ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ವೇಗದ ಅರ್ಧಶತಕ ದಾಖಲಿಸಿದ ಲಿಯಾಮ್ ಲಿವಿಂಗ್‌ಸ್ಟೋನ್

ನೆದರ್ಲೆಂಡ್ಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ ವೇಗದ ಅರ್ಧಶತಕ ದಾಖಲಿಸುವ ಮೂಲಕ ಇಂಗ್ಲೆಂಡ್ ಪರ ಹೊಸ ದಾಖಲೆ ಮಾಡಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ತನ್ನದೇ ದಾಖಲೆ ಮುರಿದು ಅತಿ ಹೆಚ್ಚು ಸ್ಕೋರ್ ದಾಖಲಿಸಿದ ಇಂಗ್ಲೆಂಡ್ ಪರ ಲಿವಿಂಗ್‌ಸ್ಟೋನ್ ಕೇವಲ 16 ಎಸೆತಗಳಲ್ಲಿ ಅತಿ ಹೆಚ್ಚು ರನ್ ಕಲೆಹಾಕುವ ಮೂಲಕ ಇಂಗ್ಲೆಂಡ್ ಪರ ವೇಗದ ಅರ್ಧಶತಕ ದಾಖಲಿಸಿರುವ ಸಾಧನೆ ಮಾಡಿದ್ದಾರೆ.
ಇಂಗ್ಲೆಂಡ್ ಪರ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಲಿವಿಂಗ್‌ಸ್ಟೋನ್ ಅದಾಗಲೇ 400ರ ಗಡಿದಾಟಿದ್ದ ಇಂಗ್ಲೆಂಡ್ ಮೊತ್ತವನ್ನ 500ರ ಗಡಿ ಸಮೀಪಿಸುವಲ್ಲಿ ನೆರವಾದ್ರು. 22 ಎಸೆತಗಳಲ್ಲಿ ಅಜೇಯ 66 ರನ್ ಕಲೆಹಾಕಿದ ಲಿವಿಂಗ್‌ಸ್ಟೋನ್ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಮತ್ತು ಆರು ಭರ್ಜರಿ ಸಿಕ್ಸರ್‌ಗಳಿದ್ದವು.
ಅದಾಗಲೇ ಇಂಗ್ಲೆಂಡ್ ಮೂವರು ಬ್ಯಾಟರ್‌ಗಳಾದ ಫಿಲಿಪ್ ಸಾಲ್ಟ್ 122, ಡೇವಿಡ್ ಮಲನ್ 125 ಮತ್ತು ಜಾಸ್ ಬಟ್ಲರ್ ಅಜೇಯ 162 ರನ್ ಕಲೆಹಾಕುವ ಮೂಲಕ ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 498 ರನ್ ಕಲೆಹಾಕಿದೆ. ಇದು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚಿನ ಸ್ಕೋರ್ ಆಗಿದ್ದು, ತನ್ನದೇ ಹಿಂದಿನ ದಾಖಲೆಯನ್ನ ಇಂಗ್ಲೆಂಡ್ ಮುರಿದಿದೆ.
ಆಮ್ಸ್ಟೆಲ್ವೀನ್ ವಿಆರ್‌ಎ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ ಬೌಲಿಂಗ್ ಆಯ್ದುಕೊಂಡಿತ್ತು. ಆದ್ರೆ ಇಂಗ್ಲೆಂಡ್ ಬ್ಯಾಟರ್‌ಗಳು ಸ್ವಲ್ಪವೂ ಕರುಣೆ ತೋರದೆ ಅಬ್ಬರದ ಆಟವಾಡಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ 11
ನೆದರ್ಲೆಂಡ್
ವಿಕ್ರಮ್‌ಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಮೂಸಾ ಅಹ್ಮದ್, ಬಾಸ್ ಡಿ ಲೀಡೆ, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ವಿಕೆಟ್ ಕೀಪರ್), ಪೀಟರ್ ಸೀಲಾರ್ (ನಾಯಕ), ಲೋಗನ್ ವ್ಯಾನ್ ಬೀಕ್, ಫಿಲಿಪ್ ಬೋಯಿಸೆವೈನ್, ಶೇನ್ ಸ್ನೇಟರ್, ಆರ್ಯನ್ ದತ್
ಇಂಗ್ಲೆಂಡ್
ಜೇಸನ್ ರಾಯ್, ಫಿಲಿಪ್ ಸಾಲ್ಟ್, ಡೇವಿಡ್ ಮಲನ್, ಇಯಾನ್ ಮಾರ್ಗನ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಆದಿಲ್ ರಶೀದ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications