ಪಾಕಿಸ್ತಾನ vs ಇಂಗ್ಲೆಂಡ್: 5ನೇ ಟಿ20 ಪಂದ್ಯ: ಟಾಸ್ ರಿಪೋರ್ಟ್ ಹಾಗೂ Live ಸ್ಕೋರ್

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟಿ20 ಸರಣಿಯ ಐದನೇ ಪಂದ್ಯ ಆರಂಭವಾಗಿದೆ. ಮೊದಲ ನಾಲ್ಕು ಪಂದ್ಯಗಳಲ್ಲಿಯೂ ಎರಡೂ ತಂಡಗಳು ತೀವ್ರ ಪೈಪೋಟಿಯ ಪ್ರದರ್ಶನ ನೀಡಿದ್ದು ಮತ್ತೊಂದು ಕುತೂಹಲಕಾರಿ ಮುಖಾಮುಖಿ ನಡೆಯಲಿದೆ. ಈ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಏಳು ಪಂದ್ಯಗಳ ಟಿ20 ಸರಣಿ ಇದಾಗಿದ್ದು ಮೊದಲ ನಾಲ್ಕು ಪಂದ್ಯಗಳಲ್ಲಿ ಎರಡು ತಂಡಗಳು ಕೂಡ ಸಮಾನವಾಗಿ ಸೋಲು ಗೆಲುವಿನ ರುಚಿ ಕಂಡಿದೆ. ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಇಂಗ್ಲೆಂಡ್ ಸೋಲಿನ ರುಚಿ ತೋರಿಸಿದ್ದರೆ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ದಾಖಲೆಯ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
Live ಸ್ಕೋರ್‌ಕಾರ್ಡ್ ಹೀಗಿದೆ
ಮೂರನೇ ಪಂದ್ಯವನ್ನು ಇಂಗ್ಲೆಂಡ್ 63 ರನ್‌ಗಳನ್ನು ಗಳಿಸಿದ್ದರೆ ನಾಲ್ಕನೇ ಪಂದ್ಯ ಅತ್ಯಂತ ರೋಚಕವಾಗಿ ಅಂತ್ಯವಾಗಿದ್ದು ಪಾಕಿಸ್ತಾನ 3 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈ ಮೂಲಕ ಈ ಸರಣಿಯಲ್ಲಿ ಎರಡು ತಂಡಗಳು ಕೂಡ 2-2 ಅಂತರದಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಐದನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು ಯಾವ ತಂಡೆ ಗೆಲುವು ಸಾಧಿಸಿ ಮುನ್ನಡೆ ಪಡೆಯಲಿದೆ ಎಂಬುದು ಕುತೂಹಲವಾಗಿದೆ.
ಪಾಕಿಸ್ತಾನ ಆಡುವ ಬಳಗ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ಶಾದಾಬ್ ಖಾನ್, ಹೈದರ್ ಅಲಿ, ಮೊಹಮ್ಮದ್ ನವಾಜ್, ಅಮೀರ್ ಜಮಾಲ್, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಮ್ ಜೂನಿಯರ್
ಬೆಂಚ್: ಖುಷ್ದಿಲ್ ಶಾ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನೈನ್, ಅಬ್ರಾರ್ ಅಹ್ಮದ್, ನಸೀಮ್ ಶಾ, ಮೊಹಮ್ಮದ್ ಹ್ಯಾರಿಸ್, ಶಾನವಾಜ್ ದಹಾನಿ
ಇಂಗ್ಲೆಂಡ್ ಆಡುವ ಬಳಗ: ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ (ನಾಯಕ), ಸ್ಯಾಮ್ ಕುರಾನ್, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್
ಬೆಂಚ್: ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಆಲಿ ಸ್ಟೋನ್, ರೀಸ್ ಟೋಪ್ಲಿ, ಜೋಸ್ ಬಟ್ಲರ್, ಟಾಮ್ ಹೆಲ್ಮ್, ಲ್ಯೂಕ್ ವುಡ್, ರಿಚರ್ಡ್ ಗ್ಲೀಸನ್, ಜೋರ್ಡಾನ್ ಕಾಕ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications