ಒಂದೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ 11 ಆಟಗಾರರು ಬೌಲಿಂಗ್ ಮಾಡಿದ್ದು ಒಂದೇ ಬಾರಿ!

ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ಮೊತ್ತಗಳು ದಾಖಲಾಗೋದು ಸಾಮಾನ್ಯ ವಿಚಾರ. ಏಕೆಂದರೆ ಇಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಸಮಯ ಮತ್ತು ತಾಳ್ಮೆ ಹೆಚ್ಚಾಗಿರುತ್ತದೆ. ಹೆಚ್ಚಿನ ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ನೆಲೆಯೂರಿ ಆಟವಾಡುವುದರಿಂದ ದೊಡ್ಡ ಮಟ್ಟಿನ ಸ್ಕೋರ್ ದಾಖಲಾಗುತ್ತವೆ.
ಹೀಗಾಗಿ ಒಂದು ವಿಕೆಟ್ ಮೂಲಕ ಪಂದ್ಯದ ಗತಿಯನ್ನೇ ಪರಿವರ್ತಿಸುವ ಸಾಮರ್ಥ್ಯ ಈ ಟೆಸ್ಟ್ ಕ್ರಿಕೆಟ್‌ಗಿದೆ. ಹೀಗಾಗಿಯೇ ಅನೇಕ ವಿಶ್ವ ಖ್ಯಾತ ಆಟಗಾರರು ಟೆಸ್ಟ್ ಕ್ರಿಕೆಟ್ ತಮ್ಮ ಮೊದಲ ಆಯ್ಕೆ ಎಂಬಂತೆ ಹಲವು ಬಾರಿ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 30 ಯಾರ್ಡ್ ವೃತ್ತದೊಳಗೆ ಇಷ್ಟೇ ಜನರು ಫಿಲ್ಡರ್‌ಗಳನ್ನ ನಿಲ್ಲಿಸಬೇಕೆಂಬ ನಿಯಮಗಳೇನು ಇಲ್ಲ. ಹಾಗೆಯೇ ಒಬ್ಬ ಬೌಲರ್ ಇಷ್ಟೇ ಓವರ್ ಬೌಲ್ ಮಾಡಬೇಕೆಂದು ಇಲ್ಲ. ಹೀಗಾಗಿಯೇ ಆಟಗಾರರ ನಿಜವಾದ ಕೌಶಲ್ಯ, ಪ್ರತಿಭೆ ಹಾಗೂ ಕಠಿಣ ಪರಿಶ್ರಮ ಹೊರಬರುವುದು ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಸಾಧ್ಯ.

ಟೆಸ್ಟ್ ಕ್ರಿಕೆಟ್‌ನಲ್ಲಿ 4 ಬಾರಿ ಮಾತ್ರ ಆಡುವ 11 ಆಟಗಾರರಿಂದ ಬೌಲಿಂಗ್
ಟೆಸ್ಟ್ ಕ್ರಿಕೆಟ್‌ನಲ್ಲಿ ಆಟಗಾರರು ಕ್ರೀಸ್‌ನಲ್ಲಿ ನೆಲೆಯೂರಿ ನಿಂತರೆಂದ್ರೆ ಎದುರಾಳಿ ತಂಡದ ಬೌಲರ್‌ಗಳ ಬೆವರು ಹರಿಯುವುದಂತು ಗ್ಯಾರೆಂಟಿ. ಟೆಸ್ಟ್ ಕ್ರಿಕೆಟ್‌ನಲ್ಲಿ ಅದೆಷ್ಟೋ ಮುರಿಯದ ಜೊತೆಯಾಟಗಳನ್ನ, ದೊಡ್ಡ ಮೊತ್ತದ ಜೊತೆಯಾಟಗಳು ದಾಖಲಾಗಿವೆ. ಹೀಗಿರುವಾಗ ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್‌ವೊಂದರಲ್ಲಿ ತಂಡವೊಂದರ ಪರ ಆಡಿದ 11 ಆಟಗಾರರು ಬೌಲಿಂಗ್ ಮಾಡಿರುವ ಉದಾಹರಣೆ 4 ಬಾರಿ ಕಾಣಬಹುದು. ಈ ನಾಲ್ಕು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಕೂಡ ಒಂದು ಇನ್ನಿಂಗ್ಸ್‌ನಲ್ಲಿ ಇಂತಹ ಸಾಹಸಕ್ಕೆ ಕೈ ಹಾಕಿದೆ.

ಟೀಂ ಇಂಡಿಯಾದ 11 ಆಟಗಾರರು ಬೌಲಿಂಗ್ ಮಾಡಿದ್ದು ಯಾವಾಗ?
ಟೀಂ ಇಂಡಿಯಾ ಮೇ 14, 2002ರಂದು ವೆಸ್ಟ್ ಇಂಡೀಸ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ತನ್ನೆಲ್ಲಾ ಆಟಗಾರರನ್ನು ಬೌಲಿಂಗ್ ಮಾಡಿಸಿದ ಪ್ರಯತ್ನ ಮಾಡಿತ್ತು. ಎದುರಾಳಿ ತಂಡದ ವಿಕೆಟ್ ಪಡೆಯಲು ಪ್ರಯತ್ನಿಸಿದ ಭಾರತದ ಪರ 247ನೇ ಓವರ್‌ನಲ್ಲಿ ವಿಕೆಟ್ ಕೀಪರ್ ಅಜಯ್ ರಾತ್ರಾ ಬೌಲಿಂಗ್ ಮಾಡಿದ ಹನ್ನೊಂದನೇ ಆಟಗಾರನಾದರು. ಈ ಮೂಲಕ ಭಾರತವು ಟೆಸ್ಟ್ ಇನ್ನಿಂಗ್ಸ್‌ವೊಂದರಲ್ಲಿ ಆಡುವ ಹನ್ನೊಂದು ಆಟಗಾರರಿಂದ ಬೌಲಿಂಗ್ ಮಾಡಿಸಿದ ವಿಶ್ವದ ಮೂರನೇ ತಂಡವಾಗಿ ಹೊರಹೊಮ್ಮಿತು.
ಹಾರ್ದಿಕ್ ಪಾಂಡ್ಯ ವಿಶ್ವದ ಬೆಸ್ಟ್ ಆಲ್‌ರೌಂಡರ್ ಆಗಲಿದ್ದಾರೆ: ಶೋಯೆಬ್ ಅಖ್ತರ್ ಭವಿಷ್ಯ

ವಿಕೆಟ್ ಪಡೆಯಲು ಪರದಾಡಿದ್ದ ಭಾರತದ ಪ್ರಮುಖ ಬೌಲರ್ಸ್
ಕನ್ನಡಿಗ ಜಾವಗಲ್ ಶ್ರೀನಾಥ್ ಮುಂದಾಳತ್ವದಲ್ಲಿ ಮುನ್ನಡೆದ ಭಾರತದ ಬೌಲಿಂಗ್ ವಿಭಾಗವು ವೆಸ್ಟ್ ಇಂಡೀಸ್ ತಂಡದ ವಿಕೆಟ್ ಪಡೆಯುವಲ್ಲಿ ಸಾಕಷ್ಟು ಪ್ರಯತ್ನ ಪಟ್ಟಿತು. ತನ್ನ ತವರಿನಲ್ಲಿ ವೆಸ್ಟ್ ಇಂಡೀಸ್ ತಂಡವು ಬಲಿಷ್ಠವಾಗಿತ್ತು. ಆಂಟಿಗುವಾ ರಿಕ್ರಿಯೆಷನ್ ಗ್ರೌಂಡ್(ಸೈಂಟ್ ಜಾನ್ಸ್)ನಲ್ಲಿ ನಡೆದ ಈ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಎದುರಾಳಿ ಪ್ರಮುಖ ಸ್ಟಾರ್ ಬ್ಯಾಟರ್ ಬ್ರಿಯಾನ್ ಲಾರಾ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು.
ಆದ್ರೆ ಆನಂತರ ವಿಂಡೀಸ್ ಪರ ಶಿವನರೈನ್ ಚಂದ್ರಪಾಲ್ 136, ನಾಯಕ ಕಾರ್ಲ್ ಹೂಪರ್ 136, ರಿಡ್ಲೆ ಜಾಕೋಬ್ಸ್ 118ರನ್ ಸಿಡಿಸುವ ಮೂಲಕ ಭಾರತೀಯ ಬೌಲರ್‌ಗಳ ವಿರುದ್ಧ ಮೇಲುಗೈ ಸಾಧಿಸಿದರು.
ಭಾರತ ಪರ ವಿಕೆಟ್ ಪಡೆಯಲು ಪರದಾಡಿದ ಶ್ರೀನಾಥ್ 45 ಓವರ್, ಆಶಿಶ್ ನೆಹ್ರಾ 49 ಓವರ್, ಜಹೀರ್ ಖಾನ್ 48 ಓವರ್ ಬೌಲಿಂಗ್ ಮಾಡಿದರು ಸಹ ಎದುರಾಳಿಯ 10 ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಈ ವೇಳೆ ಪ್ರಯೋಗಕ್ಕೆ ಮುಂದಾದ ನಾಯಕ ಸೌರವ್ ಗಂಗೂಲಿ ಉಳಿದೆಲ್ಲಾ ಆಟಗಾರರಿಂದ ಬೌಲಿಂಗ್ ಮಾಡಲು ಮುಂದಾದರು.
ಆದರೂ ಸಹ ಆತಿಥೇಯ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ 9 ವಿಕೆಟ್ ನಷ್ಟಕ್ಕೆ 629ರನ್ ಕಲೆಹಾಕಿ ಮೇಲುಗೈ ಸಾಧಿಸಿತು. ಇದಕ್ಕೂ ಮೊದಲು ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ 9 ವಿಕೆಟ್ ನಷ್ಟಕ್ಕೆ 513ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತ್ತು.
ಈ ಪಂದ್ಯದಲ್ಲಿ ಜಹೀರ್ ಖಾನ್, ಸಚಿನ್ ತೆಂಡೂಲ್ಕರ್, ವಾಸಿಂ ಜಾಫರ್ ತಲಾ 2 ವಿಕೆಟ್ ಪಡೆದರು. ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್ ತಲಾ ಒಂದು ವಿಕೆಟ್ ಪಡೆದರು.
ಈ ಪಂದ್ಯವು ಕೇವಲ ಮೊದಲ ಇನ್ನಿಂನಲ್ಲೇ ಮುಕ್ತಾಯಗೊಂಡು ಡ್ರಾನಲ್ಲಿ ಅಂತ್ಯಗೊಂಡಿತು. ಆದ್ರೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ 2-1 ಅಂತರದಲ್ಲಿ ಗೆಲುವು ಸಾಧಿಸಿತು.
ಟೀಂ ಇಂಡಿಯಾಗೆ ಗುಡ್ ನ್ಯೂಸ್; ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಆಡಲಿದ್ದಾರೆ ಕೆಎಲ್ ರಾಹುಲ್!

ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಬೌಲಿಂಗ್ ಇಲೆವೆನ್ (2002)
ವೆಸ್ಟ್ ಇಂಡೀಸ್ ವಿರುದ್ಧ ಮೇ 14, 2002ರಂದು ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಮಾಡಿದ ಟೀಂ ಇಂಡಿಯಾದ ಹನ್ನೊಂದು ಆಟಗಾರರ ಹೆಸರು ಈ ಕೆಳಗಿದೆ.
ಜಾವಗಲ್ ಶ್ರೀನಾಥ್, ಆಶಿಶ್ ನೆಹ್ರಾ, ಜಹೀರ್ ಖಾನ್, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ವಾಸಿಂ ಜಾಫರ್, ಶಿವಸುಂದರ್ ದಾಸ್, ಅಜಯ್ ರಾತ್ರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications