Eng vs SA 2nd Test: ನಾಯಕನಾದ ಬಳಿಕ, ಮೊಟ್ಟ ಮೊದಲ ಟೆಸ್ಟ್ ಶತಕ ಸಿಡಿಸಿದ ಬೆನ್‌ಸ್ಟೋಕ್ಸ್

ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ವಿರುದ್ಧ ಇಂಗ್ಲೆಂಡ್ ಭರ್ಜರಿ ಮುನ್ನಡೆ ಸಾಧಿಸಿದ್ದು, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅಮೋಘ ಶತಕ ದಾಖಲಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಶತಕ ಸಿಡಿಸಿದ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಇಂಗ್ಲೆಂಡ್ ನಾಯಕನಾಗಿ ಆಯ್ಕೆಯಾದ ಬಳಿಕ ಮೊಟ್ಟ ಮೊದಲ ಶತಕ ಸಿಡಿಸಿರುವುದು ಇದರ ವಿಶೇಷವಾಗಿದೆ. ಬೆನ್‌ಫೋಕ್ಸ್ ಜೊತೆಗೆ ಆರನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಬೆನ್ ಸ್ಟೋಕ್ಸ್ 158 ಎಸೆತಗಳಲ್ಲಿ ಮೂರಂಕಿ ಗಡಿದಾಟಿದರು. ಇವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 3 ಅಮೋಘ ಸಿಕ್ಸರ್ ಒಳಗೊಂಡಿವೆ.
ಶತಕ ಸಿಡಿಸಿದ ಬೆನ್ನಲ್ಲೇ ಬೆನ್‌ಸ್ಟೋಕ್ಸ್ ವಿಕೆಟ್ ಒಪ್ಪಿಸಿ ನಿರಾಸೆಯಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಕಗಿಸೊ ರಬಾಡ ಬೌಲಿಂಗ್‌ನ 90ನೇ ಓವರ್‌ನಲ್ಲಿ ಡೀನ್ ಎಲ್ಗರ್‌ಗೆ ಕ್ಯಾಚಿತ್ತು 103ರನ್‌ಗೆ ಔಟಾದರು. ಒಟ್ಟಾರೆ 163 ಎಸೆತಗಳಲ್ಲಿ 103 ರನ್ ಕಲೆಹಾಕಿದ್ದು, 6 ಬೌಂಡರಿ ಮತ್ತು 3 ಸಿಕ್ಸರ್ ಜೊತೆಗೆ 63.19 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.
ಆರನೇ ವಿಕೆಟ್‌ಗೆ ಬೆನ್‌ಸ್ಟೋಕ್ಸ್ ಶತಕ ಹಾಗೂ ವಿಕೆಟ್ ಕೀಪರ್ ಬೆನ್ ಫೋಕ್ಸ್ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ಲೀಡ್ 200 ಗಡಿಯತ್ತ ಸಮೀಪಿಸಿದೆ. ಬೆನ್ ಸ್ಟೋಕ್ಸ್ ವಿಕೆಟ್ ಒಪ್ಪಿಸಿದಾಗ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 320 ರನ್ ಕಲೆಹಾಕಿತು. ಬೆನ್ ಫೋಕ್ಸ್ ಕೂಡ ಶತಕದತ್ತ ದಾಪುಗಾಲಿಟ್ಟಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 151ರನ್‌ಗಳಿಗೆ ಆಲೌಟ್ ಆಗಿ ಹಿನ್ನಡೆ ಅನುಭವಿಸಿದೆ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ದಕ್ಷಿಣ ಆಫ್ರಿಕಾ
ಡೀನ್ ಎಲ್ಗರ್ (ನಾಯಕ), ಸರೆಲ್ ಎರ್ವೀ, ಕೀಗನ್ ಪೀಟರ್ಸನ್, ಏಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ಸೈಮನ್ ಹಾರ್ಮರ್ , ಕೇಶವ್ ಮಹಾರಾಜ್, ಕಗಿಸೊ ರಬಾಡ, ಆನ್ರಿಚ್ ನಾರ್ಟ್ಜೆ, ಲುಂಗಿ ಎನ್ಗಿಡಿ
ಬೆಂಚ್: ಲುಥೋ ಸಿಪಾಮ್ಲಾ, ಮಾರ್ಕೊ ಜಾನ್ಸೆನ್, ಖಯಾ ಜೊಂಡೋ, ರಿಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್
ಇಂಗ್ಲೆಂಡ್
ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್(ನಾಯಕ), ಬೆನ್ ಫೋಕ್ಸ್(ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಆಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್
ಬೆಂಚ್: ಮ್ಯಾಟಿ ಪಾಟ್ಸ್ , ಕ್ರೇಗ್ ಓವರ್ಟನ್, ಹ್ಯಾರಿ ಬ್ರೂಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications