ರಣಜಿ ಫೈನಲ್: ರಜತ್ ಪಾಟೀದಾರ್ ಶತಕ, ಮುಂಬೈ ವಿರುದ್ಧ ಮಧ್ಯಪ್ರದೇಶ ಮೇಲುಗೈ

ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಮೇಲುಗೈ ಸಾಧಿಸಿದ್ದು, ಟ್ರೋಫಿ ಮೇಲೆ ತನ್ನ ಕೈ ಇಟ್ಟಿದೆ. ನಾಲ್ಕನೇ ದಿನದಾಟದಂತ್ಯಕ್ಕೆ ಮುಂಬೈ ಎರಡು ವಿಕೆಟ್ ನಷ್ಟಕ್ಕೆ 113ರನ್ ಕಲೆಹಾಕಿದ್ದು, ಇನ್ನೂ ಲೀಡ್ ಪಡೆಯಲು 49ರನ್‌ಗಳ ಹಿನ್ನಡೆಯಲ್ಲಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 162ರನ್‌ಗಳ ಮುನ್ನಡೆ ಸಾಧಿಸಿದ ಮಧ್ಯಪ್ರದೇಶ ತಂಡವು ಬೃಹತ್ ಮೊತ್ತ ಕಲೆಹಾಕಿತು. ಮುಂಬೈ ಬೌಲರ್‌ಗಳನ್ನ ಇನ್ನಿಲ್ಲದಂತೆ ಕಾಡಿದ ರಜತ್ ಪಾಟೀದಾರ್ ಅದ್ಭುತ ಇನ್ನಿಂಗ್ಸ್ ಆಡಿದರು.

ರಜತ್ ಪಾಟೀದಾರ್ ಆಕರ್ಷಕ ಶತಕ, ಪ್ರಾಬಲ್ಯ ಸಾಧಿಸಿದ ಮಧ್ಯಪ್ರದೇಶ
ಮಧ್ಯಪ್ರದೇಶ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮೂವರು ಬ್ಯಾಟರ್‌ಗಳಲ್ಲಿ ರಜತ್ ಪಾಟೀದಾರ್ ಕೂಡ ಒಬ್ಬರು. ಐಪಿಎಲ್ 2022ರ ಸೀಸನ್‌ನಲ್ಲಿ ಆರ್‌ಸಿಬಿ ಪರ ಉತ್ತಮ ಆಟವಾಡಿದ ಪಾಟೀದಾರ್, ರಣಜಿಯಲ್ಲೂ ತಮ್ಮ ಅಮೋಘ ಫಾರ್ಮ್ ಮುಂದುವರಿಸಿದ್ದಾರೆ.
ಮೂರನೇ ದಿನದಾಟದಲ್ಲಿ 106 ಎಸೆತಗಳಲ್ಲಿ ಅಜೇಯ 67 ರನ್ ಕಲೆಹಾಕಿದ್ದ ರಜತ್ ಪಾಟೀದಾರ್ ನಾಲ್ಕನೇ ದಿನದಾಟದಲ್ಲಿ ಮೂರಂಕಿ ಗಡಿದಾಟಿದರು. 219 ಎಸೆತಗಳಲ್ಲಿ 122ರನ್ ಕಲೆಹಾಕಿದ ಪಾಟೀದಾರ್ ಇನ್ನಿಂಗ್ಸ್‌ನಲ್ಲಿ 20 ಬೌಂಡರಿಗಳಿದ್ದವು.

536ರನ್ ದಾಖಲಿಸಿದ ಮಧ್ಯಪ್ರದೇಶ
ರಜತ್ ಪಾಟೀದಾರ್ ಅಮೋಘ ಶತಕ (122ರನ್) ಜೊತೆಗೆ ಕೆಳಕ್ರಮಾಂಕದಲ್ಲಿ ಸರನ್ಷ್ ಜೈನ್ 57 ರನ್‌ಗಳ ಕೊಡುಗೆಯಿಂದಾಗಿ ಮಧ್ಯಪ್ರದೇಶ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 536ರನ್‌ಗಳ ಬೃಹತ್ ರನ್ ಕಲೆಹಾಕಲು ಸಾಧ್ಯವಾಯಿತು. ಜೊತೆಗೆ 162ರನ್‌ಗಳ ಮುನ್ನಡೆ ಪಡೆಯಿತು.
ಇದಕ್ಕೂ ಮೊದಲು ಓಪನರ್ ಯಶ್ ದುಬೆ ಮತ್ತು ಶುಭಂ ಎಸ್. ಶರ್ಮಾ ಬೊಂಬಾಟ್ ಶತಕದ ನೆರವಿನಿಂದ ಮಧ್ಯಪ್ರದೇಶ ತಂಡವು ಇಷ್ಟು ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ಮುಂಬೈ ಪರ ಶಮ್ಸ್ ಮುಲಾನಿ 5, ತುಷಾರ್ ದೇಶಪಾಂಡೆ 3, ಮೋಹಿತ್ ಅವಸ್ತಿ 2 ವಿಕೆಟ್ ಪಡೆದಿದ್ದಾರೆ.
1983ರ ವಿಶ್ವಕಪ್ ಗೆಲುವಿಗೆ 39 ವರ್ಷ: ಕಪಿಲ್ ದೇವ್‌ಗೆ ಒಲಿದು ಬಂದಿರುವ ಪ್ರಶಸ್ತಿಗಳೆಷ್ಟು ಗೊತ್ತಾ?

ಇನ್ನೂ 49ರನ್‌ಗಳ ಹಿನ್ನಡೆಯಲ್ಲಿರುವ ಮುಂಬೈ
ಮಧ್ಯಪ್ರದೇಶದ 162ರನ್‌ಗಳ ಮುನ್ನಡೆಗೆ ಉತ್ತರವಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಮುಂಬೈ ನಾಲ್ಕನೇ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 113ರನ್ ಕಲೆಹಾಕಿದೆ. ಮುಂಬೈ ಪರ ಪೃಥ್ವಿ ಶಾ 44, ಹಾರ್ದಿಕ್ ತಮೋರ್ 25, ಅರ್ಮಾನ್ ಜಾಫರ್ ಅಜೇಯ 30, ಸುವೇದ್ ಪಾರ್ಕರ್ ಅಜೇಯ 9 ರನ್ ಕಲೆಹಾಕಿದ್ದಾರೆ.
ಭಾರತ vs ಐರ್ಲೆಂಡ್ ಪ್ರಥಮ ಟಿ20: ಈ ಮೈಲಿಗಲ್ಲುಗಳ ಮೇಲೆ ಪಾಂಡ್ಯ, ಡಿಕೆ ಮತ್ತು ರಾಹುಲ್ ತ್ರಿಪಾಠಿ ಕಣ್ಣು

ಉಭಯ ತಂಡಗಳ ಪ್ಲೇಯಿಂಗ್ 11
ಮುಂಬೈ
ಪೃಥ್ವಿ ಶಾ(ನಾಯಕ), ಯಶಸ್ವಿ ಜೈಸ್ವಾಲ್, ಅರ್ಮಾನ್ ಜಾಫರ್, ಸುವೇದ್ ಪರ್ಕರ್, ಸರ್ಫರಾಜ್ ಖಾನ್, ಹಾರ್ದಿಕ್ ತಮೋರ್(ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಧವಲ್ ಕುಲಕರ್ಣಿ, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ
ಮಧ್ಯಪ್ರದೇಶ
ಯಶ್ ದುಬೆ, ಹಿಮಾಂಶು ಮಂತ್ರಿ(ವಿಕೆಟ್ ಕೀಪರ್), ಶುಭಂ ಎಸ್ ಶರ್ಮಾ, ರಜತ್ ಪಾಟಿದಾರ್, ಆದಿತ್ಯ ಶ್ರೀವಾಸ್ತವ(ನಾಯಕ), ಅಕ್ಷತ್ ರಘುವಂಶಿ, ಸರನ್ಶ್ ಜೈನ್, ಕುಮಾರ್ ಕಾರ್ತಿಕೇಯ, ಅನುಭವ್ ಅಗರ್ವಾಲ್, ಗೌರವ್ ಯಾದವ್, ಪಾರ್ಥ್ ಸಹಾನಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications