ಇಂಗ್ಲೆಂಡ್ vs ಪಾಕಿಸ್ತಾನ: ಟೆಸ್ಟ್ ಪಂದ್ಯ ಆರಂಭದ ಸಮಯ ಬದಲು

ಸೌತಾಂಪ್ಟನ್: ಸೌತಾಂಪ್ಟನ್‌ನ ರೋಸ್‌ಬೌಲ್‌ನಲ್ಲಿ ಸ್ಟೇಡಿಯಂನಲ್ಲಿ ಶುಕ್ರವಾರ (ಆಗಸ್ಟ್ 21) ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯವನ್ನಾಡಲಿವೆ. ಸರಣಿ ಗೆಲ್ಲುವ ನಿಟ್ಟಿನಲ್ಲಿ ಈ ಪಂದ್ಯ ಆಂಗ್ಲರಿಗೆ ಪ್ರಮುಖವಾದರೆ, ಪಾಕ್‌ಗೆ ಸರಣಿ ಉಳಿಸುವ ಸಲುವಾಗಿ ಮುಖ್ಯವೆನಿಸಿದೆ.
ಪಾಕ್ vs ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಗೆದ್ದಿತ್ತು. ದ್ವಿತೀಯ ಪಂದ್ಯ ಮಳೆಯಿಂದಾಗಿ ಡ್ರಾ ಎನಿಸಲ್ಪಟ್ಟಿತು. ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ, ಸರಣಿ ಆಂಗ್ಲರ ವಶವಾಗಲಿದೆ. ಪಾಕ್ ಗೆದ್ದರೆ 1-1ರಿಂದ ಸರಣಿ ಸಮಬಲವೆನಿಸಲಿದೆ. ಹೀಗಾಗಿ ಅಂತಿಮ ಪಂದ್ಯ ಕುತೂಹಲ ಮೂಡಿಸಿದೆ.
ಇಂಗ್ಲೆಂಡ್ vs ಪಾಕಿಸ್ತಾನ, 3ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್
ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರಮುಖ ಬದಲಾವಣೆಯೊಂದು ಆಗಿದೆ. ಆರಂಭಿಕ ಎರಡು ಪಂದ್ಯಗಳು ಭಾರತೀಯ ಕಾಲಮಾನ 3.30 pmಗೆ ಆರಂಭವಾಗಿದ್ದವು. ಅಂತಿಮ ಪಂದ್ಯ ಅರ್ಧ ಗಂಟೆ ಮುಂಚಿತವಾಗಿ ಅಂದರೆ 3 pmಗೆ ಶುರುವಾಗಲಿದೆ. ಸೌತಾಂಪ್ಟನ್ ಹವಾಮಾನ ವರದಿಯ ಪ್ರಕಾರ ಮೂರನೇ ಪಂದ್ಯದ ವೇಳೆ ಮಳೆಯ ಆಟವೇ ನಡೆಯುವ ಸಾಧ್ಯತೆ ಹೆಚ್ಚಿದೆ.
ಸೋನಿ ನೆಟ್ವರ್ಕ್ಸ್ ಚಾನೆಲ್‌ಗಳಲ್ಲಿ ಪಂದ್ಯದ ನೇರ ಪ್ರಸಾರ ಸಿಗಲಿದೆ. ನೆಟ್ಟಿಗರು ಸೋನಿ Livನಲ್ಲಿ ಪಂದ್ಯ ವೀಕ್ಷಿಸಬಹುದು. ಮೈಖೇಲ್ ಕನ್ನಡದಲ್ಲೂ ಪಂದ್ಯದ ಲೈವ್ ಸ್ಕೋರ್‌ಕಾರ್ಡ್, ಅಪ್‌ಡೇಟ್ಸ್ ಸಿಗಲಿವೆ. ಟೆಸ್ಟ್ ಸರಣಿ ಮುಗಿದ ಬಳಿಕ ಇತ್ತಂಡಗಳು ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಪಾಲ್ಗೊಳ್ಳಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications