ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಔಟಾ, ನಾಟೌಟಾ?: ಕ್ರಿಕೆಟ್ ನಿಯಮವನ್ನೇ ಪ್ರಶ್ನಿಸೊ ವಿವಾದಾತ್ಮಕ ವೀಡಿಯೋ!

Relay Catch In Big Bash League Raises Questions On Laws Of Cricket

ಬ್ರಿಸ್ಬೇನ್: 'ಜಂಟಲ್ ಮ್ಯಾನ್ ಗೇಮ್' ಎಂದು ಕರೆಯಲ್ಪಡುವ ಕ್ರಿಕೆಟ್‌ ಆಟ ಅನೇಕ ನಿಯಮಗಳನ್ನು ಒಳಗೊಂಡಿದೆ. ಅಷ್ಟಾಗಿಯೂ ಆಟದ ಮಧ್ಯೆ ಕೆಲವೊಮ್ಮೆ ಒಂದು ವಿಚಿತ್ರ ಸನ್ನಿವೇಶ ಎದುರುಸಿಕ್ಕು ರೂಪಿತ ನಿಯಮವನ್ನೇ ಪ್ರಶ್ನೆಗೀಡುಮಾಡಿದ್ದಿದೆ. ಹೀಗಾದಾಗ ನಿಯಮಾವಳಿಗಳು ಬದಲಿಸಿದ್ದೂ ಅನೇಕ ಬಾರಿ ನಡೆದಿದೆ.

India vs Sri Lanka: ರಿಕಿ ಪಾಂಟಿಂಗ್ ವಿಶ್ವದಾಖಲೆ ಮುರಿದ ವಿರಾಟ್ ಕೊಹ್ಲಿ!India vs Sri Lanka: ರಿಕಿ ಪಾಂಟಿಂಗ್ ವಿಶ್ವದಾಖಲೆ ಮುರಿದ ವಿರಾಟ್ ಕೊಹ್ಲಿ!

ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಿಗ್‌ ಬ್ಯಾಷ್ ಲೀಗ್ (ಬಿಬಿಎಲ್) ಫ್ರಾಂಚೈಸಿ ಕ್ರಿಕೆಟ್‌ ಟೂರ್ನಿಯಲ್ಲಿ ಕ್ರಿಕೆಟ್‌ ನಿಯಮವನ್ನೇ ಪ್ರಶ್ನೆಗೀಡು ಮಾಡುವ ಮತ್ತೊಂದು ಸಂಗತಿ ನಡೆದಿತ್ತು. ಜನವರಿ 9ರಂದು ನಡೆದ ಬ್ರಿಸ್ಬೇನ್ ಹೀಟ್‌ ಮತ್ತು ಹೊಬರ್ಟ್ ಹರಿಕೇನ್ಸ್ ಪಂದ್ಯದಲ್ಲಿ ಈ ದೃಶ್ಯ ಕಾಣಸಿಕ್ಕಿತು.

'ದೇವರುಗಳು ಸೋತಾಗ ಗೋಡೆಯ ಹಿಂದೆ ಅಡಗಿ ಕುಳಿತುಕೊಳ್ಳುತ್ತಾರೆ!''ದೇವರುಗಳು ಸೋತಾಗ ಗೋಡೆಯ ಹಿಂದೆ ಅಡಗಿ ಕುಳಿತುಕೊಳ್ಳುತ್ತಾರೆ!'

ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಸೆರೆಯಾಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ.

ಬ್ರಿಸ್ಬೇನ್ ಹೀಟ್‌-ಹೊಬರ್ಟ್ ಹರಿಕೇನ್ಸ್

ಬ್ರಿಸ್ಬೇನ್ ಹೀಟ್‌-ಹೊಬರ್ಟ್ ಹರಿಕೇನ್ಸ್

ಬ್ರಿಸ್ಬೇನ್‌ ಗಬ್ಬಾದಲ್ಲಿ ಬಿಬಿಎಲ್ 29ನೇ ಪಂದ್ಯಕ್ಕಾಗಿ ಬ್ರಿಸ್ಬೇನ್ ಹೀಟ್‌ ಮತ್ತು ಹೊಬರ್ಟ್ ಹರಿಕೇನ್ಸ್ ಮುಖಾಮುಖಿಯಾಗಿದ್ದವು. ಈ ವೇಳೆ ಹೊಬರ್ಟ್ ಹರಿಕೇನ್ಸ್ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್, ನಾಯಕ ಮ್ಯಾಥ್ಯೂ ವೇಡ್‌, 14.5ನೇ ಓವರ್‌ನಲ್ಲಿ ಎದುರಾಳಿ ಬೌಲರ್ ಬೆನ್ ಕಟ್ಟಿಂಗ್ ಎಸೆವನ್ನು ಬೌಂಡರಿ ಲೈನ್‌ನತ್ತ ಅಟ್ಟಿದರು.

ಸರ್ಕಸ್ಸಿನ ಬಳಿಕ ಕ್ಯಾಚ್ ಯಶಸ್ವಿ

ಸರ್ಕಸ್ಸಿನ ಬಳಿಕ ಕ್ಯಾಚ್ ಯಶಸ್ವಿ

ಬೌಂಡರಿ ಲೈನ್‌ನಲ್ಲಿದ್ದ ಬ್ರಿಸ್ಬೇನ್ ಫೀಲ್ಡರ್ ಮ್ಯಾಟ್ ರೆನ್ಶಾ ಸಿಕ್ಸ್‌ ಎನಿಸುವುದರಲ್ಲಿದ್ದ ಚೆಂಡನ್ನು ಹಿಡಿದರು. ಆದರೆ ತಾನು ಬ್ಯಾಲನ್ಸ್ ತಪ್ಪಿ ಸಿಕ್ಸ್‌ ಲೈನ್ ದಾಟಲಿರುವುದನ್ನು ಅರಿತ ಮ್ಯಾಟ್ ಚೆಂಡನ್ನು ಚಿಮ್ಮಿ ಬೌಂಡರಿ ಲೈನ್ ಪ್ರವೇಶಿಸಿದರು. ಮತ್ತೆ ಅಲ್ಲಿಂದ ಜಿಗಿದು ಚೆಂಡನ್ನು ತಂಡದ ಸಹ ಆಟಗಾರ ಟಾಮ್ ಬ್ಯಾಂಟನ್ ಅವರತ್ತ ಮುಟ್ಟಿಸಿದರು. ಬ್ಯಾಂಟನ್ ಚೆಂಡನ್ನು ಯಶಸ್ವಿಯಾಗಿ ಕ್ಯಾಚ್ ಮಾಡಿದರು.

ಮ್ಯಾಥ್ಯೂ ವೇಡ್ ಬಲಿಪಶು

ಮ್ಯಾಥ್ಯೂ ವೇಡ್ ಬಲಿಪಶು

ಮ್ಯಾಟ್ ಅವರ ಈ ಶ್ರಮದಿಂದ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ 61 ರನ್‌ಗೆ ನಿರ್ಗಮಿಸಬೇಕಾಯ್ತು. ಇಲ್ಲಿನ ರಿಲೇ ಕ್ಯಾಚ್‌ ಮತ್ತು ವೇಡ್ ಔಟ್ ತೀರ್ಪು ಚರ್ಚೆಗೀಡುಮಾಡಿದೆ. ಮ್ಯಾಟ್ ರೆನ್ಶಾ ಚೆಂಡನ್ನು ಬ್ಯಾಂಟನ್‌ಗೆ ದಾಟಿಸುವಾಗ ಗಾಳಿಯಲ್ಲಿದ್ದಿದ್ದು ನಿಜ, ಆದರೂ ಈ ಔಟ್ ತೀರ್ಪು ಗೊಂದಲ ಮೂಡಿಸುವಂತಿದೆ.

ಪಂದ್ಯ ಕಳೆದುಕೊಂಡ ಹರಿಕೇನ್ಸ್

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಹೊಬರ್ಟ್ ಹರಿಕೇನ್ಸ್ ತಂಡ, 20 ಓವರ್‌ಗೆ 9 ವಿಕೆಟ್ ಕಳೆದು 129 ರನ್ ಗಳಿಸಿತ್ತು. ಚೇಸಿಂಗ್‌ಗೆ ಇಳಿದ ಬ್ರಿಸ್ಬೇನ್ ಹೀಟ್ ತಂಡ ಬೆನ್ ಕಟ್ಟಿಂಗ್ (43 ರನ್) ನೆರವಿನೊಂದಿಗೆ 18.2ನೇ ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 131 ರನ್ ಪೇರಿಸಿ ಗೆಲುವನ್ನಾಚರಿಸಿತು. ಒಟ್ಟಿನಲ್ಲಿ ವೀಡಿಯೋ ವೀಕ್ಷಿಸಿ ನೀವೇ ನಿರ್ಧರಿಸಿ; ಇದು ಔಟಾ? ಇಲ್ಲ ನಾಟೌಟಾ?

Story first published: Tuesday, May 26, 2020, 9:52 [IST]
Other articles published on May 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X