ಭಾನುವಾರ, ಜುಲೈ 23ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಎಸಿಸಿ ಪುರುಷರ ಉದಯೋನ್ಮುಖ ಏಷ್ಯಾ ಕಪ್ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಮುಖಾಮುಖಿಯಾಗಲಿವೆ.
ಯುವ ಆಟಗಾರರಿಂದ ಕೂಡಿರುವ ಎರಡು ತಂಡಗಳ ಮತ್ತೊಂದು ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇಂದಿನ ಪಂದ್ಯದಲ್ಲೂ ಅದೇ ಫಲಿತಾಂಶವನ್ನು ಪುನರಾವರ್ತಿಸಲು ಮತ್ತು ಪ್ರಶಸ್ತಿಯನ್ನು ಎತ್ತಿ ಹಿಡಿಯಲು ಎದುರು ನೋಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಭಾರತ ಸೋಲು ಕಾಣದೆ ಫೈನಲ್ ತಲುಪಿದ ಏಕೈಕ ತಂಡವಾಗಿದೆ.
ಇನ್ನು 2023ರ ಉದಯೋನ್ಮುಖ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಯಶ್ ಧುಲ್ ಎರಡನೇ ಸ್ಥಾನದಲ್ಲಿದ್ದು, 4 ಪಂದ್ಯಗಳ 3 ಇನ್ನಿಂಗ್ಸ್‌ಗಳಿಂದ 103.72ರ ಸ್ಟ್ರೈಕ್‌ರೇಟ್‌ನಲ್ಲಿ 195 ರನ್ ಗಳಿಸಿದ್ದಾರೆ.

ಪಾಕಿಸ್ತಾನ ತಂಡಕ್ಕೆ ಯಶ್ ಧುಲ್ ಅವರ ವಿಕೆಟ್ ಪ್ರಮುಖವಾಗಿದೆ. ಭಾರತದ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಅವರು ಕಳೆದ ಪಂದ್ಯದಲ್ಲಿ ಪಾಕಿಸ್ತಾನ ಎ ವಿರುದ್ಧ ಅಜೇಯ 104 ರನ್ ಗಳಿಸಿ ಭಾರತ ತಂಡವನ್ನು ಅಮೋಘ ಗೆಲುವಿನತ್ತ ಮುನ್ನಡೆಸಿದ್ದಾರೆ.
ಅತ್ಯುತ್ತಮ ಪ್ರತಿಭೆಗಳಿಂದ ತುಂಬಿರುವ ಭಾರತ ಎ ತಂಡವನ್ನು ಸೋಲಿಸುವುದು ಪಾಕಿಸ್ತಾನ ಎ ತಂಡಕ್ಕೆ ಸುಲಭವಿಲ್ಲ. ಈ ಟೂರ್ನಿಯಲ್ಲಿ ಪಾಕಿಸ್ತಾನ ಪರ ಒಮೈರ್ ಯೂಸುಫ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆಡಿದ 4 ಪಂದ್ಯಗಳಿಂದ 148 ರನ್ ಗಳಿಸಿದ್ದಾರೆ.
ಫೈನಲ್‌ನಲ್ಲಿ ಭಾರತ ಎ ತಂಡ ಗೆಲ್ಲುವ ನೆಚ್ಚಿನ ತಂಡವಾಗಿರಲಿದೆ. ಆದರೆ ಪಾಕಿಸ್ತಾನ ಎ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ.
ದಿನಾಂಕ ಮತ್ತು ಸ್ಥಳ: ಭಾರತ ಎ ಮತ್ತು ಪಾಕಿಸ್ತಾನ ಎ ನಡುವಿನ ಫೈನಲ್ ಪಂದ್ಯವು ಭಾನುವಾರ, ಜುಲೈ 23ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ.
ಪಂದ್ಯದ ಸಮಯ: ಭಾರತ ಎ ಮತ್ತು ಪಾಕಿಸ್ತಾನ ಎ ನಡುವಿನ ಫೈನಲ್ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುತ್ತದೆ.
ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ: ಭಾರತ ಎ ಮತ್ತು ಪಾಕಿಸ್ತಾನ ಎ ನಡುವಿನ ಫೈನಲ್ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ ಮತ್ತು ಫ್ಯಾನ್ ಕೋಡ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.
ಭಾರತ ಎ vs ಪಾಕಿಸ್ತಾನ ಎ ಸಂಭಾವ್ಯ ಆಡುವ 11ರ ಬಳಗ
ಭಾರತ ಎ: ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ನಿಕಿನ್ ಜೋಸ್, ಯಶ್ ಧುಲ್ (ನಾಯಕ), ರಿಯಾನ್ ಪರಾಗ್, ನಿಶಾಂತ್ ಸಿಂಧು, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಮಾನವ್ ಸುತಾರ್, ಹರ್ಷಿತ್ ರಾಣಾ, ನಿತೀಶ್ ರೆಡ್ಡಿ, ರಾಜವರ್ಧನ್ ಹಂಗರೇಕರ್.
ಪಾಕಿಸ್ತಾನ ಎ: ಸೈಮ್ ಅಯೂಬ್, ಹಸೀಬುಲ್ಲಾ ಖಾನ್, ಮೊಹಮ್ಮದ್ ಹ್ಯಾರಿಸ್ (ನಾಯಕ/ ವಿಕೆಟ್ ಕೀಪರ್), ಕಮ್ರಾನ್ ಗುಲಾನ್, ಸಾಹಿಬ್ಜಾದಾ ಫರ್ಹಾನ್, ಒಮೈರ್ ಯೂಸುಫ್, ಖಾಸಿಮ್ ಅಕ್ರಮ್, ಮುಬಾಶಿರ್ ಖಾನ್, ಮೆಹ್ರಾನ್ ಮುಮ್ತಾಜ್, ಮೊಹಮ್ಮದ್ ವಾಸಿಮ್, ಶಹನವಾಜ್ ದಹಾನಿ.