ಮಲನ್-ಕ್ರಾಲೆ ಅರ್ಧಶತಕ, ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ

ಕಾರ್ಡಿಫ್: ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಗುರುವಾರ (ಜುಲೈ 8) ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೊದಲನೇ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಭರ್ಜರಿ 9 ವಿಕೆಟ್ ಜಯ ಗಳಿಸಿದೆ. ಡೇವಿಡ್ ಮಲನ್, ಝ್ಯಾಕ್ ಕ್ರಾಲೆ ಅರ್ಧ ಶತಕ ಮತ್ತು ಸಕೀಬ್ ಮಹಬೂಬ್ ಬೌಲಿಂಗ್ ನೆರವಿನಿಂದ ಇಂಗ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ, ಫಖರ್ ಝಮಾನ್ 47, ಮೊಹಮ್ಮದ್ ರಿಝ್ವಾನ್ 13, ಸೊಹೈಬ್ ಮಕ್ಸೂದ್ 19, ಶದಾಬ್ ಖಾನ್ 30, ಶಾಹೀನ್ ಅಫ್ರಿದಿ 12, ಹಸನ್ ಅಲಿ 6, ಸಾವುದ್ ಶಕೀಲ್ 5 ರನ್‌ನೊಂದಿಗೆ 35.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 141 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್ ನಿಂದ ಫಿಲಿಪ್ ಸಾಲ್ಟ್ 7, ಡೇವಿಡ್ ಮಲನ್ ಅಜೇಯ 68 (69), ಝ್ಯಾಕ್ ಕ್ರಾಲೆ ಅಜೇಯ 58 (50) ರನ್ ಸೇರಿಸಿದರು. ಬೆನ್ ಸ್ಟೋಕ್ಸ್ ಪಡೆ 21.5ನೇ ಓವರ್‌ಗೆ 1 ವಿಕೆಟ್ ನಷ್ಟದಲ್ಲಿ 142 ರನ್ ಬಾರಿಸಿ ಗೆಲುವನ್ನಾಚರಿಸಿತು.
ಪಾಕ್ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಸಕೀಬ್ ಮಹಮೂದ್ 42 ರನ್‌ಗೆ 4 ವಿಕೆಟ್, ಲೆವಿಸ್ ಗ್ರೆಗರಿ 1, ಕ್ರೆಗ್ ಒವರ್ಟನ್ 2, ಮ್ಯಾಥ್ಯೂ ಪಾರ್ಕಿನ್ಸನ್ 1 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ಶಾಹೀನ್ ಅಫ್ರಿದಿ 1 ವಿಕೆಟ್ ಪಡೆದರು. ಸಕೀಬ್ ಮಹಮೂದ್ ಪಂದ್ಯಶ್ರೇಷ್ಠರೆನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications