Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ENG vs NZ: ಟೆಸ್ಟ್‌ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ವಿಶ್ವದ 14ನೇ ಆಟಗಾರ ಜೋ ರೂಟ್

ENG vs NZ: Joe Root Is the Worlds 14th Player To 10,000 Runs In Test Cricket

ಭಾನುವಾರದಂದು (ಜೂನ್ 5) ಮುಕ್ತಾಯವಾದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಗೆಲುವು ಸಾಧಿಸಿದೆ.

ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿದ ಇಂಗ್ಲೆಂಡ್, ಮೂರು ಪಂದ್ಯಗಳ ಸರಣಿಯಲ್ಲಿ ನಿರ್ಣಾಯಕ 1-0 ಮುನ್ನಡೆ ಸಾಧಿಸಿತು.

Eng vs NZ ಮೊದಲ ಟೆಸ್ಟ್‌: ರೂಟ್ ಅಜೇಯ ಶತಕ, ಅದ್ಭುತ ಕಂಬ್ಯಾಕ್ ಮಾಡಿದ ಇಂಗ್ಲೆಂಡ್‌ಗೆ ಗೆಲುವು

ಇಂಗ್ಲೆಂಡ್‌ನ ಮಾಜಿ ಟೆಸ್ಟ್ ನಾಯಕ ಜೋ ರೂಟ್ ಭಾನುವಾರದಂದು ಟೆಸ್ಟ್ ಸ್ವರೂಪದಲ್ಲಿ 10,000 ರನ್ ಪೂರೈಸಿದ ವಿಶ್ವದ 14ನೇ ಆಟಗಾರ ಮತ್ತು ಎರಡನೇ ಇಂಗ್ಲೆಂಡ್ ಆಟಗಾರ ಎಂಬ ಹೆಗ್ಗಳಿಕೆ ಪಡೆದರು.

ENG vs NZ: Joe Root Is the Worlds 14th Player To 10,000 Runs In Test Cricket

31ರ ಹರೆಯದ ಜೋ ರೂಟ್ ಲಾರ್ಡ್ಸ್ ಅಂಗಳದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್‌ನ 4ನೇ ದಿನದಂದು 10,000 ರನ್‌ಗಳ ಮೈಲಿಗಲ್ಲು ಸಾಧಿಸಿದರು. ಜೋ ರೂಟ್ ತಮ್ಮ 26ನೇ ಟೆಸ್ಟ್ ಶತಕವನ್ನು ದಾಖಲಿಸಿದರು ಮತ್ತು ಅವರ ಟೆಸ್ಟ್ ಹಾದಿಯಲ್ಲಿ 10,000 ಟೆಸ್ಟ್ ರನ್‌ಗಳನ್ನು ತಲುಪಿದರು.

ಇಂಗ್ಲೆಂಡ್ ಮಾಜಿ ನಾಯಕ ಅಲಸ್ಟೈರ್ ಕುಕ್ (12,472) ಮಾತ್ರ ಇಂಗ್ಲೆಂಡ್ ಪರ ಜೋ ರೂಟ್‌ಗಿಂತ ಹೆಚ್ಚು ರನ್ ಗಳಿಸಿದ್ದಾರೆ. ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ (15921) ಟೆಸ್ಟ್ ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

ಜೋ ರೂಟ್ 170 ಎಸೆತಗಳಲ್ಲಿ ಅಜೇಯ 115 ರನ್‌ಗಳನ್ನು ಗಳಿಸಿ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಲು ಮತ್ತು ಮೂರು ಪಂದ್ಯಗಳ ಸರಣಿಯಲ್ಲಿ ಆರಂಭಿಕ 1-0 ಮುನ್ನಡೆ ಸಾಧಿಸಲು ಸಹಾಯ ಮಾಡಿದರು.

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕಲ್ ವಾನ್, "ಇಂಗ್ಲೆಂಡ್‌ನ ಸರ್ವಕಾಲಿಕ ಆಲ್‌ರೌಂಡ್‌ ಬ್ಯಾಟರ್ ಅತ್ಯಂತ ಸಂಪೂರ್ಣವಾದ ಆಟವಾಡಿದ್ದಾರೆ," ಎಂದು ಹೇಳಿದ್ದಾರೆ.

ENG vs NZ: Joe Root Is the Worlds 14th Player To 10,000 Runs In Test Cricket

ಲಾರ್ಡ್ಸ್ ಟೆಸ್ಟ್: ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್‌ಗೆ ಜಯ
ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಮೊದಲ ಟೆಸ್ಟ್ ಗೆದ್ದು 1-0 ಮುನ್ನಡೆ ಸಾಧಿಸಿದೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಆರಂಭಿಕ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಅನ್ನು ಐದು ವಿಕೆಟ್‌ಗಳಿಂದ ಸೋಲಿಸಿತು

ನಾಲ್ಕನೇ ದಿನದ ಆಟದ ಪ್ರಾರಂಭದಲ್ಲಿ ಇಂಗ್ಲೆಂಡ್ ತಂಡ ಐದು ವಿಕೆಟ್‌ಗಳ ಕೈಯಲ್ಲಿ ಗೆಲ್ಲಲು ಸುಮಾರು 60 ರನ್‌ಗಳ ಅಗತ್ಯವಿರುವುದರಿಂದ ಆಟವು ರೋಚಕವಾಗಿತ್ತು. ಈ ವೇಳೆ ಮಾಜಿ ನಾಯಕ ಜೋ ರೂಟ್ ಅವರ ಜವಾಬ್ದಾರಿಯುತ ಆಟದಿಂದ ಪ್ರವಾಸಿ ತಂಡ ನ್ಯೂಜಿಲೆಂಡ್ ಮೊದಲ ಟೆಸ್ಟ್‌ನಲ್ಲಿ ಸೋಲಬೇಕಾಯಿತು.

ಆಟ ಗೆಲ್ಲುವ ಯಾವುದೇ ಅವಕಾಶವನ್ನು ಹೊಂದಲು ಯಾರ್ಕ್‌ಷೈರ್‌ಮನ್‌ ಜೋ ರೂಟ್‌ನನ್ನು ನ್ಯೂಜಿಲೆಂಡ್ ತಂಡ ಮೊದಲು ಔಟ್ ಮಾಡಬೇಕೆಂದು ಗೊತ್ತಾಗಿದೆ. ಆದರೆ ಜೋ ರೂಟ್ ಅವರು ಪ್ರವಾಸಿ ತಂಡಕ್ಕೆ ಗೆಲ್ಲಲು ಅವಕಾಶ ನೀಡದಂತೆ ನೋಡಿಕೊಂಡರು.

ಜೂನ್ 10ರಿಂದ ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದೆ.

Story first published: Monday, June 6, 2022, 9:38 [IST]
Other articles published on Jun 6, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+