Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಯಾಮ್ ಕರನ್‌ ಅನ್ನು ಹೆಗಲ ಮೇಲೆ ಹೊತ್ತು ನಡೆದ ಜಾನಿ ಬೈಸ್ಟ್ರೋವ್: ಗಾಯಾಳು ಎಂಬ ವದಂತಿಗೆ ತೆರೆ

Jonny bairstow

ಟೀಂ ಇಂಡಿಯಾ ವಿರುದ್ಧ ಏಕದಿನ ಹಾಗೂ ಟಿ20 ಸರಣಿ ಸೋತ ಬಳಿಕ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 1-1ರಿಂದ ಸರಣಿ ಸಮಬಲಗೊಳಿಸಿತು. ಆದ್ರೆ ಮುಂಬರುವ ಟಿ20 ಸರಣಿಯಲ್ಲಿ ಕಂಬ್ಯಾಕ್ ಮಾಡುವ ಯೋಜನೆ ರೂಪಿಸಿಕೊಂಡ ಬೆನ್ನಲ್ಲೇ ಜಾನಿ ಬೈರ್‌ಸ್ಟೋವ್ ಗಾಯಗೊಂಡಿದ್ದಾರೆ ಎಂಬ ವರದಿಗಳು ಬಂದಿದ್ದವು.

ಮೊದಲ ಟಿ20 ಪಂದ್ಯದಲ್ಲಿ ಜಾನಿ ಬೈಸ್ಟ್ರೋವ್ ಆಡುತ್ತಿಲ್ಲ ಎಂದೆಲ್ಲಾ ವರದಿಯಾಗಿತ್ತು. ವೀಡಿಯೋವೊಂದರಲ್ಲಿ ಅವರು ಜಿಮ್‌ನಲ್ಲಿ ಆಲ್‌ರೌಂಡರ್ ಸ್ಯಾಮ್ ಕರನ್‌ನನ್ನು ಎತ್ತಿದ್ದರಿಂದ ಗಾಯಗೊಂಡಿದ್ದಾರೆ ಎಂಬ ವದಂತಿಗೆ ಕಾರಣವಾಯಿತು. ಆದ್ರೆ ಈ ಎಲ್ಲಾ ವರದಿಗಳಿಗೆ ತೆರೆ ಎಳೆದಿರುವ ಜಾನಿ ನಾನು ಫಿಟ್ ಆಗಿದ್ದೇನೆ ಎಂದಿದ್ದಾರೆ.

ಜಾನಿ ಆಡುವುದು ಅನುಮಾನ ಎಂದು ವರದಿ ಮಾಡಿದ್ದ ಇಂಗ್ಲಿಷ್ ವೆಬ್‌ಸೈಟ್‌ಗಳು

ಜಾನಿ ಆಡುವುದು ಅನುಮಾನ ಎಂದು ವರದಿ ಮಾಡಿದ್ದ ಇಂಗ್ಲಿಷ್ ವೆಬ್‌ಸೈಟ್‌ಗಳು

ಕೆಲವು ಇಂಗ್ಲಿಷ್ ವೆಬ್‌ಸೈಟ್‌ಗಳು ಸ್ಯಾಮ್‌ ಕರಣ್‌ನನ್ನು ಎತ್ತಿಕೊಳ್ಳುವಾಗ ಬೈರ್‌ಸ್ಟೋ ಮೊಣಕಾಲಿನ ಗಾಯಕ್ಕೆ ಒಳಗಾದರು ಎಂದು ವರದಿ ಮಾಡಿದೆ. ಆದರೆ ಈ ಬಗ್ಗೆ ಜಾನಿ ಬೈರ್‌ಸ್ಟೋ ಪ್ರತಿಕ್ರಿಯಿಸಿದ್ದಾರೆ. ಅವರು ಫಿಟ್ ಆಗಿದ್ದು, ಟಿ20 ಸರಣಿಯ ಆರಂಭಿಕ ಪಂದ್ಯಕ್ಕೆ ಲಭ್ಯರಾಗಿದ್ದಾರೆ ಎಂದು ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡಿದ್ದ ವೀಡಿಯೋ

ಇಂಗ್ಲೆಂಡ್ ವೇಗದ ಬೌಲರ್ ರೀಸ್ ಟೋಪ್ಲಿ, ಬೇರ್ ಸ್ಟೋ ಅವರು ಬೌಲರ್ ಸ್ಯಾಮ್‌ ಕರಣ್ ಅವರನ್ನು ಎತ್ತುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಾಗ ವೈರಲ್ ಆಗಿತ್ತು. ವೀಡಿಯೊದಲ್ಲಿ, ಬೈರ್‌ಸ್ಟೋವ್ ಜಿಮ್‌ನಲ್ಲಿ ಕರಣ್‌ನನ್ನು ಹೊತ್ತುಕೊಂಡು ನಡೆಯುತ್ತಿರುವುದನ್ನು ಕಾಣಬಹುದು. ಬೇರ್‌ಸ್ಟೋವ್ ತನ್ನ ಭುಜದ ಮೇಲೆ ಎತ್ತಿದ ನಂತರ ಸಂಪೂರ್ಣವಾಗಿ ಮುಜುಗರಕ್ಕೊಳಗಾದನು. ಅವನ ಮುಖವು ಗಂಟಿಕ್ಕಿತು ಮತ್ತು ಅವನು ಭಾರವಾಗಿ ನಡೆದ ಪರಿಣಾಂ ಅವರು ಗಾಯಗೊಂಡರು ಎಂದು ಎಲ್ಲರೂ ಭಾವಿಸಿದ್ದರು.

ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿರುವ ಟೀಂ ಇಂಡಿಯಾ ನಾಯಕರು(ODI)

ಜಾನಿ ಬ್ಯಾಂಡೇಜ್ ಹಾಕಿಕೊಂಡಿದ್ದರು ಎಂದು ವರದಿ

ಜಾನಿ ಬ್ಯಾಂಡೇಜ್ ಹಾಕಿಕೊಂಡಿದ್ದರು ಎಂದು ವರದಿ

ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಬೈರ್‌ಸ್ಟೋ ಮಂಗಳವಾರ ಬ್ರಿಸ್ಟಲ್‌ನ ಕ್ರೀಡಾಂಗಣದಲ್ಲಿ ಅಭ್ಯಾಸದ ಅವಧಿಗೆ ಐಸ್ ಪ್ಯಾಕ್‌ಗಳು ಮತ್ತು ಎಡ ಮೊಣಕಾಲಿನ ಮೇಲೆ ಬ್ಯಾಂಡೇಜ್‌ನೊಂದಿಗೆ ಆಗಮಿಸುತ್ತಿರುವುದು ಕಂಡುಬಂದಿದೆ ಎಂದು ವರದಿಯಗಿತ್ತು. ಈ ಸಮಯದಲ್ಲಿ ಇನ್-ಫಾರ್ಮ್ ವಿಕೆಟ್‌ಕೀಪರ್-ಕಮ್-ಬ್ಯಾಟರ್ ಆಗಿರುವ ಬೈರ್‌ಸ್ಟೋ, ಲಾಕರ್ ರೂಮ್‌ಗೆ ಹಿಂತಿರುಗುವ ದಾರಿಯಲ್ಲಿ ಈ ವದಂತಿ ಬಗ್ಗೆ ತಿಳಿದಿದ್ದಾರೆ. ಹೀಗಾಗಿ ಬೈರ್‌ಸ್ಟೋವ್ ತನ್ನ ಸಾಮಾಜಿಕ ಮಾಧ್ಯಮದ ಮೂಲಕ ತಾನು ಫಿಟ್ ಆಗಿದ್ದೇನೆ ಮತ್ತು ಪ್ರೋಟೀಸ್ ವಿರುದ್ಧ ಮುಂಬರುವ 3-ಪಂದ್ಯಗಳ ಸರಣಿಯ ಮೊದಲ ಟಿ20 ನಲ್ಲಿ ಆಡಲು ಸಿದ್ಧ ಎಂದು ಬಹಿರಂಗಪಡಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾರನ್ನು ಹಿಂದಿಕ್ಕಿದ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಜಾನಿ ಸ್ಪಷ್ಟನೆ

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಜಾನಿ ಸ್ಪಷ್ಟನೆ

'ನಾನು ಗಾಯಗೊಂಡಿರುವ ಸುದ್ದಿಗೆ ಸ್ಪಷ್ಟನೆ ನೀಡಲು ಈ ಪೋಸ್ಟ್ ಮಾಡುತ್ತಿದ್ದೇನೆ. ಜಿಮ್‌ನಲ್ಲಿ ಸ್ಯಾಮ್ ಕರನ್‌ನ್ನು ಎತ್ತುವಾಗ ನಾನು ಗಾಯಗೊಂಡಿದ್ದೇನೆ ಎಂದು ಹಲವಾರು ಲೇಖನಗಳನ್ನು ತಪ್ಪಾಗಿ ಪ್ರಕಟಿಸಲಾಗಿದೆ. ಅಂಥದ್ದೇನೂ ಇಲ್ಲ. ನಾನು ಫಿಟ್ ಆಗಿದ್ದೇನೆ. ಮೊದಲ ಟಿ20 ಆಯ್ಕೆಗೆ ನಾನು ಲಭ್ಯವಿದ್ದೇನೆ' ಎಂದು ಬೈರ್‌ಸ್ಟೋವ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೇಳಿದ್ದಾರೆ. ಅಂತೆಯೇ ಮೊದಲ ಟಿ20 ಪಂದ್ಯವನ್ನಾಡಿದ್ದಾರೆ.

ಅವರು ಗಾಯಗೊಂಡಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮ ವರದಿಯನ್ನು ಪೋಸ್ಟ್ ಮಾಡಿರುವ, ಬೇರ್ ಸ್ಟೋ 'ನನಗೆ ಗಾಯವಾದರೆ... ಸ್ಯಾಮ್ ಅನ್ನು ಮೇಲೆತ್ತುವುದು ಹೇಗೆ?' ಎಂದು ಪ್ರಶ್ನಿಸಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದ ಬೌಲಿಂಗ್ ಆಯ್ದುಕೊಂಡಿತು.

Story first published: Wednesday, July 27, 2022, 23:49 [IST]
Other articles published on Jul 27, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+