ತಂದೆ ಮರಣದ ನಂತರ ಮೊದಲ ಶತಕ ಬಾರಿಸಿ ಗೌರವ ಸಲ್ಲಿಸಿದ ಬೆನ್ ಸ್ಟೋಕ್ಸ್

ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿರುವ ಇಂಗ್ಲೆಂಡ್ ಟಿ ಟ್ವೆಂಟಿ ಸರಣಿಯಲ್ಲಿ ಸೋಲುಂಡಿದ್ದು, ಸದ್ಯ ಕೆರಿಬಿಯನ್ನರ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಮೊದಲಿಗೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದು, ಎರಡನೇ ಟೆಸ್ಟ್ ಪಂದ್ಯ ಬಾರ್ಬಡಾಸ್ ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ಆಲ್ ರೌಂಡರ್ ಆಟಗಾರ ಬೆನ್ ಸ್ಟೋಕ್ಸ್ ಹಲವು ತಿಂಗಳುಗಳ ಬಳಿಕ ಶತಕ ಸಿಡಿಸಿ ಮಿಂಚಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತನ್ನ ಮೊದಲನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 507 ರನ್ ಗಳಿಸಿತು. ಇಂಗ್ಲೆಂಡ್ ಪರ ನಾಯಕ ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಶತಕ ಸಿಡಿಸಿ ಮಿಂಚಿದರು. ಜೋರೂಟ್ 153 ರನ್ ಗಳಿಸಿದರೆ, ಬೆನ್ ಸ್ಟೋಕ್ಸ್ 120 ರನ್ ಕಲೆ ಹಾಕಿದರು. ಈ ಮೂಲಕ ತನ್ನ 11ನೇ ಟೆಸ್ಟ್ ಶತಕವನ್ನು ಬಾರಿಸಿದ ಬೆನ್ ಸ್ಟೋಕ್ಸ್ ಹೆಲ್ಮೆಟ್ ತೆಗೆದು ಆಕಾಶವನ್ನು ನೋಡುತ್ತಾ ತಮ್ಮ ಶತಕವನ್ನು ನಿಧನ ಹೊಂದಿದ ತಮ್ಮ ತಂದೆಗೆ ಅರ್ಪಿಸಿ ಗೌರವ ಸಲ್ಲಿಸಿದರು. ಇನ್ನು ಬೆನ್ ಸ್ಟೋಕ್ಸ್ ಅವರ ತಂದೆ 2020ರ ಡಿಸೆಂಬರ್‌ನಲ್ಲಿ ನಿಧನ ಹೊಂದಿದ್ದರು. ಹಾಗೂ ಬೆನ್ ಸ್ಟೋಕ್ಸ್ ಸಿಡಿಸಿದ ಈ ಶತಕ ಅವರ ತಂದೆ ನಿಧನದ ನಂತರ ಬಾರಿಸಿದ ಶತಕವಾಗಿದೆ. ಹಾಗೂ ಈ ಮೂಲಕ ಬೆನ್ ಸ್ಟೋಕ್ಸ್ 5000 ಟೆಸ್ಟ್ ರನ್ ದಾಟಿದ ಮೈಲಿಗಲ್ಲನ್ನೂ ಸಹ ನಿರ್ಮಿಸಿದ್ದಾರೆ.
ಅತ್ತ ಇಂಗ್ಲೆಂಡ್ ದಾಂಡಿಗರ ಭರ್ಜರಿ ಬ್ಯಾಟಿಂಗ್ ಮುಂದೆ ಮಂಕಾಗಿದ್ದ ವೆಸ್ಟ್ ಇಂಡೀಸ್ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದು, ಮೂರನೇ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿ 219 ರನ್‌ಗಳ ಹಿನ್ನಡೆಯನ್ನು ಅನುಭವಿಸಿದೆ.
ವೆಸ್ಟ್ ಇಂಡೀಸ್ ಪ್ಲೇಯಿಂಗ್ ಇಲೆವೆನ್: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಜಾನ್ ಕ್ಯಾಂಪ್‌ಬೆಲ್, ಶಮರ್ ಬ್ರೂಕ್ಸ್, ಎನ್‌ಕ್ರುಮಾ ಬೊನ್ನರ್, ಜರ್ಮೈನ್ ಬ್ಲಾಕ್‌ವುಡ್, ಜೇಸನ್ ಹೋಲ್ಡರ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಕೆಮರ್ ರೋಚ್, ವೀರಸಮ್ಮಿ ಪರ್ಮಾಲ್, ಜೇಡನ್ ಸೀಲ್ಸ್
ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಜೋ ರೂಟ್ (ನಾಯಕ), ಡೇನಿಯಲ್ ಲಾರೆನ್ಸ್, ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋ, ಬೆನ್ ಫೋಕ್ಸ್ (ವಿಕಟ್ ಕೀಪರ್), ಕ್ರಿಸ್ ವೋಕ್ಸ್, ಮ್ಯಾಥ್ಯೂ ಫಿಶರ್, ಜ್ಯಾಕ್ ಲೀಚ್, ಸಾಕಿಬ್ ಮಹಮೂದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications