Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೆಸ್ಟ್ ಇಂಡೀಸ್ vs ಇಂಗ್ಲೆಂಡ್: ಎರಡನೇ ಟೆಸ್ಟ್ ನಾಲ್ಕನೇ ದಿನದಾಟದ ಲೈವ್ ಸ್ಕೋರ್

England vs West Indies: Second Test Day 4 Live Score

ಇಂಗ್ಲೆಂಡ್ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿದ್ದು, ಕೆರಿಬಿಯನ್ನರ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನಾಡಿ 2-3 ಅಂತರದಿಂದ ಸೋಲನ್ನು ಅನುಭವಿಸಿ ಇದೀಗ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಮೊದಲಿಗೆ ಇತ್ತಂಡಗಳ ನಡುವೆ ನಡೆದ ಪ್ರಥಮ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದು, ಇದೀಗ ಇತ್ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತನ್ನ ಮೊದಲನೇ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಿದೆ.

ಹೌದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ ಮೊದಲನೇ ಇನ್ನಿಂಗ್ಸ್‌ನಲ್ಲಿ ನಾಯಕ ಜೋ ರೂಟ್ ಮತ್ತು ಆಲ್ ರೌಂಡರ್ ಆಟಗಾರ ಬೆನ್ ಸ್ಟೋಕ್ಸ್ ಅವರ ಅಮೋಘ ಶತಕಗಳ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 507 ರನ್ ಕಲೆಹಾಕಿತು. ಹೀಗೆ ಇಂಗ್ಲೆಂಡ್ ದೊಡ್ಡ ಮೊತ್ತವನ್ನು ಕಲೆ ಹಾಕಿದ ನಂತರ ವೆಸ್ಟ್ ಇಂಡೀಸ್ ಮೂರನೇ ದಿನದಾಟದಂದು ತನ್ನ ಮೊದಲನೇ ಇನ್ನಿಂಗ್ಸ್ ಆರಂಭಿಸಿ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 288 ರನ್ ಕಲೆಹಾಕಿದೆ. ವೆಸ್ಟ್ ಇಂಡೀಸ್ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಕ್ರೇಗ್ ಬ್ರಾಥ್ ವೈಟ್ ಅಜೇಯ 109 ರನ್ ಗಳಿಸಿದರೆ, ಜರ್ಮೈನ್ ಬ್ಲ್ಯಾಕ್ ವುಡ್ 102 ರನ್ ಗಳಿಸಿ ತಂಡಕ್ಕೆ ನೆರವಾದರು.

ಹೀಗೆ ಮೂರನೆ ದಿನದಾಟದಂತ್ಯಕ್ಕೆ ಪೈಪೋಟಿಯುತ ರನ್ ಕಲೆಹಾಕಿರುವ ವೆಸ್ಟ್ ಇಂಡೀಸ್ 219 ರನ್‌ಗಳ ಹಿನ್ನಡೆಯನ್ನು ಅನುಭವಿಸಿದ್ದು, ನಾಲ್ಕನೇ ದಿನದಾಟದಂದು ಹೀಗೆಯೇ ರನ್ ಕಲೆಹಾಕುತ್ತಾ ಅಥವಾ ಇಂಗ್ಲೆಂಡ್ ತಂಡಕ್ಕಿಂತ ಕಡಿಮೆ ಮೊತ್ತಕ್ಕೆ ಆಲ್ ಔಟ್ ಆಗಿ ಹಿನ್ನಡೆಯನ್ನು ಅನುಭವಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಹಾಗೂ ನಾಲ್ಕನೇ ದಿನದಾಟ ಆರಂಭಕ್ಕೂ ಮುನ್ನ ಬಾರ್ಬಡಾಸ್ ನಗರದಲ್ಲಿ ಮಳೆ ಸುರಿದಿದ್ದು, ಪಂದ್ಯ ವಿಳಂಬವಾಗಿ ಆರಂಭವಾಗಿದೆ.

ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಲೈವ್ ಸ್ಕೋರ್ ಈ ಕೆಳಕಂಡಂತಿದೆ

1
50929

ವೆಸ್ಟ್ ಇಂಡೀಸ್ ಪ್ಲೇಯಿಂಗ್ ಇಲೆವೆನ್: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಜಾನ್ ಕ್ಯಾಂಪ್‌ಬೆಲ್, ಶಮರ್ ಬ್ರೂಕ್ಸ್, ಎನ್ಕ್ರುಮಾ ಬೊನ್ನರ್, ಜರ್ಮೈನ್ ಬ್ಲಾಕ್‌ವುಡ್, ಜೇಸನ್ ಹೋಲ್ಡರ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಕೆಮರ್ ರೋಚ್, ವೀರಸಾಮಿ ಪರ್ಮೌಲ್, ಜೇಡನ್ ಸೀಲ್ಸ್

ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಜೋ ರೂಟ್ (ನಾಯಕ), ಡೇನಿಯಲ್ ಲಾರೆನ್ಸ್, ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋ, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಮ್ಯಾಥ್ಯೂ ಫಿಶರ್, ಜ್ಯಾಕ್ ಲೀಚ್, ಸಾಕಿಬ್ ಮಹಮೂದ್

Story first published: Saturday, March 19, 2022, 19:56 [IST]
Other articles published on Mar 19, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+