ENG vs SA 1st ODI: ಪಂದ್ಯದ ಪ್ರಿವ್ಯೂ, ಪ್ಲೇಯಿಂಗ್ 11, ಪಿಚ್ ಮತ್ತು ಹವಾಮಾನ ವರದಿ

ಭಾರತ ವಿರುದ್ಧ ಟಿ20 ಹಾಗೂ ಏಕದಿನ ಸರಣಿಯಲ್ಲಿ ಮುಗ್ಗರಿಸಿದ ಬಳಿಕ ಇಂಗ್ಲೆಂಡ್ ತಂಡವು ಮಂಗಳವಾರ(ಜುಲೈ 19)ದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನಾಡಲಿದೆ, ರಿವರ್‌ಸೈಡ್ ಗ್ರೌಂಡ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ ಜಾಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ಮತ್ತು ಟೆಂಬಾ ಬವುಮಾ ಅನುಪಸ್ಥಿತಿಯಲ್ಲಿ ಕೇಶವ್ ಮಹಾರಾಜ ನಾಯಕತ್ವದ ಹರಿಣಗಳ ಪಡೆ ಸಜ್ಜಾಗಿದೆ.
ಇಂಗ್ಲೆಂಡ್ ಕಳೆದ ಆರು ಲಿಮಿಟೆಡ್ ಓವರ್ ಪಂದ್ಯಗಳಲ್ಲಿ ಭಾರತ ವಿರುದ್ಧ ನಾಲ್ಕು ಪಂದ್ಯಗಳನ್ನ ಸೋತಿರುವುದು ತಂಡವನ್ನ ಚಿಂತೆಗೀಡು ಮಾಡಿದೆ. ಹೊಸ ನಾಯಕ ಜಾಸ್ ಬಟ್ಲರ್ ನಾಯಕತ್ವದಲ್ಲಿ ಎರಡು ಸರಣಿಗಳಲ್ಲಿ ಇಂಗ್ಲೆಂಡ್ ಸೋತು ನಿರಾಸೆ ಅನುಭವಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಆಟವಾಡುವ ನಿರೀಕ್ಷೆ ಹೊಂದಿದೆ.

ಬೆನ್ ಸ್ಟೋಕ್ಸ್‌ಗೆ ಅಂತಿಮ ಏಕದಿನ ಪಂದ್ಯ!
ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಈಗಾಗಲೇ ಏಕದಿನ ಫಾರ್ಮೆಟ್‌ಗೆ ನಿವೃತ್ತಿ ಹೊಂದಿದ್ದು, ತನ್ನ ತವರಿನಲ್ಲಿ ಅಂತಿಮ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಸೋಮವಾರ (ಜು.18) ಏಕದಿನ ಫಾರ್ಮೆಟ್‌ಗೆ ನಿವೃತ್ತಿ ಘೋಷಿಸುವುದಾಗಿ ಬೆನ್ ಸ್ಟೋಕ್ಸ್ ಪ್ರಕಟಿಸುವ ಮೂಲಕ ಅವರ ಎಲ್ಲಾ ಅಭಿಮಾನಿಗಳಿಗೆ ಆಘಾತ ನೀಡಿದರು.
ಮೂರು ಫಾರ್ಮೆಟ್ ಕ್ರಿಕೆಟ್ ಆಡುವುದು ನನಗೆ ಸವಾಲಿನ ವಿಷಯವಾಗಿದೆ. ಜೊತೆಗೆ ಸತತ ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಗಳನ್ನ ಆಡುವುದು ಸಾಧ್ಯವಾಗದ ಕಾರಣ ಎಂದು ಏಕದಿನ ಫಾರ್ಮೆಟ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಬೆನ್ ಸ್ಟೋಕ್ಸ್ 104 ಏಕದಿನ ಪಂದ್ಯಗಳನ್ನಾಡಿದ್ದು, 39.44ರ ಸರಾಸರಿಯಲ್ಲಿ 2,919 ರನ್ ಮತ್ತು 74 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿರುವುದು ನಾಚಿಕೆಗೇಡು: ನಾಸಿರ್ ಹುಸೇನ್

ಪಿಚ್ ರಿಪೋರ್ಟ್ ಮತ್ತು ಹವಾಮಾನ
ಭಾರತೀಯ ಕಾಲಮಾನ ಸಂಜೆ 5.30ಕ್ಕೆ ನಡೆಯಲಿರುವ ಪಂದ್ಯದಲ್ಲಿ ದಿನವಿಡೀ ಮೋಡ ಕವಿದ ವಾತಾವರಣವಿರುವುದರಿಂದ ಮಳೆಯು ಬರುವ ಸಾಧ್ಯತೆಯಿದೆ. ಸಂಜೆ ತಾಪಮಾನವು ಸುಮಾರು 18 ರಿಂದ 20 ಡಿಗ್ರಿಗಳಷ್ಟಿರುತ್ತದೆ ಮತ್ತು ಮಳೆಯು ಆಟಕ್ಕೆ ಅಡ್ಡಿಪಡಿಸಬಹುದು.
ಇಲ್ಲಿಯವರೆಗೆ ಈ ಮೈದಾನದಲ್ಲಿ 20 ಏಕದಿನ ಪಂದ್ಯಗಳನ್ನು ಆಡಲಾಗಿದ್ದು, 11 ಪಂದ್ಯಗಳನ್ನು ಚೇಸಿಂಗ್ ಮಾಡಿರುವ ತಂಡವು ಗೆದ್ದಿದೆ ಮತ್ತು ಏಳು ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 250 ಕ್ಕೆ ಸಮೀಪದಲ್ಲಿದೆ, ಇದು ಚೇಸಿಂಗ್ ಮಾಡುವಾಗ 200 ಕ್ಕೆ ಇಳಿಯುತ್ತದೆ. ಎರಡು ಪವರ್-ಹೌಸ್ ಬ್ಯಾಟಿಂಗ್ ತಂಡಗಳು ರನ್ ಹರಿಸುವ ಸಾಧ್ಯತೆ ಹೆಚ್ಚಿಸಿದೆ.
2021 ರಲ್ಲಿ ಡರ್ಹಾಮ್ ವಿರುದ್ಧದ ಸೆಮಿ-ಫೈನಲ್‌ನಲ್ಲಿ ಸರ್ರೆಯ 280/8 ರನ್ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ 230ರನ್‌ಗೆ ಡರ್ಹಾಮ್ ಪತನಗೊಂಡಿತು. ಈ ಪಂದ್ಯದಲ್ಲಿ ಸೀಮರ್‌ಗಳು ಹೆಚ್ಚು ವಿಕೆಟ್‌ಗಳನ್ನು ಪಡೆದರು.
ಏಕದಿನ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್ ಬಳಿ ಇರುವ ಆಸ್ತಿಯ ಮೊತ್ತ ಎಷ್ಟು?

ದಕ್ಷಿಣ ಆಫ್ರಿಕಾ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಸ್ಸಿ ವ್ಯಾನ್ ಡರ್ ಡಸ್ಸೆನ್, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್ (ನಾಯಕ), ಎನ್ರಿಕ್ ನೊರ್ಕಿಯಾ, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ

ಇಂಗ್ಲೆಂಡ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ವಿಲ್ಲಿ, ಕ್ರೇಗ್ ಓವರ್‌ಟನ್, ಬ್ರೈಡನ್ ಕಾರ್ಸೆ, ರೀಸ್ ಟೋಪ್ಲಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications