ಭಾನುವಾರ, ಜುಲೈ 23ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಎಸಿಸಿ ಪುರುಷರ ಉದಯೋನ್ಮುಖ ಏಷ್ಯಾ ಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಸೆಣಸಾಡುತ್ತಿವೆ.
ಟಾಸ್ ಗೆದ್ದ ಭಾರತ ಎ ತಂಡದ ನಾಯಕ ಯಶ್ ಧುಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆದ್ದರಿಂದ ಮೊಹಮ್ಮದ್ ಹ್ಯಾರಿಸ್ ನಾಯಕತ್ವದ ಪಾಕಿಸ್ತಾನ ಎ ತಂಡ ಮೊದಲು ಬೌಲಿಂಗ್ ಮಾಡಲಿದೆ.

ಯುವ ಆಟಗಾರರಿಂದ ಕೂಡಿರುವ ಉಭಯ ತಂಡಗಳ ಮತ್ತೊಂದು ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ನೋಡುತ್ತಿದ್ದಾರೆ. ಗೆದ್ದ ತಂಡ 2023ರ ಎಸಿಸಿ ಪುರುಷರ ಉದಯೋನ್ಮುಖ ಏಷ್ಯಾ ಕಪ್ ಪ್ರಶಸ್ತಿ ಎತ್ತಿ ಹಿಡಿಯಲಿದೆ.
ಯಶ್ ಧುಲ್ ನಾಯಕತ್ವದ ಭಾರತ ಎ ತಂಡ ಈಗಾಗಲೇ ಈ ಪಂದ್ಯಾವಳಿಯ ಗುಂಪು ಹಂತದಲ್ಲಿ ಪಾಕಿಸ್ತಾನ ಎ ತಂಡವನ್ನು ಸೋಲಿಸಿದೆ. ಆ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿತ್ತು.
ಭಾರತ ಎ: ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ನಿಕಿನ್ ಜೋಸ್, ಯಶ್ ಧುಲ್ (ನಾಯಕ), ರಿಯಾನ್ ಪರಾಗ್, ನಿಶಾಂತ್ ಸಿಂಧು, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಮಾನವ್ ಸುತಾರ್, ಹರ್ಷಿತ್ ರಾಣಾ, ಯುವರಾಜ್‌ಸಿನ್ಹ ಧೋಡಿಯಾ, ರಾಜವರ್ಧನ್ ಹಂಗರ್ಗೇಕರ್.
ಪಾಕಿಸ್ತಾನ ಎ: ಮೊಹಮ್ಮದ್ ಹ್ಯಾರಿಸ್ (ನಾಯಕ/ ವಿಕೆಟ್ ಕೀಪರ್), ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಒಮೈರ್ ಯೂಸುಫ್, ತಯ್ಯಬ್ ತಾಹೀರ್, ಖಾಸಿಮ್ ಅಕ್ರಮ್, ಮುಬಾಶಿರ್ ಖಾನ್, ಮೆಹ್ರಾನ್ ಮುಮ್ತಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಅರ್ಶದ್ ಇಕ್ಬಾಲ್, ಸೂಫಿಯಾನ್ ಮುಖೀಮ್.