ಸಸೆಕ್ಸ್‌ಗೆ ರನ್ ಮಷಿನ್ ಆಗಿರುವ ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ ಕೌಂಟಿ ಕ್ರಿಕೆಟ್‌ನಲ್ಲಿ ಈ ಋತುವಿನಲ್ಲಿ ಆಡಿದ 10 ಇನ್ನಿಂಗ್ಸ್‌ಗಳಲ್ಲಿ 866 ರನ್ ಗಳಿಸಿದ್ದಾರೆ. ಅವರು ಕೇವಲ ಎರಡು ಇನ್ನಿಂಗ್ಸ್‌ಗಳಲ್ಲಿ ಸಿಂಗಲ್ ಡಿಜಿಟ್ ಸ್ಕೋರ್‌ಗೆ ಔಟಾದರು. ಸಸೆಕ್ಸ್ ಪರ ಪೂಜಾರ ಎರಡು ದ್ವಿಶತಕ ಹಾಗೂ ಮೂರು ಶತಕ ಬಾರಿಸಿದರು. ಐವತ್ತು ಪೂರೈಸಿದ ಎಲ್ಲ ಇನ್ನಿಂಗ್ಸ್ ಗಳಲ್ಲಿ ಅದನ್ನು ಶತಕ ಅಥವಾ ದ್ವಿಶತಕವನ್ನಾಗಿ ಪರಿವರ್ತಿಸಲು ಅವರು ಸಮರ್ಥರಾಗಿದ್ದಾರೆ ಎಂಬುದು ಅತ್ಯಂತ ಮುಖ್ಯವಾದ ವಿಷಯ.
ಇದುವರೆಗಿನ 10 ಇನ್ನಿಂಗ್ಸ್‌ಗಳಲ್ಲಿ ಚೇತೇಶ್ವರ ಪೂಜಾರ ಅವರ ಗರಿಷ್ಠ ಸ್ಕೋರ್ 203 ರನ್ ಆಗಿದೆ. ಅವರು 334 ಎಸೆತಗಳಲ್ಲಿ ಈ ಸ್ಕೋರ್ ಕಂಡುಕೊಂಡರು. ಔಟಾಗದೆ 201 ರನ್ ಗಳಿಸಿದ್ದು ಎರಡನೇ ಅತ್ಯುತ್ತಮ ಸ್ಕೋರ್ ಆಗಿದೆ.

ಚೇತೇಶ್ವರ್ ಪೂಜಾರ ಮೂರು ಶತಕಗಳು
ಶತಕಗಳ ಬಗ್ಗೆ ಹೇಳುವುದಾದರೆ, ಪೂಜಾರ ಸ್ಕೋರ್‌ಗಳು 109, ಅಜೇಯ 170 ಮತ್ತು ಅಜೇಯ 100 ರನ್ ಆಗಿದೆ. ಅವರು 206 ಎಸೆತಗಳಲ್ಲಿ 109 ರನ್ ಗಳಿಸಿದ್ರೆ, ಕೇವಲ 197 ಎಸೆತಗಳಲ್ಲಿ 170 ರನ್ ಗಳಿಸಿದರು. ಇನ್ನು ಪ್ರಸ್ತುತ ಪೂಜಾರ 144 ಎಸೆತಗಳಲ್ಲಿ ತಮ್ಮ ಕೊನೆಯ ಶತಕ ಪೂರೈಸಿದರು.
ಗಾಯಗೊಂಡಿರುವ ಟಾಮ್ ಹೈನ್ಸ್ ಅನುಪಸ್ಥಿತಿಯಲ್ಲಿ ಸಸೆಕ್ಸ್‌ನ ಹಂಗಾಮಿ ನಾಯಕನಾಗಿ ನೇಮಕಗೊಂಡ ಪೂಜಾರ, ಮಿಡ್ಲ್‌ಸೆಕ್ಸ್ ವಿರುದ್ಧ 144 ಎಸೆತಗಳಲ್ಲಿ ಶತಕವನ್ನು ಗಳಿಸಿದರು. ಪಂದ್ಯದ ಮೊದಲ ದಿನದಾಟದಲ್ಲಿ ಅಜೇಯ 115 ರನ್ ಗಳಿಸಿರುವ ಪೂಜಾರ ನೇತೃತ್ವದ ತಂಡ 328/4 ಗೆ ತಲುಪಿತು. ಎರಡನೇ ದಿನದಾಟದಲ್ಲಿ 150ರನ್ ಗಡಿದಾಟಿದ ಪೂಜಾರ ಈ ಪಂದ್ಯದಲ್ಲಿ ಶತಕದ ಮೂಲಕ ಋತುವಿನಲ್ಲಿ ಏಳು ಪಂದ್ಯಗಳಲ್ಲಿ ಐದು ಶತಕಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಎರಡು ದ್ವಿಶತಕಗಳು ಮತ್ತು ಅಜೇಯ 170 ಸ್ಕೋರ್ ಸೇರಿವೆ.
ಸಸೆಕ್ಸ್‌ಗಾಗಿ ಕೌಂಟಿ ಕ್ರಿಕೆಟ್‌ನಲ್ಲಿ ಚೇತೇಶ್ವರ ಪೂಜಾರ ಅವರ ಅತ್ಯುತ್ತಮ ಪ್ರದರ್ಶನವು ಈ ತಿಂಗಳ ಆರಂಭದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್‌ಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿತು. ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ಸ್ಥಿರವಾಗಿ ಆಡಿದ ಅವರ ಅನುಭವ ಮತ್ತು ಅವರ ಪ್ರಸ್ತುತ ಉತ್ತಮ ಫಾರ್ಮ್ ಕೂಡ ಅವರಿಗೆ ಬಲ ತುಂಬಿದೆ.
ಒಂದೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ 11 ಆಟಗಾರರು ಬೌಲಿಂಗ್ ಮಾಡಿದ್ದು ಒಂದೇ ಬಾರಿ!

ಇಂಗ್ಲೆಂಡ್ ವಿರುದ್ಧ ಮಿಂಚಲು ವಿಫಲಗೊಂಡ ಪೂಜಾರ
ಆದರೆ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ನಿರೀಕ್ಷೆಯಂತೆ ದೊಡ್ಡ ಇನ್ನಿಂಗ್ಸ್ ಆಡಲು ಪೂಜಾರಗೆ ಸಾಧ್ಯವಾಗಲಿಲ್ಲ. ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಅವರು ಆರಂಭಿಕರಾಗಿ ಪರೀಕ್ಷಿಸಲ್ಪಟ್ಟರು. ಪೂಜಾರ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 13 ರನ್ ಗಳಿಸಿ ಔಟಾದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಪೂಜಾರ 66 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅವರ ಇನ್ನಿಂಗ್ಸ್ 168 ಎಸೆತಗಳಲ್ಲಿ ಎಂಟು ಬೌಂಡರಿಗಳನ್ನು ಒಳಗೊಂಡಿತ್ತು.
ಬ್ಯಾಟಿಂಗ್ ಲೈನ್ ನ ಕಳಪೆ ಪ್ರದರ್ಶನ ಭಾರತವನ್ನು ಈ ಟೆಸ್ಟ್ ನಲ್ಲಿ ಸೋಲಿನತ್ತ ತಳ್ಳಿತು. ಜೊತೆಗೆ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ವಿಕೆಟ್ ಪಡೆಯಲು ಸಹ ಹೆಣಗಾಡಿತು. ಇಂಗ್ಲೆಂಡ್ ದಾಖಲೆಯ 378 ರನ್‌ಗಳ ಬೃಹತ್ ಗುರಿಯನ್ನು ಸುಲಭವಾಗಿ ತಲುಪಿತು. ಐದು ಪಂದ್ಯಗಳ ಟೆಸ್ಟ್ ಸರಣಿಯು 2-2ರಿಂದ ಅಂತ್ಯಗೊಂಡಿತು.


Click it and Unblock the Notifications












