Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2021ರ ಬೆಸ್ಟ್‌ ಟಿ20 ಪ್ಲೇಯಿಂಗ್ 11 ಆಟಗಾರರನ್ನ ಹೆಸರಿಸಿದ ಡ್ಯಾನೀಶ್ ಕನೇರಿಯಾ: ರೋಹಿತ್‌ ಶರ್ಮಾ, ಕೊಹ್ಲಿಗಿಲ್ಲ ಸ್ಥಾನ

Danish kaneria

ಪಾಕಿಸ್ತಾನದ ಮಾಜಿ ಬೌಲರ್ ಡ್ಯಾನಿಶ್ ಕನೇರಿಯಾ 2021ನೇ ವರ್ಷದ ಬೆಸ್ಟ್ ಟಿ20 ಪ್ಲೇಯಿಂಗ್ 11 ಆಟಗಾರರನ್ನ ಹೆಸರಿಸಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರರನ್ನ ಹೊರತುಪಡಿಸಿ ನಾಲ್ವರು ಭಾರತೀಯ ಆಟಗಾರರು ಈ ಲಿಸ್ಟ್‌ನಲ್ಲಿ ಇದ್ದಾರೆ.

ಪಾಕ್‌ನ ಮಾಜಿ ಲೆಗ್‌ಸ್ಪಿನ್ನರ್ ತನ್ನ ಯ್ಯೂಟ್ಯೂಬ್ ಚಾನೆ್‌ನಲ್ಲಿ 2021ರ ಉತ್ತಮ ಆಟಗಾರರನ್ನ ಹೆಸರಿಸಿದ್ದು, ಇದರಲ್ಲಿ ನಾಲ್ವರು ಭಾರತೀಯ ಆಟಗಾರರಿದ್ದಾರೆ. ಇಬ್ಬರು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಆಟಗಾರರು, ಪಾಕಿಸ್ತಾನದ ಮೂವರು ಆಟಗಾರರು ಮತ್ತು ಟಿ20 ವಿಶ್ವಕಪ್ ರನ್ನರ್ ಅಪ್ ನ್ಯೂಜಿಲೆಂಡ್‌ನ ಓರ್ವ ಆಟಗಾರ ಡ್ಯಾನೀಶ್ ಕನೇರಿಯಾ ಹೆಸರಿಸಿದ ಬೆಸ್ಟ್ ಪ್ಲೇಯಿಂಗ್ 11 ಆಟಗಾರರಲ್ಲಿ ಸ್ಥಾನ ಪಡೆದಿದ್ದಾರೆ.

ಮೊದಲೇ ಅಂದುಕೊಂಡಂತೆ ಪಾಕಿಸ್ತಾನದ ಓಪನಿಂಗ್ ಬ್ಯಾಟ್ಸ್‌ಮನ್‌ಗಳಾದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಸ್ಥಾನ ಪಡೆದಿದ್ದು, ಈ ಜೋಡಿ 2021ರಲ್ಲಿ ನಾಲ್ಕು ಬಾರಿ 150ರನ್‌ಗಳ ಜೊತೆಯಾಟವಾಡಿದ್ದಾರೆ. ಇಂಗ್ಲೆಂಡ್‌ನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾಸ್ ಬಟ್ಲರ್ 3ನೇ ಸ್ಥಾನ ಪಡೆದಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಆಲ್‌ರೌಂಡರ್‌ಗಳನ್ನ ಡ್ಯಾಶಿಶ್ ಹೆಸರಿಸಿದ್ದು, ಲಿಯಾಮ್ ಲಿವಿಂಗ್‌ಸ್ಟೋನ್ ಈ ವರ್ಷ ತನ್ನ ಪವರ್ ಹಿಟ್ಟಿಂಗ್ ಮತ್ತು ಉಪಯುಕ್ತ ಆಫ್-ಸ್ಪಿನ್‌ನೊಂದಿಗೆ ದೊಡ್ಡ ಪ್ರಗತಿಯನ್ನು ಸಾಧಿಸಿದ್ದು, ಸ್ಥಾನ ಪಡೆದಿದ್ದಾರೆ. ಟಿ20 ವಿಶ್ವಕಪ್‌ನ ತಾರೆ ಮಿಚೆಲ್ ಮಾರ್ಷ್ ನಂತರದ ಪಟ್ಟಿಯಲ್ಲಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸ್ಪಿನ್ನಿಂಗ್ ಆಯ್ಕೆಯಾಗಿರುತ್ತಾರೆ.

ಡ್ಯಾನೀಶ್ ಕನೇರಿಯಾ ಬೌಲಿಂಗ್ ವಿಭಾಗದಲ್ಲೂ ಪಾಕಿಸ್ತಾನ ಯುವ ವೇಗಿ ಶಾಹಿನ್ ಅಫ್ರಿದಿಗೆ ಸ್ಥಾನ ನೀಡಿದ್ದು, ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್‌, ಭಾರತದ ಜಸ್ಪ್ರೀತ್‌ ಬುಮ್ರಾ ಅವರಿಗೂ ಸ್ಥಾನ ಒದಗಿಸಿದ್ದಾರೆ. ಆಸ್ಟ್ರೇಲಿಯಾ ಲೆಗ್ ಸ್ಪಿನ್ನರ್ ಆ್ಡಂ ಜಂಪಾಗೆ ಅವಕಾಶ ನೀಡಿದ್ದು, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ 12ನೇ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.

ಡ್ಯಾನಿಶ್ ಕನೇರಿಯಾ 2021ರ ಬೆಸ್ಟ್ ಪ್ಲೇಯಿಂಗ್ 11
ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್ಸ್ಟೋನ್, ಮಿಚೆಲ್ ಮಾರ್ಷ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾಹೀನ್ ಅಫ್ರಿದಿ, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ಆ್ಯಡಂ ಜಂಪಾ, ರಿಷಬ್ ಪಂತ್ (12ನೇ ಆಟಗಾರ)

Story first published: Tuesday, December 21, 2021, 9:30 [IST]
Other articles published on Dec 21, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+