ಟೆಸ್ಟ್ ಕ್ರಿಕೆಟ್‌ನಲ್ಲಿ ಜೋ ರೂಟ್ ದಾಖಲೆ: 2021ರಿಂದ 10 ಶತಕಗಳ ಸರದಾರ

ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಹಾಗೂ ಮಾಜಿ ನಾಯಕ ಜೋ ರೂಟ್ ತಮ್ಮ ಅಮೋಘ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ ಇಂಗ್ಲೆಂಡ್ ಬ್ಯಾಟರ್, ಸರಣಿಯಲ್ಲಿ ಸತತ 2ನೇ ಟೆಸ್ಟ್ ಶತಕ ದಾಖಲಿಸಿದ್ದಾರೆ.
ಜೋ ರೂಟ್ ಈ ಸರಣಿಯಲ್ಲಷ್ಟೇ ಅಲ್ಲದೆ ಜನವರಿ 2021 ರಿಂದ ಅತಿ ಹೆಚ್ಚು ಶತಕ ಹಾಗೂ ರನ್‌ಗಳಿಸಿದ ಟೆಸ್ಟ್ ಬ್ಯಾಟರ್ ಆಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ 176 ರನ್ ಸಿಡಿಸಿದ ಜೋ ರೂಟ್ ಇಂಗ್ಲೆಂಡ್ 500ರ ಗಡಿದಾಟಲು ಪ್ರಮುಖ ಪಾತ್ರವಹಿಸಿದ್ರು.
3ನೇ ದಿನದಾಟದ ಅಂತ್ಯಕ್ಕೆ ರೂಟ್ 200 ಎಸೆತಗಳಲ್ಲಿ 163 ರನ್ ಗಳಿಸಿ ಅಜೇಯರಾಗುಳಿದರು. ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 5 ವಿಕೆಟ್ ಕಳೆದುಕೊಂಡು 473 ರನ್ ಗಳಿಸಿತು ನಾಲ್ಕನೇ ದಿನದ ಬ್ಯಾಟಿಂಗ್ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ರೂಟ್ (211 ಎಸೆತಗಳಲ್ಲಿ 176 ರನ್, 26 ಬೌಂಡರಿ ಹಾಗೂ 1 ಸಿಕ್ಸರ್) ಔಟಾದರು. ವಿಕೆಟ್ ಕೀಪರ್ ಬೆನ್ ಫಾಕ್ಸ್ (104 ಎಸೆತಗಳಲ್ಲಿ 56 ರನ್) ರನೌಟ್ ಆದ ಕಾರಣ ಇಂಗ್ಲೆಂಡ್ ನ ಕೆಳಕ್ರಮಾಂಕದ ಬ್ಯಾಟ್ಸ್ ಮನ್ ಗಳು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಪರಿಣಾಮ ಇಂಗ್ಲೆಂಡ್ 539 ರನ್‌ಗಳಿಗೆ ಅಲ್ಪ ಮೊತ್ತದ ಹಿನ್ನಡೆ ಸಾಧಿಸಿತು.

2021ರಿಂದ ಅತಿ ಹೆಚ್ಚು ಟೆಸ್ಟ್ ಶತಕಗಳು
ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗಿ ಮುಂದುವರಿದಿದ್ದಾರೆ. ಅದ್ರಲ್ಲೂ ಕೇವಲ ಒಂದೂವರೆ ವರ್ಷದಲ್ಲಿ ಬರೋಬ್ಬರಿ 10 ಶತಕಗಳನ್ನು ಗಳಿಸಿದರು. ಯಾವ ತಂಡದ ವಿರುದ್ಧ ಎಷ್ಟು ರನ್‌ಗಳಿಸಿದ್ದಾರೆ ಎಂಬುದನ್ನ ಈ ಕೆಳಗೆ ಕಾಣಬಹುದು.
1. 228 ವಿರುದ್ಧ ಶ್ರೀಲಂಕಾ,
2. 186 ವಿರುದ್ಧ ಶ್ರೀಲಂಕಾ,
3. 218 ವಿರುದ್ಧ ಭಾರತ,
4. 109 ವಿರುದ್ಧ ಭಾರತ,
5. 180 * ವಿರುದ್ಧ ಭಾರತ,
6. 121 ವಿರುದ್ಧ ಭಾರತ,
7. 109 ವಿರುದ್ಧ ವೆಸ್ಟ್ ಇಂಡೀಸ್,
8. 153 vs ವೆಸ್ಟ್ ಇಂಡೀಸ್,
9. 115 * vs ನ್ಯೂಜಿಲೆಂಡ್,
10. 176 vs ನ್ಯೂಜಿಲೆಂಡ್
ಟೆಸ್ಟ್ ಕ್ರಿಕೆಟ್‍ನಲ್ಲಿ ಹೆಚ್ಚು ಸಿಕ್ಸರ್ ಬಾರಿಸಿರುವ ಸಕ್ರಿಯ ಆಟಗಾರರ ಟಾಪ್ 6 ಪಟ್ಟಿ; ಇಬ್ಬರು ಭಾರತೀಯ!

2021 ರಿಂದ ಅತಿ ಹೆಚ್ಚು ರನ್‌ಗಳು
ರೂಟ್ 2021 ರಿಂದ ಒಟ್ಟು 23 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 42 ಇನ್ನಿಂಗ್ಸ್‌ಗಳಲ್ಲಿ 2368 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 59.2 ಆಗಿದ್ದು 10 ಶತಕ ಮತ್ತು 4 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಎರಡು ದ್ವಿಶತಕ, ನಾಲ್ಕು ಬಾರಿ 150 ಪ್ಲಸ್ ಸ್ಕೋರ್ ದಾಖಲಿಸಿದ್ದಾರೆ
ರೂಟ್ ತಮ್ಮ ವೃತ್ತಿಜೀವನದಲ್ಲಿ 119 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 219 ಇನ್ನಿಂಗ್ಸ್‌ಗಳಲ್ಲಿ 10191 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 254 ರನ್ ಆಗಿದೆ. ಅವರ ಬ್ಯಾಟಿಂಗ್ ಸರಾಸರಿ 50.20ರಷ್ಟು ಕಾಯ್ದುಕೊಂಡಿದ್ದಾರೆ. ರೂಟ್ 27 ಶತಕ, 5 ದ್ವಿಶತಕ ಮತ್ತು 53 ಅರ್ಧ ಶತಕ ಗಳಿಸಿದ್ದಾರೆ. ಅವರ ಫಾರ್ಮ್ ಹೀಗೆಯೇ ಮುಂದುವರಿದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಲ್ಲಿನ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ದಾಖಲೆ ಮುರಿಯುವ ಸಾಧ್ಯತೆ ಇದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ದಾಟಿದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್

ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ ಸಾಧಿಸಿದ ನ್ಯೂಜಿಲೆಂಡ್
ನಾಲ್ಕನೇ ದಿನದಂದು ಇಂಗ್ಲೆಂಡ್ ಪರ ಜೋ ರೂಟ್ 176ರನ್‌ಗಳಿಗೆ ಔಟಾದ ಬಳಿಕ, ಅರ್ಧಶತಕ ದಾಖಲಿಸಿದ್ದ ಬೆನ್ ಫೋಕ್ಸ್ 56ರನ್‌ಗೆ ವಿಕೆಟ್ ಒಪ್ಪಿಸಿದ್ರು. ಇದಾದ ಬಳಿಕ ಕೆಳಕ್ರಮಾಂಕದಲ್ಲಿ ಸ್ಟುವರ್ಟ್ ಬ್ರಾಡ್ 9, ಮ್ಯಾಟಿ ಫಾಟ್ಸ್ 3, ಜೇಮ್ಸ್ ಆ್ಯಡರ್ಸನ್ 9 ರನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.
ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 539 ರನ್‌ಗಳಿಗೆ ಆಲೌಟ್ ಆಗಿದ್ದು, ಈ ಮೂಲಕ ನ್ಯೂಜಿಲೆಂಡ್ 14 ರನ್ ಮುನ್ನಡೆ ಸಾಧಿಸಿತು. ಇನ್ನೂ ಒಂದು ಸೆಷನ್ ಹೊರತುಪಡಿಸಿ ಇನ್ನೊಂದು ದಿನವಷ್ಟೇ ಬಾಕಿ ಉಳಿದಿರುವುದರಿಂದ ಪಂದ್ಯ ಬಹುತೇಕ ಡ್ರಾ ಆಗುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications