ಸಚಿನ್-ದ್ರಾವಿಡ್ ಇವರಲ್ಲಿ ಬೆಸ್ಟ್ ಯಾರು?: ಆಯ್ಕೆ ತಿಳಿಸಿದ ಶೋಯೆಬ್ ಅಖ್ತರ್

ನವದೆಹಲಿ: ಭಾರತೀಯ ಕ್ರಿಕೆಟ್ ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಇಬ್ಬರು. ಸಚಿನ್ ಮತ್ತು ದ್ರಾವಿಡ್ ಇವರಲ್ಲಿ ಒಬ್ಬರನ್ನು ಆರಿಸಿ ಎಂದಾಗ ನೀವು ಯಾರನ್ನು ಆರಿಸುತ್ತೀರಿ? ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಇಬ್ಬರಲ್ಲಿ ಒಬ್ಬರನ್ನು ಬೆಸ್ಟ್ ಎಂದು ಹೆಸರಿಸಿದ್ದಾರೆ.
ಟ್ವಿಟರ್‌ನಲ್ಲಿ ಶೋಯೆಬ್ ಅಖ್ತರ್ ಅವರಲ್ಲಿ ಅಭಿಮಾನಿಯೊಬ್ಬರು, ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಇವರಲ್ಲಿ ಒಬ್ಬರನ್ನು ಆರಿಸುವುದಾದರೆ ನಿಮ್ಮ ಆಯ್ಕೆ ಯಾರು? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಖ್ತರ್ ದ್ರಾವಿಡ್ ಎಂದು ಉತ್ತರಿಸಿದ್ದಾರೆ.
ಮಾಜಿ ಸ್ಪೀಡ್ ಸ್ಟಾರ್ ಅಖ್ತರ್ ಅವರಲ್ಲಿ ಮತ್ತೊಂದು ಪ್ರಶ್ನೆ ಇಡಲಾಗಿತ್ತು. ಈ ಹೊತ್ತಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಪರಿಪೂರ್ಣ ಆಟಗಾರ ಯಾರು ಎಂದು ಕ್ರಿಕ್ ಟ್ರ್ಯಾಕರ್ ಶೋಯೆಬ್ ಅವರಲ್ಲಿ ಪ್ರಶ್ನಿಸಿತ್ತು. ಇದಕ್ಕೆ ಅಖ್ತರ್, 'ವಿರಾಟ್ ಕೊಹ್ಲಿ ಮತ್ತು ಬಾಬರ್ ಅಝಾಮ್ ಎಂದು ಉತ್ತರಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನ, ಏಕದಿನ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಮತ್ತು ಟಿ20ಐ ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನ ಗಳಿಸಿದ್ದಾರೆ. ಇತ್ತ ಬಾಬರ್ ಅಝಾಮ್ ಟೆಸ್ಟ್‌ನಲ್ಲಿ 5, ಏಕದಿನದಲ್ಲಿ 5 ಮತ್ತು ಟಿ20ಐನಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications