For Quick Alerts
ALLOW NOTIFICATIONS  
For Daily Alerts
 

Emerging Asia Cup 2023 Final: ಭಾರತ ಎ ತಂಡದ ನೀರಸ ಪ್ರದರ್ಶನ; ಪಾಕಿಸ್ತಾನ ಎ ತಂಡ ಚಾಂಪಿಯನ್

ಭಾನುವಾರ, ಜುಲೈ 23ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ 2023ರ ಉದಯೋನ್ಮುಖ ತಂಡಗಳ ಏಷ್ಯಾ ಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಭಾರತ ಎ ತಂಡದ ವಿರುದ್ಧ ಪಾಕಿಸ್ತಾನ ಎ ತಂಡ 128 ರನ್‌ಗಳ ಗೆಲುವು ದಾಖಲಿಸಿ ಪ್ರಶಸ್ತಿ ಎತ್ತಿ ಹಿಡಿಯಿತು.

ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಭಾರತ ಎ ತಂಡವು ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿತು. ಅಂತಿಮ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ಇನ್ನು ಗುಂಪು ಹಂತದ ಸೋಲಿಗೆ ಪಾಕಿಸ್ತಾನ ಎ ತಂಡ ಫೈನಲ್‌ನಲ್ಲಿ ಪ್ರತೀಕಾರ ತೀರಿಸಿಕೊಂಡಿತು.

Emerging Asia Cup 2023 Final: Pakistan A Beat India A By 128 Runs To Win Title

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 352 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. 353 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಎ ತಂಡ 40 ಓವರ್‌ಗಳಲ್ಲಿ 224 ರನ್‌ಗಳಿಗೆ ಸರ್ವಪತನ ಕಂಡಿತು.

ಪಾಕಿಸ್ತಾನ ತಂಡದ ಪರ ಸೈಮ್ ಅಯೂಬ್ 51 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 59 ರನ್, ಸಾಹಿಬ್ಜಾದಾ ಫರ್ಹಾನ್ 62 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಮೇತ 65 ರನ್, ಒಮೈರ್ ಯೂಸುಫ್ 35 ರನ್, ತಯ್ಯಬ್ ತಾಹಿರ್ 71 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 108 ರನ್ ಗಳಿಸಿದರು.

Emerging Asia Cup 2023 Final: Pakistan A Beat India A By 128 Runs To Win Title

ಉಳಿದಂತೆ ಮುಬಾಸಿರ್ ಖಾನ್ 35 ರನ್, ಮೆಹ್ರಾನ್ ಮುಮ್ತಾಜ್ 13 ರನ್, ಮೊಹಮ್ಮದ್ ವಾಸಿಮ್ ಜೂನಿಯರ್ 17 ರನ್ ಗಳಿಸಿ ತಂಡದ ಮೊತ್ತ 350ರ ಗಡಿ ದಾಟಲು ನೆರವಾದರು.

ಭಾರತ ಎ ತಂಡದ ಪರ ಬೌಲಿಂಗ್‌ನಲ್ಲಿ ರಾಜವರ್ಧನ್ ಹಂಗರ್ಗೇಕರ್ 2 ವಿಕೆಟ್, ರಿಯಾನ್ ಪರಾಗ್ 2 ವಿಕೆಟ್ ಪಡೆದರೆ, ಹರ್ಷಿತ್ ರಾಣಾ, ಮಾನವ್ ಸುತಾರ್, ನಿಶಾಂತ್ ಸಂಧು ತಲಾ ಒಂದೊಂದು ವಿಕೆಟ್ ಪಡೆದರು.

ಎರಡನೇ ಇನ್ನಿಂಗ್ಸ್‌ನಲ್ಲಿ 353 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಎ ತಂಡದ ಪರ ಸಾಯಿ ಸುದರ್ಶನ್ 29 ರನ್, ಅಭಿಷೇಕ್ ಶರ್ಮಾ 51 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 61 ರನ್ ಗಳಿಸಿ ತಂಡದ ಪರ ಏಕೈಕ ಗರಿಷ್ಠ ಸ್ಕೋರರ್ ಎನಿಸಿದರು.

ಉಳಿದಂತೆ ನಿಕಿನ್ ಜೋಸ್ 11 ರನ್, ಯಶ್ ಧುಲ್ 39 ರನ್, ನಿಶಾಂತ್ ಸಂಧು 10 ರನ್, ಧ್ರುವ್ ಜುರೆಲ್ 9 ರನ್, ರಿಯಾನ್ ಪರಾಗ್ 14 ರನ್, ಹರ್ಷಿತ್ ರಾಣಾ 13 ರನ್, ರಾಜವರ್ಧನ್ ಹಂಗರ್ಗೇಕರ್ 11 ರನ್ ಗಳಿಸಿದರು. ಒಂದರ ಹಿಂದೆ ಒಂದು ವಿಕೆಟ್ ಕಳೆದುಕೊಂಡು ಪಾಕಿಸ್ತಾನ ಎ ತಂಡಕ್ಕೆ ಸುಲಭವಾಗಿ ಶರಣಾಯಿತು.

ಪಾಕಿಸ್ತಾನ ಎ ತಂಡದ ಪರರ ಬೌಲಿಂಗ್‌ನಲ್ಲಿ ಸೂಫಿಯಾನ್ ಮುಖೀಮ್ 10 ಓವರ್‌ಗಳಲ್ಲಿ 66 ರನ್ ನೀಡಿ 3 ವಿಕೆಟ್ ಪಡೆದರೆ, ಅರ್ಶದ್ ಇಕ್ಬಾಲ್, ಮೆಹ್ರಾನ್ ಮುಮ್ತಾಜ್ ಮತ್ತು ಮೊಹಮ್ಮದ್ ವಾಸಿಮ್ ಜೂನಿಯರ್ ತಲಾ 2 ವಿಕೆಟ್ ಪಡೆದರು. ಉಳಿದಂತೆ ಮುಬಾಸಿರ್ ಖಾನ್ 1 ವಿಕೆಟ್ ಕಬಳಿಸಿದರು.

ಪಾಕಿಸ್ತಾನ ಎ ತಂಡದ ಪರ ಶತಕ ಬಾರಿಸಿದ ತಯ್ಯಬ್ ತಾಹಿರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಪಂದ್ಯಾವಳಿಯುದ್ದಕ್ಕೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ಎ ತಂಡದ ನಿಶಾಂತ್ ಸಂಧು ಸರಣಿ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Story first published: Monday, July 24, 2023, 8:49 [IST]
Other articles published on Jul 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+