ಟೆಸ್ಟ್ ಕ್ರಿಕೆಟ್‍ನಲ್ಲಿ ಹೆಚ್ಚು ಸಿಕ್ಸರ್ ಬಾರಿಸಿರುವ ಸಕ್ರಿಯ ಆಟಗಾರರ ಟಾಪ್ 6 ಪಟ್ಟಿ; ಇಬ್ಬರು ಭಾರತೀಯ!

ಇಂಡಿಯನ್ ಪ್ರಿಮಿಯರ್ ಲೀಗ್ ಹದಿನೈದನೇ ಆವೃತ್ತಿ ಮುಕ್ತಾಯಗೊಂಡ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಆರಂಭವಾಗಿದ್ದು ಟೆಸ್ಟ್ ಕ್ರಿಕೆಟ್ ಕೂಡ ಪುನರಾರಂಭಗೊಂಡಿದೆ. ಇನ್ನು ಟೆಸ್ಟ್ ಕ್ರಿಕೆಟ್ ಎಲ್ಲಾ ಮಾದರಿಗಳಿಗಿಂತಲೂ ಅತಿ ಕಠಿಣವಾದದ್ದು ಎಂಬ ಹೆಸರನ್ನು ಹೊಂದಿದ್ದು, ಸುಧೀರ್ಘವಾಗಿ ನಡೆಯುವ ಈ ಮಾದರಿಯಲ್ಲಿ ಯಶಸ್ಸು ಸಾಧಿಸಬೇಕೆಂದರೆ ಆಟಗಾರನಿಗೆ ತಾಳ್ಮೆ ಅತೀ ಮುಖ್ಯವಾಗಿರಬೇಕು.
ಇನ್ನು ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಗಂಟೆಗಟ್ಟಲೆ ನೆಲಕಚ್ಚಿ ನಿಂತು ಬ್ಯಾಟ್ ಬೀಸಬೇಕಾದ ಜವಾಬ್ದಾರಿ ಬ್ಯಾಟ್ಸ್‌ಮನ್‌ಗೆ ಇರಲಿದ್ದು, ಈ ಮಾದರಿಯಲ್ಲಿ ಆಟಗಾರರು ಬೌಂಡರಿ ಬಾರಿಸುವುದು ತೀರಾ ಕಡಿಮೆ, ಅದರಲ್ಲಿಯೂ ಸಿಕ್ಸರ್ ಬಾರಿಸುವುದು ಅತಿ ಕಡಿಮೆ ಎನ್ನಬಹುದು. ಆದರೂ ಸಹ ಕೆಲವೊಂದಿಷ್ಟು ಆಟಗಾರರು ಟೆಸ್ಟ್ ಕ್ರಿಕೆಟ್‍ನಲ್ಲಿಯೂ ದೊಡ್ಡ ಹೊಡೆತಗಳನ್ನು ಬಾರಿಸಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಹೀಗೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ದೊಡ್ಡ ಹೊಡೆತಗಳನ್ನು ಬಾರಿಸಿ ಅತಿ ಹೆಚ್ಚು ಸಿಕ್ಸರ್ ಕಲೆಹಾಕಿರುವ ಸಕ್ರಿಯ ಆಟಗಾರರ ಆಟಗಾರರ ಟಾಪ್ 6 ಪಟ್ಟಿ ಕೆಳಕಂಡಂತಿದೆ.

6. ರವೀಂದ್ರ ಜಡೇಜಾ
ಟೀಮ್ ಇಂಡಿಯಾದ ಪ್ರಮುಖ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದ್ದಾರೆ. ರವೀಂದ್ರ ಜಡೇಜಾ ಇಲ್ಲಿಯವರೆಗೂ ಟೆಸ್ಟ್ ಕ್ರಿಕೆಟ್‍ನಲ್ಲಿ 55 ಸಿಕ್ಸರ್ ಬಾರಿಸಿದ್ದಾರೆ.

5. ಡೇವಿಡ್ ವಾರ್ನರ್
ಆಸ್ಟ್ರೇಲಿಯಾದ ಟಿ ಟ್ವೆಂಟಿ ಸ್ಪೆಷಲಿಸ್ಟ್ ಎಂದೇ ಖ್ಯಾತಿಯನ್ನು ಪಡೆದಿರುವ ಡೇವಿಡ್ ವಾರ್ನರ್ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‍ನಲ್ಲಿ 61 ಸಿಕ್ಸರ್ ಬಾರಿಸುವುದರ ಮೂಲಕ ಅತಿ ಹೆಚ್ಚು ಟೆಸ್ಟ್ ಕ್ರಿಕೆಟ್ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

4. ರೋಹಿತ್ ಶರ್ಮಾ
ಪ್ರಸ್ತುತ ಭಾರತ ಟೆಸ್ಟ್ ತಂಡದ ನಾಯಕನಾಗಿರುವ ರೋಹಿತ್ ಶರ್ಮಾ ಇದುವರೆಗೂ ಟೆಸ್ಟ್ ಕ್ರಿಕೆಟ್‍ನಲ್ಲಿ 64 ಸಿಕ್ಸರ್ ಚಚ್ಚಿದ್ದು, ಅತಿ ಹೆಚ್ಚು ಟೆಸ್ಟ್ ಕ್ರಿಕೆಟ್ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

3. ಏಂಜೆಲೊ ಮ್ಯಾಥ್ಯೂಸ್
ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 199 ರನ್ ಬಾರಿಸಿ ಅಬ್ಬರಿಸಿದ್ದ ಏಂಜೆಲೊ ಮ್ಯಾಥ್ಯೂಸ್ ಸದ್ಯ ಶ್ರೀಲಂಕಾ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಆಟಗಾರ ಎನಿಸಿಕೊಂಡಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ ಒಟ್ಟು 74 ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ಟೆಸ್ಟ್ ಕ್ರಿಕೆಟ್ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಮೂರನೇ ಸ್ಥಾನದಲ್ಲಿದ್ದಾರೆ.

2. ಟಿಮ್ ಸೌಥಿ
ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಆಟಗಾರರ ಟಾಪ್ 6 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಏಕೈಕ ಬೌಲರ್ ಎಂದರೆ ಅದು ಟಿಮ್ ಸೌಥಿ. ನ್ಯೂಜಿಲೆಂಡ್ ವೇಗಿ ಟೆಸ್ಟ್ ಕ್ರಿಕೆಟ್‍ನಲ್ಲಿ 75 ಸಿಕ್ಸರ್ ಚಚ್ಚಿದ್ದು, ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

1. ಬೆನ್ ಸ್ಟೋಕ್ಸ್
ಇತ್ತೀಚೆಗಷ್ಟೇ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ನೇಮಕಗೊಂಡಿರುವ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ನಂಬರ್ 1 ಆಟಗಾರ ಎನಿಸಿಕೊಂಡಿದ್ದಾರೆ. ಬೆನ್ ಸ್ಟೋಕ್ಸ್ ಇಲ್ಲಿಯವರೆಗೂ ಒಟ್ಟು 90 ಟೆಸ್ಟ್ ಸಿಕ್ಸರ್ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications