For Quick Alerts
ALLOW NOTIFICATIONS  
For Daily Alerts
 

ENG vs NZ 2nd Test: ಇಂಗ್ಲೆಂಡ್ ವಿರುದ್ಧ 1 ರನ್‌ನಿಂದ ಗೆದ್ದು ದಾಖಲೆ ನಿರ್ಮಿಸಿದ ನ್ಯೂಜಿಲೆಂಡ್!

ENG vs NZ Test Series: New Zealand Beat England By 1 Run In 2nd Test Match and Create Histrory

ಮಂಗಳವಾರ, ಫೆಬ್ರವರಿ 28ರಂದು ವೆಲ್ಲಿಂಗ್ಟನ್‌ನಲ್ಲಿ ಮುಕ್ತಾಯಗೊಂಡ ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದ 5ನೇ ದಿನದಂದು ಪ್ರವಾಸಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ನ್ಯೂಜಿಲೆಂಡ್ ತಂಡ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 1 ರನ್‌ನಿಂದ ಟೆಸ್ಟ್ ಪಂದ್ಯವನ್ನು ಗೆದ್ದ ವಿಶ್ವದ ಎರಡನೇ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಇದಕ್ಕೂ ಮುನ್ನ 1993ರಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಅವರದೇ ನೆಲದಲ್ಲಿ 1 ರನ್ ಅಂತರದಿಂದ ಸೋಲಿಸಿದ ವೆಸ್ಟ್ ಇಂಡೀಸ್ ಈ ಸಾಧನೆ ಮಾಡಿದ ಮೊದಲ ತಂಡವಾಗಿದೆ.

ಟಾಮ್ ಬ್ಲಂಡೆಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಒಲಿದ ಜಯ

ಟಾಮ್ ಬ್ಲಂಡೆಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಒಲಿದ ಜಯ

ಇದೇ ವೇಳೆ, ಟಿಮ್ ಸೌಥಿ ನಾಯಕತ್ವದ ನ್ಯೂಜಿಲೆಂಡ್ ತಂಡವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಫಾಲೋ-ಆನ್ ನಂತರವೂ ಪಂದ್ಯವನ್ನು ಗೆದ್ದ ವಿಶ್ವದ ನಾಲ್ಕನೇ ತಂಡವೆಂಬ ದಾಖಲೆ ಬರೆದಿದೆ. ಇದಕ್ಕೂ ಮುನ್ನ 2001ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಟೆಸ್ಟ್ ಪಂದ್ಯದಲ್ಲಿ ಫಾಲೋ ಆನ್ ನಂತರ ಆಸ್ಟ್ರೇಲಿಯಾವನ್ನು ಬಗ್ಗುಬಡಿದು, ಗೆಲುವು ಸಾಧಿಸಿದ್ದ ಕೊನೆಯ ತಂಡವಾಗಿತ್ತು.

IND vs AUS 3rd Test: ಆಸ್ಟ್ರೇಲಿಯಾ ಇವರಿಬ್ಬರ ಮೇಲೆ ಹೆಚ್ಚು ಅವಲಂಬಿತವಾಗಿದೆ; ಗ್ಲೆನ್ ಮೆಕ್‌ಗ್ರಾತ್

ಇಂಗ್ಲೆಂಡ್ ಗೆಲುವಿಗೆ ಕೇವಲ 2 ರನ್‌ಗಳ ಅಗತ್ಯವಿದ್ದಾಗ ನೀಲ್ ವ್ಯಾಗ್ನರ್ ಬೌಲಿಂಗ್‌ನ 75ನೇ ಓವರ್‌ನ ಎರಡನೇ ಎಸೆತದಲ್ಲಿ ಜೇಮ್ಸ್ ಆಂಡರ್ಸನ್ ಅವರು ವಿಕೆಟ್‌ಕೀಪರ್ ಟಾಮ್ ಬ್ಲಂಡೆಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಔಟಾಗುವ ಮೂಲಕ ನ್ಯೂಜಿಲೆಂಡ್ ಕೇವಲ 1 ರನ್ ಅಂತರದಿಂದ ಗೆದ್ದು, ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿತು.

ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 258 ರನ್‌ಗಳ ಗುರಿ ನೀಡಲಾಗಿತ್ತು

ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 258 ರನ್‌ಗಳ ಗುರಿ ನೀಡಲಾಗಿತ್ತು

ಫಾಲೋ-ಆನ್‌ಗೆ ಒಳಗಾಗಿ ಎರಡನೇ ಆರಂಭಿಸಿದ್ದ ಆತಿಥೇಯ ನ್ಯೂಜಿಲೆಂಡ್ ತಂಡ ಕೆನ್ ವಿಲಿಯಮ್ಸನ್ ಅವರ ಭರ್ಜರಿ 26ನೇ ಟೆಸ್ಟ್ ಶತಕದ ನೆರವಿನಿಂದ 483 ರನ್ ಕಲೆ ಹಾಕಿತ್ತು. ಇದೇ ವೇಳೆ ನ್ಯೂಜಿಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೂ ಕೇನ್ ವಿಲಿಯಮ್ಸನ್ ಪಾತ್ರರಾದರು.

WPL 2023: ಗುಜರಾತ್ ಜೈಂಟ್ಸ್ ನಾಯಕಿಯಾಗಿ ಬೆತ್ ಮೂನಿ ನೇಮಕ; ಭಾರತೀಯ ಆಲ್‌ರೌಂಡರ್ ಉಪನಾಯಕಿ

ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 258 ರನ್‌ಗಳ ಗುರಿ ನೀಡಲಾಗಿತ್ತು. ನಾಲ್ಕನೇ ದಿನದಂತ್ಯಕ್ಕೆ ಇಂಗ್ಲೆಂಡ್ 5 ವಿಕೆಟ್‌ಗೆ 80 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ 153 ರನ್‌ ಗಳಿಸಿದ್ದ ಮಾಜಿ ನಾಯಕ ಜೋ ರೂಟ್, ಎರಡನೇ ಇನ್ನಿಂಗ್ಸ್‌ನಲ್ಲಿಯೂ 113 ಎಸೆತಗಳಲ್ಲಿ 95 ರನ್‌ ಬಾರಿಸಿ ಗೆಲುವನ್ನು ಖಚಿತಪಡಿಸಿದ್ದರು.

ನ್ಯೂಜಿಲೆಂಡ್ ತಂಡಕ್ಕೆ ವಿಜಯಮಾಲೆ ತಂದುಕೊಟ್ಟ ನೀಲ್ ವ್ಯಾಗ್ನರ್

ನ್ಯೂಜಿಲೆಂಡ್ ತಂಡಕ್ಕೆ ವಿಜಯಮಾಲೆ ತಂದುಕೊಟ್ಟ ನೀಲ್ ವ್ಯಾಗ್ನರ್

ಆದರೆ ನೀಲ್ ವ್ಯಾಗ್ನರ್ ಅವರು ಜೋ ರೂಟ್ ಮತ್ತು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (32 ರನ್) ನಿರ್ಣಾಯಕ ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ವಿಜಯಮಾಲೆ ತಂದುಕೊಟ್ಟರು. ನೀಲ್ ವ್ಯಾಗ್ನರ್ ಎರಡನೇ ಇನ್ನಿಂಗ್ಸ್‌ನಲ್ಲಿ 62 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಪಡೆದರು.

ಇನ್ನು ನಾಯಕ ಟಿಮ್ ಸೌಥಿ 45 ರನ್ ನೀಡಿ 3 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ 75 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಶತಕವೀರ ಕೇನ್ ವಿಲಿಯಮ್ಸನ್ 'ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದರೆ, ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ 2 ಪಂದ್ಯಗಳಲ್ಲಿ 329 ರನ್ ಬಾರಿಸಿದ್ದಕ್ಕಾಗಿ 'ಸರಣಿಶ್ರೇಷ್ಠ' ಪ್ರಶಸ್ತಿಗೆ ಭಾಜನರಾದರು.

Story first published: Tuesday, February 28, 2023, 9:48 [IST]
Other articles published on Feb 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+