ಇಂಗ್ಲೆಂಡ್ vs ಪಾಕಿಸ್ತಾನ: ವೈಟ್‌ವಾಶ್ ಅವಮಾನದಿಂದ ಪಾರಾಗುತ್ತಾ ಪಾಕಿಸ್ತಾನ

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಮಂಗಳವಾರ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಈಗಾಗಲೇ ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧದ ಎರಡು ಪಂದ್ಯಗಳನ್ನು ಕೂಡ ಗೆದ್ದುಕೊಂಡಿದ್ದು ಸರಣಿಯನ್ನು ವಶಕ್ಕೆ ಪಡೆದಿದೆ. ಅಂತಿಮ ಪಂದ್ಯದಲ್ಲಿಯೂ ಗೆದ್ದು ಸರಣಿಯನ್ನು ವೈಟ್‌ವಾಶ್ ಮಾಡುವ ಉತ್ಸಾಹದಲ್ಲಿದೆ ಬೆನ್ ಸ್ಟೋಕ್ಸ್ ಬಳಗ.
ಕೊರೊನಾವೈರಸ್‌ನ ಕಾರಣದಿಂದಾಗಿ ಮೊದಲು ಹೆಸರಿಸಿದ್ದ ತಂಡದ ಬದಲಿಗೆ ಇಂಗ್ಲೆಂಡ್ ಬೆನ್ ಸ್ಟೋಕ್ಸ್ ನೇತೃತ್ವದ ಸಂಪೂರ್ಣ ಹೊಸ ತಂಡವನ್ನು ಹೆಸರಿಸಿತ್ತು. ಹೀಗಾಗಿ ಇಂಗ್ಲೆಂಡ್ ಈ ಸರಣಿಯಲ್ಲಿ ಕಠಿಣ ಪರಿಸ್ಥಿತಿಯನ್ನು ಎದುತಿಸಲಿದೆ ಎಂದೇ ಊಹಿಸಲಾಗಿತ್ತು. ಆದರೆ ಎಲ್ಲರ ಲೆಕ್ಕಾಚಾರಗಳು ಕೂಡ ತಲೆಕೆಳಗಾದವು. ಬೆನ್ ಸ್ಟೋಕ್ಸ್ ನೇತೃತ್ವದ ತಂಡದ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಲ್ಲದೆ ಪೂರ್ಣ ಸಾಮರ್ಥ್ಯದ ಪಾಕಿಸ್ತಾನ ತಂಡವನ್ನು ಸತತ ಎರಡು ಪಂದ್ಯಗಳಲ್ಲಿಯೂ ಹೀನಾಯವಾಗಿ ಸೋಲಿಸಿದೆ.
ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ಕ್ಲೀನ್ ಸ್ವೀಪ್ ಸಾಧನೆ ಮಾಡಲು ಸಾಧ್ಯವಾದರೆ ಅದು ಇಂಗ್ಲೆಂಡ್ ತಂಡದ ದೊಡ್ಡ ಸಾಧನೆಯಾಗಲಿದೆ. ಈಗಾಗಲೇ ಪ್ರಮುಖ ಸರಣಿ ಜಯಿಸುವ ಮೂಲಕ ಇಂಗ್ಲೆಂಡ್ ತನ್ನ ಸಾಮರ್ಥ್ಯವನ್ನು ಬಹಿರಂಗಪಡಿಸಿದೆ.
ಮತ್ತೊಂದೆಡೆ ಪಾಕಿಸ್ತಾನ ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಇಂಗ್ಲೆಂಡ್‌ನ ಪ್ರಮುಖ ಆಟಗಾರಿಲ್ಲದ ದ್ವಿತಿಯ ದರ್ಜೆಯ ತಂಡದ ವಿರುದ್ಧವೂ ಹೀನಾಯವಾಗಿ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವುದು ಪಾಕಿಸ್ತಾನಕ್ಕೆ ಭಾರೀ ಹಿನ್ನಡೆಯಾಗಿದೆ. ಸ್ವತಃ ನಾಯಕ ಬಾಬರ್ ಅಜಂ ಕೂಡ ಈ ಸರಣಿಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಇಂಗ್ಲೆಂಡ್ ಸಂಭಾವ್ಯ ತಂಡ: ಫಿಲ್ ಸಾಲ್ಟ್, ಡೇವಿಡ್ ಮಲನ್, ಜಾಕ್ ಕ್ರಾಲೆ, ಜೇಮ್ಸ್ ವಿನ್ಸ್, ಬೆನ್ ಸ್ಟೋಕ್ಸ್ (ನಾಯಕ), ಜಾನ್ ಸಿಂಪ್ಸನ್ (ವಿಕೆಟ್ ಕೀಪರ್), ಲೆವಿಸ್ ಗ್ರೆಗೊರಿ, ಕ್ರೇಗ್ ಒವರ್ಟನ್, ಬ್ರೈಡಾನ್ ಕಾರ್ಸ್, ಸಾಕಿಬ್ ಮಹಮೂದ್, ಮ್ಯಾಟ್ ಪಾರ್ಕಿನ್ಸನ್
ಪಾಕಿಸ್ತಾನ ಸಂಭಾವ್ಯ ತಂಡ: ಇಮಾಮ್-ಉಲ್-ಹಕ್, ಫಖರ್ ಜಮಾನ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಸೊಹೈಬ್ ಮಕ್ಸೂದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಶಾ ಅಫ್ರಿದಿ, ಹಸನ್ ಅಲಿ, ಹ್ಯಾರಿಸ್ ರವೂಫ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications