿವುಡ್ ತಾರೆ ಮತ್ತು ಮಾಡೆಲ್ ನತಾಶ ಅವರು ಐಪಿಎಲ್ ಗೆದ್ದ ನಂತರ ಭಾವುಕರಾಗಿದ್ದರು ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ತಬ್ಬಿಕೊಳ್ಳಲು ಮೈದಾನಕ್ಕೆ ಓಡಿಹೋದವರಲ್ಲಿ ಮೊದಲಿಗರು.

ನನ್ನ ಕುಂಗ್ ಫೂ ಪಾಂಡ್ಯನನ್ನು ಕಡಿಮೆ ಅಂದಾಜು ಮಾಡಬೇಡಿ
ಸೋಮವಾರ (ಮೇ 30) ನತಾಶ ಅವರು ಪತಿ ಹಾರ್ದಿಕ್ ಪಾಂಡ್ಯ ಅವರ ಗೆಲುವಿನ ಬಗ್ಗೆ ಪ್ರತಿಕ್ರಿಯಿಸುವ ಫೋಟೋಗಳು ಮತ್ತು ವಿಡಿಯೋಗಳ ಸರಣಿಯನ್ನು ತಮ್ಮ Instagram ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ತಮ್ಮ ಪತಿಯನ್ನು ಬೆಂಬಲಿಸಿ ಸಿಹಿ ಸಂದೇಶವನ್ನು ಸಹ ಬರೆದಿದ್ದಾರೆ.
ನತಾಶ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹಾರ್ದಿಕ್ ಪಾಂಡ್ಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಕ್ರಿಕೆಟಿಗನ 'ಅಬ್ಬರ' ಮತ್ತು 'ವಿಶ್ವಾಸ' ಮತ್ತು ಅವರು ತಮ್ಮ ಐಪಿಎಲ್ ತಂಡವಾದ ಗುಜರಾತ್ ಟೈಟನ್ಸ್ ಅನ್ನು ಹೇಗೆ ರೂಪಿಸುತ್ತಿದ್ದಾರೆ ಎಂಬುದರ ಕುರಿತು ಮಾತನಾಡುತ್ತಿದ್ದಾರೆ. ವಿಡಿಯೋ ಜೊತೆಗೆ ನತಾಶ ಹೀಗೆ ಬರೆದಿದ್ದಾರೆ, "ಈ ವ್ಯಕ್ತಿ ಮತ್ತು ಈ ತಂಡ. ನಂಬಲಾಗದ ಋತುವಿಗಾಗಿ ಧನ್ಯವಾದಗಳು. ನನ್ನ ಕುಂಗ್ ಫೂ ಪಾಂಡ್ಯನನ್ನು ಕಡಿಮೆ ಅಂದಾಜು ಮಾಡಬೇಡಿ".

ತೆರೆಮರೆಯಲ್ಲಿ ಎಷ್ಟು ಶ್ರಮವಿದೆ ಎಂದು ಅವಳು ತಿಳಿದಿದ್ದಾಳೆ
ಗುಜರಾತ್ ಟೈಟನ್ಸ್ ತಂಡ ಐಪಿಎಲ್ 2022 ಗೆಲುವಿನ ನಂತರ ಹಾರ್ದಿಕ್ ಪಾಂಡ್ಯರ Instagram ಪೋಸ್ಟ್ ಒಂದನ್ನು ಪತ್ನಿ ನತಾಶ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಗಳಲ್ಲಿ ಮರುಹಂಚಿಕೊಂಡಿದ್ದಾರೆ. "ಚಾಂಪಿಯನ್‌ಗಳು, ಇದು ನಾವು ಮಾಡಿದ ಎಲ್ಲಾ ಕಠಿಣ ಪರಿಶ್ರಮಕ್ಕಾಗಿ! ಎಲ್ಲಾ ಆಟಗಾರರು, ಸಿಬ್ಬಂದಿ, ಅಭಿಮಾನಿಗಳಿಗೆ ಅಭಿನಂದನೆಗಳು," ಎಂದು ನತಾಶ ಅವರು ತಮ್ಮ ಪೋಸ್ಟ್ ಅನ್ನು ಹೃದಯದ ಎಮೋಜಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಐಪಿಎಲ್ ಗೆಲುವಿನ ನಂತರ ಪಂದ್ಯದ ನಂತರದ ಮಾತನಾಡಿದ ಹಾರ್ದಿಕ್ ಪಾಂಡ್ಯ, "ಅವಳು ತುಂಬಾ ಭಾವುಕಳಾದಳು, ನಾನು ಉತ್ತಮವಾಗಿ ಆಡುವುದನ್ನು ನೋಡಿದಾಗ ಅವಳು ತುಂಬಾ ಸಂತೋಷಪಡುತ್ತಾಳೆ. ಅವಳು ನಾನು ಒತ್ತಡ ಪರಿಸ್ಥಿತಿ ಎದುರಿಸುತ್ತಿರುವುದನ್ನು ಅವಳು ನೋಡಿದ್ದಾಳೆ. ನಾನು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ, ನಾನು ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಆದರೆ ತೆರೆಮರೆಯಲ್ಲಿ ಎಷ್ಟು ಶ್ರಮವಿದೆ ಎಂದು ಅವಳು ತಿಳಿದಿದ್ದಾಳೆ," ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.

2022ರ ಐಪಿಎಲ್ ಅನ್ನು ತಮ್ಮ ಮೊದಲ ಫೈನಲ್‌ನಲ್ಲಿ ಗೆದ್ದು ಏಳು ವಿಕೆಟ್‌ಗಳ ಜಯ
ಈ ಮಧ್ಯೆ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಸೋಮವಾರ ಹಾರ್ದಿಕ್ ಪಾಂಡ್ಯರನ್ನು ಹೊಗಳಿದರು. ಆಲ್‌ರೌಂಡರ್ ಗುಜರಾತ್ ಟೈಟನ್ಸ್ ಅನ್ನು ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಗೆ ಯಶಸ್ವಿಯಾಗಿ ಮುನ್ನಡೆಸಿದರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ ಅವರ 34 ರನ್ ಮತ್ತು ಮೂರು ವಿಕೆಟ್‌ಗಳ ಆಲ್‌ರೌಂಡ್ ಪ್ರದರ್ಶನದೊಂದಿಗೆ ಗುಜರಾತ್ ಟೈಟನ್ಸ್ 2022ರ ಐಪಿಎಲ್ ಅನ್ನು ತಮ್ಮ ಮೊದಲ ಫೈನಲ್‌ನಲ್ಲಿ ಗೆದ್ದು ಏಳು ವಿಕೆಟ್‌ಗಳ ಜಯ ಸಾಧಿಸಿತು.

ಸಂಪೂರ್ಣ ಶ್ರೇಯಸ್ಸು ಹಾರ್ದಿಕ್ ಪಾಂಡ್ಯಗೆ
"ತಂಡದ ಗೆಲುವಿನ ಸಂಪೂರ್ಣ ಶ್ರೇಯಸ್ಸು ಹಾರ್ದಿಕ್ ಪಾಂಡ್ಯ ಅವರಿಗೆ ಸಲ್ಲುತ್ತದೆ. ಗುಜರಾತ್ ಟೈಟನ್ಸ್ ತಂಡವನ್ನು ಅವರು ಮುನ್ನಡೆಸಿದ ರೀತಿ ಅದ್ಭುತವಾಗಿತ್ತು. ಜೋಸ್ ಬಟ್ಲರ್ ಅವರು ಫೈನಲ್ ಪಂದ್ಯದಲ್ಲಿ ಅಬ್ಬರಿಸಿ, ಆರ್‌ಆರ್ ದೊಡ್ಡ ಸ್ಕೋರ್ ನೀಡಿದ್ದರೆ, ಗುಜರಾತ್ 180 ಪ್ಲಸ್ ಗುರಿಯನ್ನು ಬೆನ್ನಟ್ಟಲು ಸ್ವಲ್ಪ ಕಷ್ಟವೇ ಆಗುತ್ತಿತ್ತು. ಗ್ಯಾರಿ ಕರ್ಸ್ಟನ್ ಮತ್ತು ಆಶಿಶ್ ನೆಹ್ರಾ ಅವರ ಮಾರ್ಗದರ್ಶನದಲ್ಲಿ ಗುಜರಾತ್ ಟೈಟನ್ಸ್ ತಂಡವು ಪಂದ್ಯಾವಳಿಯ ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡಿದೆ. ಅವರಿಗೆ ದೊಡ್ಡ ಅಭಿನಂದನೆಗಳು," ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಎಎನ್‌ಐಗೆ ತಿಳಿಸಿದರು.
ಹಾರ್ದಿಕ್ ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು ಮತ್ತು ಐಪಿಎಲ್ 2022ಕ್ಕೆ ಮುಂಚಿತವಾಗಿ ಫ್ರಾಂಚೈಸಿಯೊಂದಿಗೆ ಬೇರ್ಪಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications