ನಿವೃತ್ತಿ ವಾಪಾಸ್ ಪಡೆದು ತಂಡಕ್ಕೆ ಮರಳಿದ ವೆಸ್ಟ್ ಇಂಡೀಸ್ ಸ್ಟಾರ್ ಪ್ಲೇಯರ್

ವೆಸ್ಟ್ ಇಂಡೀಸ್ ಸ್ಟಾರ್ ಪ್ಲೇಯರ್ ಡ್ವೇಯ್ನ್ ಬ್ರಾವೋ ಸುದೀರ್ಘ ಕಾಲದ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಐರ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ಆಟಗಾರರನ್ನು ಆಯ್ಕೆ ಮಾಡಿರುವ ವಿಂಡಿಸ್ ತಂಡದಲ್ಲಿ ಬ್ರಾವೋ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಐರ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ತಂಡ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ವೆಸ್ಟ್ ಇಂಡೀಸ್‌ನ ಟಿ20 ಸ್ಪೆಶಲಿಸ್ಟ್ ಆಟಗಾರ ಡ್ವೇಯ್ನ್ ಬ್ರಾವೋ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಅದಾಗಲೇ ತಮ್ಮ ನಿವೃತ್ತಿಯನ್ನು ಕೂಡ ಪಡೆದಿದ್ದರು. ಜಾಗತಿಕ ಮಟ್ಟದಲ್ಲಿ ನಡೆಯುವ ಟಿ20 ಲೀಗ್‌ಗಳತ್ತ ಡ್ವೇಯ್ನ್ ಬ್ರಾವೋ ತಮ್ಮ ಗಮನವನ್ನು ಸಂಪೂರ್ಣವಾಗಿ ಕೇಂದ್ರೀಕರಿಸಿದ್ದರು. ಆದರೆ ಕಳೆದ ತಿಂಗಳು ಬ್ರಾವೋ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಬಯಕೆ ವ್ಯಕ್ತಪಡಿಸಿದ್ದರು.
2016ರಲ್ಲಿ ಡ್ವೇಯ್ನ್ ಬ್ರಾವೋ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ ಬಳಿಕ ನಿವೃತ್ತಿಯನ್ನು ಘೋಷಿಸಿದ್ದರು. ಎರಡು ವರ್ಷಗಳ ಬಳಿಕ ಮತ್ತೆ ತಂಡಕ್ಕೆ ವಾಪಾಸಾಗುವ ನಿರ್ಧಾರವನ್ನು ಪ್ರಕಟಿಸಿದ್ದರು.

ತಂಡಕ್ಕೆ ಮರಳಲು ಕಾರಣ ಬಹಿರಂಗ
ಡ್ವೇಯ್ನ್ ಬ್ರಾವೋ ಆಯ್ಕೆಯ ಬಗ್ಗೆ ವಿಂಡೀಸ್ ಆಯ್ಕೆಮಂಡಳಿಯ ರೋಜರ್ ಹಾರ್ಪರ್ ಕಾರಣವನ್ನೂ ಬಹಿರಂಗಪಡಿಸಿದ್ದಾರೆ. ವೆಸ್ಟ್ ಇಂಡೀಸ್‌ನ ಡೆತ್ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸುವ ಸಲುವಾಗಿ ಡ್ವೇಯ್ನ್ ಬ್ರಾವೋ ಅವರನ್ನು ಆಯ್ಕೆ ಮಾಡಲಾಗಿದೆ. ವಿಂಡೀಸ್ ತಂಡ ಡೆತ್ ಓವರ್‌ಗಳಲ್ಲಿ ಮತ್ತಷ್ಟು ಬಲಿಷ್ಠವಾಗಬೇಕಿದೆ. ಹೀಗಾಗಿ ಬ್ರಾವೋ ಆಯ್ಕೆ ಅಗತ್ಯವಿದೆ ಎಂದು ಹೇಳಿದ್ದಾರೆ.

ಮಂಡಳಿಯಲ್ಲಿನ ಬಿರುಕು ನಿವೃತ್ತಿಗೆ ಕಾರಣ
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯಲ್ಲಿ ಆಗಿಂದಾಗ ಗೊಂದಲಗಳು ಉಂಟಾಗುತ್ತಲೇ ಇರುತ್ತವೆ. ಅದರಲ್ಲು ಪ್ರಮುಖವಾಗಿ ಆಟಗಾರರ ಗುತ್ತಿಗೆ ವಿಚಾರವಾಗಿ ಆಟಗಾರರು ಹಾಗೂ ಆಡಳಿತ ಮಂಡಳಿ ಮಧ್ಯೆ ಅನೇಕ ಬಾರಿ ಬಿರುಕು ಕಾಣಿಸಿಕೊಂಡಿದೆ. ಇದೇ ಕಾರಣಕ್ಕೆ ವಿಂಡಿಸ್‌ನ ಆಲ್‌ರೌಂಡರ್ ಡ್ವೇಯ್ನ್ ಬ್ರಾವೋ ವರ್ಷದ ಹಿಂದೆ ನಿವೃತ್ತಿಯನ್ನು ಪ್ರಕಟಿಸಿದ್ದರು.
ಔಟಾ, ನಾಟೌಟಾ?: ಕ್ರಿಕೆಟ್ ನಿಯಮವನ್ನೇ ಪ್ರಶ್ನಿಸೊ ವಿವಾದಾತ್ಮಕ ವೀಡಿಯೋ!

ಮಂಡಳಿಯಲ್ಲಾದ ಬದಲಾವಣೆ
ವಿಂಡೀಸ್ ಕ್ರಿಕೆಟ್ ಆಡಳಿತ ಮಂಡಳಿಯಲ್ಲಿ ಇತ್ತೀಚೆಗೆ ಬದಲಾವಣೆಯಾಗಿದೆ. ಈ ಬದಲಾವಣೆ ಡ್ವೇಯ್ನ್ ಬ್ರಾವೋ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಾಪಾಸ್ ಮರಳಲು ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ 36 ವರ್ಷದ ಆಲ್‌ರೌಂಡರ್ ಡ್ವೇಯ್ ಬ್ರಾವೋ ಆಡಳಿತ ಮಂಡಳಿಯಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಹೇಳಿ ನಿವೃತ್ತಿ ವಾಪಾಸ್ ಪಡೆಯುವ ನಿರ್ಧಾರವನ್ನು ಪ್ರಕಟಿಸಿದ್ದರು. ಇದೀಗ ತಂಡಕ್ಕೆ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಲು ಬ್ರಾವೋ ಸಿದ್ಧರಾಗಿದ್ದಾರೆ.

ವಿಶ್ವಕಪ್‌ಗೆ ವಿಂಡೀಸ್ ಸಜ್ಜು
ಹಾಲಿ ಟಿ20 ವಿಶ್ವ ಚಾಂಪಿಯನ್ ಆಗಿರುವ ವೆಸ್ಟ್ ಇಂಡೀಸ್ ತಂಡ ಇತ್ತೀಚೆಗೆ ಚುಟುಕು ಕ್ರಿಕೆಟ್‌ನಲ್ಲಿ ತನ್ನ ಲಯವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ವಿಶ್ವಕಪ್ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬ್ರಾವೊ ತಂಡಕ್ಕೆ ವಾಪಾಸಾಗಿದ್ದು ವೆಸ್ಟ್ ಇಂಡೀಸ್ ತಂಡಕ್ಕೆ ದೊಡ್ಡ ಬಲ ಬಂದಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications