Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

World Cup 2023: ಪಾಕ್ ತಂಡಕ್ಕೆ ರಾಜಾತಿಥ್ಯ ನೀಡಿದರೂ, ಭಾರತವನ್ನು 'ದುಷ್ಮನ್ ದೇಶ'ವೆಂದ ಪಿಸಿಬಿ ಅಧ್ಯಕ್ಷ; ಜಾಡಿಸಿದ ಫ್ಯಾನ್ಸ್

ಅಕ್ಟೋಬರ್ 5ರಿಂದ ಪ್ರಾರಂಭವಾಗುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಪಾಕಿಸ್ತಾನ ತಂಡ 7 ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿದೆ. ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಿರ್ವಹಣಾ ಸಮಿತಿ ಅಧ್ಯಕ್ಷ ಝಾಕಾ ಅಶ್ರಫ್ ತಮ್ಮ ಹೇಳಿಕೆ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಪಾಕಿಸ್ತಾನ ಆಟಗಾರರಿಗಾಗಿ ಪಿಸಿಬಿಯ ಹೊಸ ಒಪ್ಪಂದಗಳ ಬಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ವಿಶ್ವಕಪ್ ಪಂದ್ಯಾವಳಿಗೆ 'ದುಷ್ಮನ್ ಮುಲ್ಕ್' (ಶತ್ರು ದೇಶ) ಗೆ ಹೋಗಿದ್ದಾರೆ ಎಂದು ಝಾಕಾ ಅಶ್ರಫ್ ಮಾತನಾಡಿದ್ದಾರೆ. ಅವರ ಹೇಳಿಕೆಯು ಭಾರತವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.

Dushman Mulk PCB President Harsh Comment on India, Despite Offering Warm Hospitality to Pak Cricketers

ವೈರಲ್ ಆಗಿರುವ ವಿಡಿಯೋದಲ್ಲಿ ಝಾಕಾ ಅಶ್ರಫ್, "ನಾವು ನಮ್ಮ ಆಟಗಾರರಿಗೆ ಪ್ರೀತಿಯಿಂದ ಈ ಹೊಸ ಒಪ್ಪಂದಗಳನ್ನು ನೀಡಿದ್ದೇವೆ. ಪಾಕಿಸ್ತಾನದ ಇತಿಹಾಸದಲ್ಲಿ ಎಂದಿಗೂ ಆಟಗಾರರಿಗೆ ಇಷ್ಟೊಂದು ಹಣವನ್ನು ನೀಡಲಾಗಿಲ್ಲ. ಶತ್ರು (ದುಷ್ಮನ್ ಮುಲ್ಕ್) ದೇಶಕ್ಕೆ ಪಂದ್ಯಾವಳಿಗೆ ಹೋಗುವಾಗ ಆಟಗಾರರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವುದು ನನ್ನ ಗುರಿಯಾಗಿತ್ತು," ಎಂದು ಹೇಳಿಕೆ ನೀಡಿದ್ದಾರೆ.

ಒಂದು ಕಡೆ ಭಾರತದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅದ್ಧೂರಿ ಸ್ವಾಗತ ಮತ್ತು ರಾಜಾತಿಥ್ಯ ನೀಡಲಾಗಿದ್ದರೆ, ಮತ್ತೊಂದು ಕಡೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಝಾಕಾ ಅಶ್ರಫ್ ಭಾರತವನ್ನು 'ದುಷ್ಮನ್ ಮುಲ್ಕ್' (ಶತ್ರು ದೇಶ) ಎಂದು ಕರೆದಿರುವುದು ವಿವಾದವಾಗಿದೆ.

2023ರ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಹೈದರಾಬಾದ್‌ನಲ್ಲಿ ಪಾಕಿಸ್ತಾನದ ಆಟಗಾರರು ಸ್ವೀಕರಿಸಿದ ಆತ್ಮೀಯ ಸ್ವಾಗತದ ಮಧ್ಯೆಯೇ, ಝಾಕಾ ಅಶ್ರಫ್ ಮಾಡಿದ ಈ ಹೇಳಿಕೆಗಳು ಭಾರತ ಮಾತ್ರವಲ್ಲದೆ, ಸ್ವತಃ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿವೆ.

ಸಾಮಾಜಿಕ ಮಾಧ್ಯಮದಲ್ಲಿ ಝಾಕಾ ಅಶ್ರಫ್ ಹೇಳಿಕೆಗಳ ವಿರುದ್ಧ ಅನೇಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹಲವಾರು ಪಾಕಿಸ್ತಾನಿ ನೆಟ್ಟಿಗರು ಝಾಕಾ ಅಶ್ರಫ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

Dushman Mulk PCB President Harsh Comment on India, Despite Offering Warm Hospitality to Pak Cricketers

"ಭಾರತವನ್ನು 'ದುಷ್ಮನ್ ಮುಲ್ಕ್' ಎಂದು ಕರೆದಿರುವ ಪಿಸಿಬಿ ಅಧ್ಯಕ್ಷರಿಗೆ ನಾಚಿಕೆಯಾಗಬೇಕು. ಅವರಿಂದ ಆತ್ಮೀಯ ಸ್ವಾಗತದ ಹೊರತಾಗಿಯೂ, ಝಾಕಾ ಅಶ್ರಫ್ ನಮ್ಮ ದೇಶದ ನಿಜವಾದ ದುಶ್ಮನ್ಮ," ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಆತ್ಮೀಯ ಭಾರತೀಯರೇ ಝಾಕಾ ಅಶ್ರಫ್‌ರನ್ನು ಗಂಭೀರವಾಗಿ ಪರಿಗಣಿಸಬೇಡಿ. ಕೇವಲ ರಾಜಕೀಯ ಪ್ರಚಾರಕ್ಕಾಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು," ಎಂದು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿ ತೆಹ್ಸೀನ್‌ಖಾಸಿಮ್ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ನ ಮತ್ತೊಬ್ಬ ಕ್ರಿಕೆಟ್ ಅಭಿಮಾನಿ ಪಿಸಿಬಿ ಮುಖ್ಯಸ್ಥರ ಹೇಳಿಕೆಯನ್ನು ಬೇಜವಾಬ್ದಾರಿ ಎಂದು ಬಣ್ಣಿಸಿದ್ದಾರೆ. "ಪಿಸಿಬಿ ಮುಖ್ಯಸ್ಥ ಝಾಕಾ ಅಶ್ರಫ್ ಅವರಿಂದ ಬೇಜವಾಬ್ದಾರಿ ಹೇಳಿಕೆ. ಭಾರತ ನಮ್ಮ ಶತ್ರು ಅಲ್ಲ," ಎಂದು ಸುಲ್ತಾನ್ ಖಾನ್ ಪೋಸ್ಟ್ ಮಾಡಿದ್ದಾರೆ.

ಪಾಕಿಸ್ತಾನ ತಂಡ ಶುಕ್ರವಾರ ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ಆ ನಂತರ ಅಕ್ಟೋಬರ್ 3ರಂದು ಆಸ್ಟ್ರೇಲಿಯಾ ವಿರುದ್ಧ ಮತ್ತೊಂದು ಅಭ್ಯಾಸ ಪಂದ್ಯದಲ್ಲಿ ಸೆಣಸಾಡಲಿದೆ. ಪಾಕಿಸ್ತಾನ ತನ್ನ ಮುಖ್ಯ ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 6ರಂದು ನೆದರ್ಲ್ಯಾಂಡ್ಸ್ ವಿರುದ್ಧ ಆರಂಭಿಸಲಿದೆ.

2023ರ ವಿಶ್ವಕಪ್‌ಗೆ ಪಾಕಿಸ್ತಾನ ತಂಡ
ಬಾಬರ್ ಅಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರೌಫ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್.

Story first published: Friday, September 29, 2023, 14:57 [IST]
Other articles published on Sep 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+