ಬೆಳ್ಳಿತೆರೆ ಮೇಲೆ ಕ್ರಿಕೆಟ್ ದೇವರು ಸಚಿನ್ ಆಟ, ಥ್ರಿಲ್ಲಾದ ಫ್ಯಾನ್ಸ್
ಬೆಂಗಳೂರು, ಮೇ 25: ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದೇವರು ಎಂದೆಲ್ಲ ಅಭಿಮಾನಗಳಿಂದ ಕರೆಸಿಕೊಳ್ಳುವ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆ ಬೆಳ್ಳಿತೆರೆಯ ಮೇಲೆ ಮೇ 26ರಿಂದ ಕಾಣಬಹುದಾಗಿದೆ. ಈ ಬಗ್ಗೆ ಥ್ರಿಲ್ಲಾಗಿರುವ ಫ್ಯಾನ್ಸ್ ಏನು ಹೇಳುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಸಚಿನ್ ಮೇನಿಯಾ ಹೇಗಿದೆ ಇಲ್ಲಿ ಓದಿ..
ಸಚಿನ್ ಅವರ ಜೀವನಗಾಥೆ ಯುವ ಜನಾಂಗಕ್ಕೆ ಸ್ಪೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಹಾಡಿ ಹೊಗಳಿದ್ದಾರೆ. ಅಭಿಮಾನಿಗಳು ತಮ್ಮ ಪ್ರೀತಿಯನ್ನು ಟ್ವೀಟ್ ಮೂಲಕ ತೋರಿಸಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಖರೀದಿಸಿ, ಸಿನಿಮಾ ನೋಡುವ ಕಾತುರದಲ್ಲಿರುವುದಾಗಿ ಘೋಷಿಸಿದ್ದಾರೆ.[ಸಚಿನ್ ಜೀವನಗಾಥೆ ನೋಡಿ ಸ್ಪೂರ್ತಿ ಪಡೆದ ಕೊಹ್ಲಿ ಅಂಡ್ ಟೀಂ]
ಚಿತ್ರಕ್ಕೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಸಂಗೀತ ನೀಡಿದ್ದಾರೆ. ರವಿ ಭಗಚಂದ್ರ ಎಂಬ ನಿರ್ಮಾಪಕರು 200 ನಾಟೌಟ್ ಎಂಬ ಬ್ಯಾನರ್ ನಡಿ ಈ ಚಿತ್ರವನ್ನು ಜೇಮ್ಸ್ ಎರ್ ಸ್ಕಿನ್ ನಿರ್ದೇಶಿಸಿದ್ದಾರೆ.
ಇಂಗ್ಲೆಂಡ್ಗೆ ತೆರಳುವ ಮುನ್ನ ಟೀಮ್ ಇಂಡಿಯಾದ ಎಲ್ಲ ಆಟಗಾರರು ಮುಂಬೈನ ವೆಸೋವಾದಲ್ಲಿರುವ ಚಿತ್ರಮಂದಿರದಲ್ಲಿ 'ಸಚಿನ್: ಎ ಬಿಲಿಯನ್ ಡ್ರೀಮ್ಸ್' ಚಿತ್ರವನ್ನು ವೀಕ್ಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು
ಸಚಿನ್ ಚಿತ್ರದ ಗಳಿಕೆ
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆ ಕಮರ್ಷಿಯಲ್ ಚಿತ್ರವಲ್ಲದಿದ್ದರೂ ಸಾಕಷ್ಟು ಕ್ರೇಜ್ ಹುಟ್ಟಿಹಾಕಿದೆ. ಬಾಲಿವುಡ್ ಚಿತ್ರಗಳ ಜತೆ ಪೈಪೋಟಿ ಅಲ್ಲದಿದ್ದರೂ, ಸರಿ ಸುಮಾರು 10-15 ಕೋಟಿರು ಆರಂಭದ ದಿನವೇ ಗಳಿಸುವ ನಿರೀಕ್ಷೆಯಿದೆ ಎಂದು ಚಿತ್ರದ ವಿತರಕ ಅನಿಲ್ ಥಡಾನಿ ಹೇಳಿದ್ದಾರೆ.
ಸಚಿನ್ ಮೇನಿಯಾ ಎಲ್ಲೆಡೆ
ಸಚಿನ್ ಮೇನಿಯಾ ಎಲ್ಲೆಡೆ ಶುರುವಾಗಿದ್ದು, ಮೊದಲದಿನದ ಮೊದಲ ಶೋ ಟಿಕೆಟ್ ಪಡೆದಿದ್ದೇನೆ 10ನೇ ನಂಬರ್ ಸೀಟು ಎಂದು ಟ್ವೀಟ್ ಮಾಡಿರುವ ಅಭಿಮಾನಿ.
ಸಿನಿಮಾ ನೋಡಲು ಕಾತುರ
ಸಚಿನ್ ತೆಂಡೂಲ್ಕರ್ ಸಿನಿಮಾ ನೋಡಲು ಕಾತುರದಿಂದ ಕಾದಿದ್ದೇನೆ ಎಂಬ ವಾಕ್ಯ ಗುರುವಾರವಿಡಿ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿತ್ತು
ಮೇ 26 ಅವಿಸ್ಮರಣೀಯ ದಿನ
ಸಚಿನ್ ಸಿನಿಮಾ ನೋಡಲು ಕಾತರನಾಗಿದ್ದೇನೆ, ಮೇ 26 ಅವಿಸ್ಮರಣೀಯ ದಿನವಾಗಲಿದೆ

2,800ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆಗೆ
ಸಚಿನ್ ಅವರ ಜೀವನಗಾಥೆಯನ್ನು ಹೊಂದಿರುವ 'ಸಚಿನ್: ಎ ಬಿಲಿಯನ್ ಡ್ರೀಮ್ಸ್ ' ಚಿತ್ರ ಮೇ 26ರಂದು 2,800ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆ ಕಾಣುತ್ತಿದೆ. ಒಡಿಶಾ, ಕೇರಳ ಹಾಗೂ ಛತ್ತೀಸ್ ಗಢದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇಂಗ್ಲೀಷ್, ಹಿಂದಿ, ಮರಾಠಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ನೋಡಬಹುದಾಗಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications