Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Eng vs NZ 3ನೇ ಟೆಸ್ಟ್‌: ಶೇನ್ ವಾರ್ನ್ ಕುರಿತ ಜಾಹೀರಾತು ಪ್ರಸಾರ, ಅಭಿಮಾನಿಗಳ ಆಕ್ರೋಶ

Shane warne

ಹೆಡಿಂಗ್ಲಿಯ ಲೀಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಿವಂಗತ ಮಾಜಿ ಆಸಿಸ್ ಆಟಗಾರ ಶೇನ್ ವಾರ್ನ್ ಕುರಿತಾದ ಜಾಹೀರಾತಿನ ಪ್ರಸಾರಕ್ಕೆ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಶೇನ್ ವಾರ್ನ್ ಕುರಿತಾದ ಜಾಹೀರಾತು ಪ್ರಸಾರವಾಗಿರುವ ಹಿನ್ನಲೆಯಲ್ಲಿ ಅಭಿಮಾನಿಗಳು ಪಂದ್ಯ ನೇರಪ್ರಸಾರಕರ ವಿರುದ್ಧ ಕಿಡಿಕಾರಿದ್ದಾರೆ.

ಶೇನ್ ವಾರ್ನ್ ಜಾಹೀರಾತು ಪ್ರದರ್ಶನ

ಶೇನ್ ವಾರ್ನ್ ಜಾಹೀರಾತು ಪ್ರದರ್ಶನ

ಮೂರನೇ ಟೆಸ್ಟ್‌ನಲ್ಲಿ 55ರನ್‌ಗೆ 6 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ನ ಟೆಸ್ಟ್ನಲ್ಲಿ ಕಂಬ್ಯಾಕ್ ಮತ್ತು ನ್ಯೂಜಿಲೆಂಡ್‌ನ ನಿರಂತರ ಹೋರಾಟದ ನಡುವೆ ನಡೆಯುತ್ತಿರುವ ಪಂದ್ಯದ ಕುರಿತು ಪ್ರಸಾರಕರು ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಪಂದ್ಯದ ನೇರ ಪ್ರಸಾರ ಮಾಡುತ್ತಿದ್ದ ಸ್ಕೈ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಶೇನ್ ವಾರ್ನ್ ಅವರ ಜಾಹೀರಾತು ಇದ್ದಕ್ಕಿದ್ದಂತೆ ಕಾಣಿಸಿಕೊಂಡಾಗ ಅಭಿಮಾನಿಗಳು ಶಾಕ್ ಆಗಿದ್ದಾರೆ.

ರಣಜಿ ಫೈನಲ್: ರಜತ್ ಪಾಟೀದಾರ್ ಶತಕ, ಮುಂಬೈ ವಿರುದ್ಧ ಮಧ್ಯಪ್ರದೇಶ ಮೇಲುಗೈ

ಹೃದಯಾಘಾತದಿಂದ ಶೇನ್ ವಾರ್ನ್ ಸಾವು

ಮಾಜಿ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಕಳೆದ ಮಾರ್ಚ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ವಿಶ್ವದಾದ್ಯಂತ ಅಭಿಮಾನಿಗಳು ಅವರನ್ನು ಕಳೆದುಕೊಂಡ ದುಃಖವನ್ನು ಸಹಿಸಲಾಗಲಿಲ್ಲ. ಸತ್ತ ವ್ಯಕ್ತಿಯ ಜಾಹೀರಾತನ್ನು ತನ್ನ ಲಾಭಕ್ಕಾಗಿ ಮರುಬಳಕೆ ಮಾಡುವುದು ಸರಿಯೇ ??? ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಕೂದಲಿಗೆ ಸಂಬಂಧಿಸಿದ ಕ್ಲಿನಿಕ್ ಕುರಿತು ಜಾಹೀರಾತಿನಲ್ಲಿ ಶೇನ್ ವಾರ್ನ್ ಕಾಣಿಸಿಕೊಂಡಿರುವ ವಿಡಿಯೋ ಸದ್ಯ ಅಂತರ್ಜಾಲದಲ್ಲಿ ವೇಗವಾಗಿ ಹರಡುತ್ತಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

1983ರ ವಿಶ್ವಕಪ್‌ ಗೆಲುವಿಗೆ 39 ವರ್ಷ: ಕಪಿಲ್ ದೇವ್‌ಗೆ ಒಲಿದು ಬಂದಿರುವ ಪ್ರಶಸ್ತಿಗಳೆಷ್ಟು ಗೊತ್ತಾ?

ಕುಸಿದಿದ್ದ ಇಂಗ್ಲೆಂಡ್‌ಗೆ 31ರನ್‌ಗಳ ಮುನ್ನಡೆ

ಕುಸಿದಿದ್ದ ಇಂಗ್ಲೆಂಡ್‌ಗೆ 31ರನ್‌ಗಳ ಮುನ್ನಡೆ

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 329 ರನ್‌ಗಳಿಗೆ ಆಲೌಟ್ ಆಗಿತ್ತು. ಇದರ ಬೆನ್ನಲ್ಲೇ 55ರನ್‌ಗೆ 6 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್ಗೆ ಜಾನಿ ಬೈಸ್ಟ್ರೋವ್ 162, ಜೇಮಿ ಓವರ್ಟನ್ 97ರನ್‌ಗಳ ನೆರವಿನಿಂದ 360ರನ್ ಕಲೆಹಾಕಿತು. ಜೊತೆಗೆ ಅಮೂಲ್ಯವಾದ 31ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿತು.

ಇದಕ್ಕೆ ಉತ್ತರವಾಗಿ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲೆಂಡ್ ಟೀ ವಿರಾಮದ ವೇಳೆಗೆ ಎರಡನೇ ಇನ್ನಿಂಗ್ಸ್‌ 1 ವಿಕೆಟ್ ನಷ್ಟಕ್ಕೆ 125 ರನ್ ಕಲೆಹಾಕಿದೆ. ಜೊತೆಗೆ 94ರನ್‌ಗಳ ಮುನ್ನಡೆ ಸಾಧಿಸಿದೆ.

ಇದಕ್ಕೂ ಮೊದಲು ನ್ಯೂಜಿಲೆಂಡ್ ಪರ 4, ಟಿಮ್ ಸೌಥಿ 3, ವ್ಯಾಗ್ನರ್ 2, ಬ್ರೇಸ್‌ವೆಲ್ 1 ವಿಕೆಟ್ ಪಡೆದರು.

Story first published: Saturday, June 25, 2022, 20:17 [IST]
Other articles published on Jun 25, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+