ENG vs NZ 2nd Test: ಪಂದ್ಯದ ಪ್ರಿವ್ಯೂ, ಪಿಚ್ ರಿಪೋರ್ಟ್, ಸಂಭಾವ್ಯ ಪ್ಲೇಯಿಂಗ್ 11

ಲಾರ್ಡ್ಸ್ ಅಂಗಳದಲ್ಲಿ ನ್ಯೂಜಿಲೆಂಡ್ ವಿರುದ್ಧ ಐದು ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿದ ಬಳಿಕ ಇಂಗ್ಲೆಂಡ್ ತಂಡವು ಎರಡನೇ ಟೆಸ್ಟ್ ಪಂದ್ಯಕ್ಕೆ ರೆಡಿಯಾಗಿದೆ. ಟ್ರೆಂಟ್ ಬ್ರಿಡ್ಜ್‌ನಲ್ಲಿ ಜೂನ್ 10ರಂದು ಉಭಯ ತಂಡಗಳು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.
ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿ ಜಯದ ಮೇಲೆ ಆತಿಥೇಯ ಇಂಗ್ಲೆಂಡ್ ತಂಡವು ಕಣ್ಣಿಟ್ಟಿದೆ. ಅದು ಸಾಧ್ಯವಾದಲ್ಲಿ ಜನವರಿ 2021ರ ಬಳಿಕ ಇಂಗ್ಲೆಂಡ್‌ಗೆ ಮೊದಲ ಟೆಸ್ಟ್ ಸರಣಿ ಗೆಲುವು ಇದಾಗಲಿದೆ.
ಬ್ರೆಂಡನ್ ಮೆಕಲಮ್ ಮಾರ್ಗದರ್ಶನ ಮತ್ತು ಹೊಸ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದು, ಕಿವೀಸ್ ನಾಯಕ ಕೇನ್ ವಿಲಿಯಮ್ಸನ್‌ಗೆ ಉತ್ತಮ ಸವಾಲನ್ನು ಎಸೆಯಲಿದೆ.

ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಎಡವಿದ ನ್ಯೂಜಿಲೆಂಡ್
ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ ಮೊದಲ ದಿನವೇ 132ರನ್‌ಗಳಿಗೆ ಆಲೌಟ್ ಆಯಿತು. ಇದೇ ದಿನದಲ್ಲಿ ಇಂಗ್ಲೆಂಡ್ ಕೂಡ 100ರನ್‌ಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಂತಿಮವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 141ರನ್ ಕಲೆಹಾಕಿ ಕೇವಲ 9ರನ್‌ಗಳ ಮುನ್ನಡೆ ಕಾಯ್ದುಕೊಂಡಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಟಾಪ್ ಆರ್ಡರ್ ವೈಫಲ್ಯದ ನಡುವೆ ಐದನೇ ವಿಕೆಟ್‌ಗೆ ದ್ವಿಶತಕ ಜೊತೆಯಾಟ ಕಂಡಿತು. ಡೆರಿಲ್ ಮಿಚೆಲ್ 108ರನ್ ಹಾಗೂ ವಿಕೆಟ್ ಕೀಪರ್ ಟಾಮ್ ಬ್ಲಂಡೆಲ್ 96ರನ್‌ಗಳ ಕೊಡುಗೆ, ಸೌಥಿ 21ರನ್‌ನಿಂದಾಗಿ 285ರನ್‌ಗೆ ಆಲೌಟ್ ಆಗಿತು. ಜೊತೆಗೆ 276ರನ್‌ಗಳ ಮುನ್ನಡೆ ಕಂಡಿತು. ಈ ಗುರಿಯನ್ನ ಯಶಸ್ವಿಯಾಗಿ ಬೆನ್ನತ್ತಿದ ಇಂಗ್ಲೆಂಡ್ ಅದ್ಭುತ ಆಟವಾಡಿ ಪಂದ್ಯ ಜಯಿಸಿತು.

ಟ್ರೆಂಟ್ ಬ್ರಿಡ್ಜ್ ಪಿಚ್ ಕಂಡೀಷನ್
ಟ್ರೆಂಟ್ ಬ್ರಿಡ್ಜ್ ವಿಕೆಟ್ ಆರಂಭಿಕ ವೇಗಿಗಳಿಗೆ ಸಹಾಯ ಮಾಡುವ ನಿರೀಕ್ಷೆಯಿದೆ ಮತ್ತು ಹೊಸ ಚೆಂಡನ್ನು ಎದುರಿಸುವಾಗ ಬ್ಯಾಟರ್‌ಗಳು ಬಹಳ ಜಾಗರೂಕರಾಗಿರಬೇಕು. ಈ ಪಂದ್ಯದಲ್ಲಿ ಟಾಸ್ ದೊಡ್ಡ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಬೌಲಿಂಗ್-ಸ್ನೇಹಿ ಪಿಚ್ ಹೊಂದಿರುವ ಕಾರಣ ಎರಡು ತಂಡ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್‌ಗೆ ಮುಂದಾಗುವುದಿಲ್ಲ. ಆದ್ದರಿಂದ, ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಮಾಡಬಹುದು.
ದ. ಆಫ್ರಿಕಾ ವಿರುದ್ಧ ತವರಿನಲ್ಲಿ ಇದುವರೆಗೂ ಟಿ20 ಸರಣಿ ಗೆದ್ದಿಲ್ಲ ಟೀಂ ಇಂಡಿಯಾ!

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ 11
ಇಂಗ್ಲೆಂಡ್ ಸಂಭಾವ್ಯ ಪ್ಲೇಯಿಂಗ್ 11
ಝಾಕ್ ಕ್ರಾಲಿ, ಆಲಿಸ್ ಲೀಸ್, ಅಲಿ ಪೋಪ್, ಜೋ ರೂಟ್, ಜಾನಿ ಬೈರ್ಲ್ತೌ, ಬೆನ್ ಸ್ಟ್ರೋಕ್ಸ್ (ನಾಯಕ), ಬೆನ್ ಫಾಕ್ಸ್ (ವಿಕೆಟ್ ಕೀಪರ್), ಮ್ಯಾಥ್ಯೂ ಪೋಸ್ಟ್ಸ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ 11
ಟಾಮ್ ಲಥಾಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲುಂಡೆಲ್ (ವಿಕೆಟ್ ಕೀಪರ್), ಕೈಲ್ ಜೇಮಿಸನ್, ಟಿಮ್ ಸೌಥಿ, ಅಜಾಜ್ ಪಟೇಲ್, ಟ್ರೆಂಟ್ ಬೌಲ್ಟ್
2006ರಲ್ಲಿ ದ.ಆಫ್ರಿಕಾ ವಿರುದ್ಧದ ಚೊಚ್ಚಲ ಟಿ20ಯಲ್ಲಿ ಕಣಕ್ಕಿಳಿದಿದ್ದ ಇವರು ಇಂದಿಗೂ ಭಾರತ ತಂಡದಲ್ಲಿದ್ದಾರೆ!

ಹೆಡ್ ಟು ಹೆಡ್ ಮತ್ತು ಪಂದ್ಯದ ನೇರಪ್ರಸಾರ
ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಇದುವರೆಗೂ 108 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಇಂಗ್ಲೆಂಡ್ 49 ಪಂದ್ಯಗಳನ್ನ ಜಯಿಸಿದ್ರೆ, ನ್ಯೂಜಿಲೆಂಡ್ ಕೇವಲ 12 ಟೆಸ್ಟ್ ಪಂದ್ಯಗಳನ್ನಷ್ಟೇ ಜಯಿಸಿದೆ.
ಪಂದ್ಯವು ಸೋನಿ ಸಿಕ್ಸ್ ಮತ್ತು ಸೋನಿ ಲಿವ್ ಆ್ಯಪ್‌ನಲ್ಲಿ ನೇರ ಪ್ರಸಾರವಾಗಲಿದ್ದು, ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಪಂದ್ಯ ಪ್ರಾರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications