ಇಂಗ್ಲೆಂಡ್ vs ಪಾಕಿಸ್ತಾನ, 3ನೇ ಟೆಸ್ಟ್, Live: ಝಾಕ್ ಕ್ರಾಲೆ ಶತಕದಾಟ

ಸೌತಾಂಪ್ಟನ್, ಆಗಸ್ಟ್ 21: ಸೌತಾಂಪ್ಟನ್‌ನ ರೋಸ್‌ಬೌಲ್‌ನಲ್ಲಿ ಪಾಕಿಸ್ತಾನ ಮತ್ತು ಆತಿಥೇಯ ಇಂಗ್ಲೆಂಡ್ ಮಧ್ಯೆ 3ನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದಿತ್ತು. ದ್ವಿತೀಯ ಪಂದ್ಯ ಮಳೆಯಿಂದಾಗಿ ಡ್ರಾಗೊಂಡಿತ್ತು.
ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಜೋ ರೂಟ್ ಬಳಗ, ರೋರಿ ಬರ್ನ್ಸ್ (6), ಡೊಮಿನಿಕ್ ಸಿಬ್ಲಿ (22), ಜೋ ರೂಟ್ (29), ಆಲ್ಲಿ ಪೋಪ್ (3) ವಿಕೆಟ್‌ಗಳನ್ನು ಕಳೆದುಕೊಂಡಿದೆ. ಆದರೆ ಝಾಕ್ ಕ್ರಾಲೆ ಅವರ ಶತಕ, ಜೋಸ್ ಬಟ್ಲರ್ ಅರ್ಧ ಶತಕದ ಕೊಡುಗೆ ತಂಡಕ್ಕೆ ಲಭಿಸಿದೆ.
ಇಂಗ್ಲೆಂಡ್ vs ಪಾಕಿಸ್ತಾನ, 3ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್
ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ, ಸರಣಿ ಆಂಗ್ಲರ ವಶವಾಗಲಿದೆ. ಪಾಕ್ ಗೆದ್ದರೆ 1-1ರಿಂದ ಸರಣಿ ಸಮಬಲವೆನಿಸಲಿದೆ. ಹೀಗಾಗಿ ಅಂತಿಮ ಪಂದ್ಯ ಕುತೂಹಲ ಮೂಡಿಸಿದೆ. ಇಂಗ್ಲೆಂಡ್ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ ಪಾಕ್ ಕೂಡ ಸರಣಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯಿದೆ.
ಇಂಗ್ಲೆಂಡ್ ತಂಡ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಝಾಕ್ ಕ್ರಾಲೆ, ಜೋ ರೂಟ್ (ಸಿ), ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆ), ಕ್ರಿಸ್ ವೋಕ್ಸ್, ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್.
ಪಾಕಿಸ್ತಾನ ತಂಡ: ಶಾನ್ ಮಸೂದ್, ಅಬಿದ್ ಅಲಿ, ಅಜರ್ ಅಲಿ (ಸಿ), ಬಾಬರ್ ಅಜಮ್, ಅಸಾದ್ ಶಫಿಕ್, ಫವಾದ್ ಆಲಂ, ಮೊಹಮ್ಮದ್ ರಿಜ್ವಾನ್ (ವಿಕೆ), ಯಾಸಿರ್ ಶಾ, ಮೊಹಮ್ಮದ್ ಅಬ್ಬಾಸ್, ಶಾಹೀನ್ ಅಫ್ರಿದಿ, ನಸೀಮ್ ಶಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications