ENG vs PAK: ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಪಾಕಿಸ್ತಾನದ ಏಕೈಕ ನಾಯಕ ಬಾಬರ್ ಅಜಂ

ಡಿಸೆಂಬರ್ 19, ಸೋಮವಾರ ಕರಾಚಿಯ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ ಮೂರನೇ ದಿನದಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ನಾಯಕತ್ವದಲ್ಲಿ ಹೊಸ ಸಾಧನೆಯನ್ನು ಮಾಡಿದ್ದಾರೆ.
ಬಾಬರ್ ಅಜಂ ಒಂದು ಕ್ಯಾಲೆಂಡರ್ ವರ್ಷದಲ್ಲಿ 1000ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ ಮೊದಲ ಪಾಕಿಸ್ತಾನ ತಂಡದ ನಾಯಕರಾದರು. ಬಾಬರ್ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 104 ಎಸೆತಗಳಲ್ಲಿ ಏಳು ಬೌಂಡರಿಗಳ ಸಹಾಯದಿಂದ 54 ರನ್ ಗಳಿಸಿದ್ದಾರೆ. 53ನೇ ಓವರ್‌ನಲ್ಲಿ ಇಂಗ್ಲೆಂಡ್ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ರೆಹಾನ್ ಅಹ್ಮದ್ ಅವರ ಎಸೆತದಲ್ಲಿ ಬಾಬರ್ ಅಜಂ ಔಟಾದರು.
ಅವರು ಒಂದು ವರ್ಷದಲ್ಲಿ 1,000 ತಲುಪಿದ ಆರನೇ ಪಾಕಿಸ್ತಾನಿ ಬ್ಯಾಟರ್ ಆಗಿದ್ದಾರೆ. ಇನ್ನು ಬಾಬರ್ ಅಜಂ ಅವರು ಒಂದು ಕ್ಯಾಲೆಂಡರ್ ವರ್ಷದಲ್ಲಿ 1,000 ಟೆಸ್ಟ್ ರನ್ ಗಳಿಸಿದ ಆರು ವರ್ಷಗಳಲ್ಲಿ ಮೊದಲ ಪಾಕಿಸ್ತಾನಿ ಬ್ಯಾಟರ್ ಎನಿಸಿಕೊಂಡರು.

ಆರು ಇನ್ನಿಂಗ್ಸ್‌ಗಳಲ್ಲಿ 348 ರನ್‌ಗಳನ್ನು ದಾಖಲಿದರು
ಬಾಬರ್ ಅಜಂ ಅವರ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್ ಹೊರತಾಗಿಯೂ, ಪಾಕಿಸ್ತಾನ ತಂಡವು ತವರು ನೆಲದಲ್ಲಿ ಮೊಟ್ಟಮೊದಲ ಬಾರಿಗೆ 3-0 ಸರಣಿ ವೈಟ್‌ವಾಶ್ ಮುಖಭಂಗ ಅನುಭವಿಸಲು ಎದುರು ನೋಡುತ್ತಿದೆ.
ಪಾಕಿಸ್ತಾನದ ನಾಯಕ ಬಾಬರ್ ಅಜಂ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 78 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 54 ರನ್ ಸೇರಿಸಿದರು. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಬಾಬರ್ ಅಜಂ 58 ಸರಾಸರಿಯಲ್ಲಿ ಆರು ಇನ್ನಿಂಗ್ಸ್‌ಗಳಲ್ಲಿ 348 ರನ್‌ಗಳನ್ನು ದಾಖಲಿಸಿದರು.

ಬಾಬರ್ ಅಜಂ 15 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 1009 ರನ್
2022ರಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ 15 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 67.26 ಸರಾಸರಿಯಲ್ಲಿ ಮೂರು ಶತಕಗಳು ಮತ್ತು ಏಳು ಅರ್ಧಶತಕಗಳನ್ನು ಒಳಗೊಂಡಂತೆ 1009 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ಈ ಮೈಲಿಗಲ್ಲು ಸಾಧಿಸಿದ ಏಕೈಕ ಪಾಕಿಸ್ತಾನ ತಂಡದ ನಾಯಕ ಎನಿಸಿದರು.
ಡಿಸೆಂಬರ್ 26 ಮತ್ತು 30ರ ನಡುವಿನ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿರುವಾಗ ಬಾಬರ್ ಅಜಂ ಸ್ಕೋರಿಗೆ ಹೆಚ್ಚಿನ ರನ್ ಸೇರಿಸಲು ಇನ್ನೂ ಎರಡು ಟೆಸ್ಟ್ ಇನ್ನಿಂಗ್ಸ್‌ಗಳನ್ನು ಆಡಲಿದ್ದಾರೆ.

2005ರಲ್ಲಿ ರಿಕಿ ಪಾಂಟಿಂಗ್ ಮಾಡಿದ್ದ ದಾಖಲೆಯನ್ನು ಸರಿಗಟ್ಟಿದ ಬಾಬರ್
ಒಂದು ಕ್ಯಾಲೆಂಡರ್ ವರ್ಷದಲ್ಲಿ ಎಲ್ಲಾ ಸ್ವರೂಪಗಳಲ್ಲಿ ನಾಯಕನಿಂದ ಅತಿ ಹೆಚ್ಚು 50-ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ಬಾಬರ್ ಅಜಂ ಮಾಜಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರೊಂದಿಗೆ ಸಮಬಲ ಸಾಧಿಸಿದರು.
ಬಾಬರ್ ಅಜಂ ಈ ವರ್ಷದಲ್ಲಿ 10 ಟೆಸ್ಟ್ ಅರ್ಧಶತಕ, 8 ಏಕದಿನ ಅರ್ಧಶತಕ ಮತ್ತು 6 ಟಿ20 ಅರ್ಧಶತಕಗಳು ಸೇರಿ ಒಟ್ಟು 24 ಅರ್ಧಶತಕ ಸ್ಕೋರ್‌ಗಳನ್ನು ದಾಖಲಿಸುವ ಮೂಲಕ, 2005ರಲ್ಲಿ ರಿಕಿ ಪಾಂಟಿಂಗ್ ಸಾಧಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಪ್ರವಾಸಿ ತಂಡ ಇಂಗ್ಲೆಂಡ್‌ನ ಜೋ ರೂಟ್ 2022ರಲ್ಲಿ 15 ಟೆಸ್ಟ್‌ಗಳಲ್ಲಿ 1,098 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಉಸ್ಮಾನ್ ಖವಾಜಾ 10 ಟೆಸ್ಟ್‌ಗಳಲ್ಲಿ 1,079 ರನ್
ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ 10 ಟೆಸ್ಟ್‌ಗಳಲ್ಲಿ 1,079 ರನ್ ಮತ್ತು ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ 10 ಟೆಸ್ಟ್‌ಗಳಲ್ಲಿ 1,061 ರನ್ ಗಳಿಸಿ ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಇತರ ಬ್ಯಾಟರ್‌ಗಳು.
ಪಾಕಿಸ್ತಾನದ ಪರವಾಗಿ ಯೂನಿಸ್ ಖಾನ್ ಎರಡು ಬಾರಿ ಈ ಸಾಧನೆ ಮಾಡಿದ್ದರು, 2006ರಲ್ಲಿ 1,179 ರನ್ ಮತ್ತು 2014ರಲ್ಲಿ 1,064 ರನ್ ಗಳಿಸಿದ್ದರು.
ಒಂದು ವರ್ಷದಲ್ಲಿ 1,000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಇತರ ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳೆಂದರೆ, ಮೊಹಮ್ಮದ್ ಯೂಸುಫ್ 2006ರಲ್ಲಿ 1,788 ರನ್, ಇಂಜಮಾಮ್-ಉಲ್-ಹಕ್ 2000ರಲ್ಲಿ 1,090 ರನ್, ಅಜರ್ ಅಲಿ 2016ರಲ್ಲಿ 1,198 ರನ್ ಮತ್ತು ಮೊಹ್ಸಿನ್ ಖಾನ್ 1982ರಲ್ಲಿ 1,029 ರನ್ ಗಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications