Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Eng vs NZ 2nd Test: 2ನೇ ಟೆಸ್ಟ್‌ನ 2ನೇ ದಿನದಾಟದ ಲೈವ್‌ ಸ್ಕೋರ್‌ ಅಪ್‌ಡೇಟ್

New zealand

ಟ್ರೆಂಟ್‌ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ಎರಡನೇ ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್ ಮುಂದುವರಿಸುವ ಲೆಕ್ಕಾಚಾರದಲ್ಲಿ ಬೃಹತ್ ಮೊತ್ತ ಕಲೆಹಾಕುವ ಯೋಜನೆ ರೂಪಿಸಿಕೊಂಡಿದೆ.

ಮೊದಲ ದಿನದಾಟದಲ್ಲಿನ ಟಾಸ್ ಗೆದ್ದ ಇಂಗ್ಲೆಂಡ್ ಪ್ರವಾಸಿ ತಂಡವನ್ನ ಮೊದಲ ಬ್ಯಾಟಿಂಗ್ ಆಹ್ವಾನಿಸಿತು. ಆದ್ರೆ ಇದೇ ಅವಕಾಶವನ್ನ ಸದುಪಯೋಗ ಪಡಿಸಿಕೊಂಡಿರುವ ಕಿವೀಸ್ ಈಗಾಗಲೇ ಮೊದಲ ದಿನದಾಟದಲ್ಲಿ ಮೇಲುಗೈ ಸಾಧಿಸಿದೆ.

ನ್ಯೂಜಿಲೆಂಡ್ ತಂಡಕ್ಕೆ ಡೆರಿಲ್ ಮಿಚೆಲ್ ಮತ್ತು ಟಾಮ್ ಬ್ಲಂಡೆಲ್ ಆಧಾರವಾಗಿದ್ದು, ಇಬ್ಬರು ಬ್ಯಾಟರ್‌ಗಳು ಶತಕದತ್ತ ಹೆಜ್ಜೆ ಹಾಕುತ್ತಿದ್ದಾರೆ. ಕಿವೀಸ್ ಪರ ಮಿಚೆಲ್ ಮತ್ತು ಬ್ಲಂಡೆಲ್ ಪ್ರಸ್ತುತ ಕ್ರಮವಾಗಿ 81 ಮತ್ತು 67 ರನ್ ಗಳಿಸಿ ಅಜೇಯರಾಗಿದ್ದು ಎರಡನೇ ದಿನದಾಟ ಆರಂಭಿಸಿದ್ದು, ಲೈವ್ ಸ್ಕೋರ್ ಅಪ್‌ಡೇಟ್ ಈ ಕೆಳಗಿದೆ.

1
51777

ಇದಕ್ಕೂ ಮುನ್ನ ನ್ಯೂಜಿಲೆಂಡ್ 1 ನೇ ದಿನದ ಅಂತ್ಯಕ್ಕೆ ಡ್ಯಾರಿಲ್ ಮಿಚೆಲ್ ಮತ್ತು ಟಾಮ್ ಬ್ಲಂಡೆಲ್ ಅತ್ಯುತ್ತಮ ಪ್ರದರ್ಶನದ ಮೂಲಕ ಮೊದಲ ದಿನದಾಟದ ಗೌರವ ಸಂಪಾದಿಸಿದೆ. ನ್ಯೂಜಿಲೆಂಡ್ ಒಂದು ಹಂತದಲ್ಲಿ ಟಾಪ್ ಆರ್ಡರ್ ವೈಫಲ್ಯದಿಂದ ನಾಲ್ಕು ವಿಕೆಟ್ ನಷ್ಟಕ್ಕೆ 169ರನ್ ಕಲೆಹಾಕಿತ್ತು. ನಾಯಕ ಟಾಮ್ ಲಥಾಮ್ 26, ವಿಲ್ ಯಂಗ್ 47, ಡೆವೊನ್ ಕಾನ್ವೆ 46, ಹೆನ್ರಿ ನಿಕೊಲ್ಸ್ 30ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು. ಆದ್ರೆ ಐದನೇ ವಿಕೆಟ್‌ಗೆ ಜೊತೆಯಾದ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅಜೇಯ 149 ರನ್‌ಗಳ ಜೊತೆಯಾಟವನ್ನು ನೀಡಿ ನ್ಯೂಜಿಲೆಂಡ್‌ಗೆ ಮೊದಲ ದಿನದ ಗೌರವವನ್ನು ನೀಡಿದರು.

ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ ಮತ್ತು ನಾಯಕ ಬೆನ್‌ ಸ್ಟೋಕ್ಸ್ ತಲಾ ಎರಡು ವಿಕೆಟ್ ಪಡೆದಿದ್ದಾರೆ. ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 318 ರನ್ ಕಲೆಹಾಕಿದೆ.

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪ್ಲೇಯಿಂಗ್ 11

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್(ನಾಯಕ), ಬೆನ್ ಫೋಕ್ಸ್(ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್

ನ್ಯೂಜಿಲೆಂಡ್: ಟಾಮ್ ಲ್ಯಾಥಮ್ (ನಾಯಕ), ವಿಲ್ ಯಂಗ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಕೈಲ್ ಜೇಮಿಸನ್, ಟಿಮ್ ಸೌಥಿ, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್

Story first published: Saturday, June 11, 2022, 15:52 [IST]
Other articles published on Jun 11, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+