For Quick Alerts
ALLOW NOTIFICATIONS  
For Daily Alerts
 

Eng vs NZ ಮೊದಲ ಟೆಸ್ಟ್‌: ರೂಟ್ ಅಜೇಯ ಶತಕ, ಅದ್ಭುತ ಕಂಬ್ಯಾಕ್ ಮಾಡಿದ ಇಂಗ್ಲೆಂಡ್‌ಗೆ ಗೆಲುವು

Joe root

ಕ್ರಿಕೆಟ್ ಕಾಶಿ ಲಂಡನ್‌ನ ಲಾರ್ಡ್ಸ್‌ ಮೈದಾನದಲ್ಲಿ ನಡೆದ ಆತಿಥೇಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಅಜೇಯ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಆತಿಥೇಯ ತಂಡ ಇಂಗ್ಲೆಂಡ್ ಕಿವೀಸ್ ವಿರುದ್ಧ ಐದು ವಿಕೆಟ್‌ಗಳ ಗೆಲುವು ಸಾಧಿಸಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 26ನೇ ಶತಕ ಹಾಗೂ 10,000ರನ್‌ಗಳನ್ನ ಪೂರೈಸಿದ ಜೋ ರೂಟ್ ಅಜೇಯ 115 ಹಾಗೂ ಬೆನ್ ಫೋಕ್ಸ್‌ ಅಜೇಯ 32ರನ್‌ಗಳ ಆಟದಿಂದಾಗಿ ಇಂಗ್ಲೆಂಡ್, ಪ್ರವಾಸಿ ತಂಡದ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಜಯ ಸಾಧಿಸಿದೆ ಮತ್ತು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ 277ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ಪರ ಆರಂಭದಲ್ಲೇ ಟಾಪ್ ಆರ್ಡರ್ ಬ್ಯಾಟರ್‌ಗಳನ್ನು ಕಳೆದುಕೊಂಡಿತು. ಜಾಕ್ ಕ್ರಾವ್ಲಿ, ಒಲ್ಲಿ ಪೋಪ್ ಹಾಗೂ ಓಪನರ್ ಅಲೆಕ್ಸ್ ಹೇಲ್ಸ್‌ ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ಇದಾದ ಬಳಿಕ ನಾಲ್ಕನೇ ದಿನದಾಟದಲ್ಲಿ ಬೆನ್‌ ಸ್ಟೋಕ್ಸ್‌ ಅರ್ಧಶತಕ ಸಿಡಿಸಿ ಔಟಾದ್ರೆ, ಮಾಜಿ ನಾಯಕ ಜೋ ರೂಟ್ ಅಜೇಯ ಅರ್ಧಶತಕ ದಾಖಲಿಸಿ ಅಂತಿಮ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು.

ಕೊನೆಯ ದಿನದಾಟದಲ್ಲಿ ಕಿವೀಸ್ ಬೌಲರ್‌ಗಳನ್ನ ಸಮರ್ಥವಾಗಿ ಎದುರಿಸಿದ ಜೋ ರೂಟ್ 170 ಎಸೆತಗಳಲ್ಲಿ ಅಜೇಯ 115 ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು. ರೂಟ್ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳಿದ್ದವು. ಇನ್ನೂ ರೂಟ್‌ಗೆ ತಕ್ಕ ಸಾಥ್ ನೀಡಿದ ವಿಕೆಟ್ ಕೀಪರ್ ಬ್ಯಾಟರ್ ಬೆನ್ ಫೋಕ್ಸ್‌ 92 ಎಸೆತಗಳಲ್ಲಿ ಅಜೇಯ 32 ರನ್ ಕಲೆಹಾಕುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

Joe root 100

ಕೊನೆಯ ದಿನದಾಟದಲ್ಲಿ ಯಾವುದೇ ವಿಕೆಟ್ ಕೈ ಚೆಲ್ಲದೆ ದಿಟ್ಟ ಹೋರಾಟ ಪ್ರದರ್ಶಿಸಿದ ಇಂಗ್ಲೆಂಡ್ ಪಂದ್ಯ ಗೆದ್ದು ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ ಮೊದಲ ದಿನವೇ 132ರನ್‌ಗಳಿಗೆ ಆಲೌಟ್ ಆಗಿದೆ. ಇದೇ ದಿನದಲ್ಲಿ ಇಂಗ್ಲೆಂಡ್ ಕೂಡ 100ರನ್‌ಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಂತಿಮವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 141ರನ್ ಕಲೆಹಾಕಿ ಕೇವಲ 9ರನ್‌ಗಳ ಮುನ್ನಡೆ ಕಾಯ್ದುಕೊಂಡಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಟಾಪ್ ಆರ್ಡರ್ ವೈಫಲ್ಯದ ನಡುವೆ ಐದನೇ ವಿಕೆಟ್‌ಗೆ ದ್ವಿಶತಕ ಜೊತೆಯಾಟ ಕಂಡಿತು. ಡೆರಿಲ್ ಮಿಚೆಲ್ 108ರನ್ ಹಾಗೂ ವಿಕೆಟ್ ಕೀಪರ್ ಟಾಮ್ ಬ್ಲಂಡೆಲ್ 96ರನ್‌ಗಳ ಕೊಡುಗೆ, ಸೌಥಿ 21ರನ್‌ನಿಂದಾಗಿ 285ರನ್‌ಗೆ ಆಲೌಟ್ ಆಗಿತು. ಜೊತೆಗೆ 276ರನ್‌ಗಳ ಮುನ್ನಡೆ ಕಂಡಿತು. ಈ ಗುರಿಯನ್ನ ಯಶಸ್ವಿಯಾಗಿ ಬೆನ್ನತ್ತಿದ ಇಂಗ್ಲೆಂಡ್ ಅದ್ಭುತ ಆಟವಾಡಿ ಪಂದ್ಯ ಜಯಿಸಿದೆ.

ಇಂಗ್ಲೆಂಡ್ ಪರ ಮ್ಯಾಟಿ ಪಾಟ್ಸ್ 7 ವಿಕೆಟ್, ಜೇಮ್ಸ್ ಆ್ಯಂಡರ್ಸನ್ 6 ವಿಕೆಟ್ ಕಬಳಿಸಿ ಮಿಂಚಿದ್ರು. ನ್ಯೂಜಿಲೆಂಡ್ ಪರ ಕೈಲ್ ಜೇಮಿಸನ್ 6 ವಿಕೆಟ್ ಪಡೆದರು.

ಇಂಗ್ಲೆಂಡ್ ಪರ ಅಜೇಯ ಶತಕದ ಜೊತೆಗೆ ಮಹತ್ವದ 10,000ಗಳ ಮೈಲಿಗಲ್ಲನ್ನು ತಲುಪಿದ ಜೋ ರೂಟ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಲಭಿಸಿದೆ.

ಉಭಯ ತಂಡಗಳ ಪ್ಲೇಯಿಂಗ್ 11:

ಇಂಗ್ಲೆಂಡ್ ಪ್ಲೇಯಿಂಗ್ 11:
ಝಾಕ್ ಕ್ರಾಲಿ, ಅಲೆಕ್ಸ್ ಲೀಸ್, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್, ಮ್ಯಾಥ್ಯೂ ಪಾರ್ಕಿನ್ಸನ್, ಜ್ಯಾಕ್ ಲೀಚ್

ನ್ಯೂಜಿಲೆಂಡ್ ಪ್ಲೇಯಿಂಗ್ 11:
ಟಾಮ್ ಲಥಾಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ಟಿಮ್ ಸೌಥಿ, ಅಜಾಜ್ ಪಟೇಲ್, ಟ್ರೆಂಟ್ ಬೌಲ್ಟ್

Story first published: Sunday, June 5, 2022, 18:32 [IST]
Other articles published on Jun 5, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+