ಸಚಿನ್ ಜೀವನಗಾಥೆ ನೋಡಿ ಸ್ಪೂರ್ತಿ ಪಡೆದ ಕೊಹ್ಲಿ ಅಂಡ್ ಟೀಂ
ಮುಂಬೈ, ಮೇ 24: ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲು ಇಂಗ್ಲೆಂಡಿಗೆ ತೆರಳುವ ಮುನ್ನ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಸಚಿನ್ ಅವರ ಜೀವನಗಾಥೆ 'ಸಚಿನ್: ಎ ಬಿಲಿಯನ್ ಡ್ರೀಮ್ಸ್' ಚಿತ್ರವನ್ನು ನೋಡಿ ಸ್ಫೂರ್ತಿ ಪಡೆದುಕೊಂಡಿದೆ.
ಇಂಗ್ಲೆಂಡ್ಗೆ ತೆರಳುವ ಮುನ್ನ ಟೀಮ್ ಇಂಡಿಯಾದ ಎಲ್ಲ ಆಟಗಾರರು ಮುಂಬೈನ ವೆಸೋವಾದಲ್ಲಿರುವ ಚಿತ್ರಮಂದಿರದಲ್ಲಿ ವಿರಾಟ್ ಕೊಹ್ಲಿ ಹಾಗೂ ತಂಡ ಚಿತ್ರವನ್ನು ವೀಕ್ಷಿಸಿದರು. [ಸಚಿನ್, ಸಚಿನ್ ಹರ್ಷೋದ್ಗಾರ ಮೊದಲಿಗೆ ಶುರು ಮಾಡಿದ್ದು ಯಾರು?]
ಚಿತ್ರ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ನಾಯಕ ವಿರಾಟ್ ಕೊಹ್ಲಿ ಚಿತ್ರದ ಯಶಸ್ಸಿಗೆ ಶುಭಕೋರಿದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಭಾರತ ತಂಡಕ್ಕೆ ಶುಭ ಕೋರಿದರು.[ಕೋಟ್ಯಂತರ ಮಂದಿಗೆ ಸಚಿನ್ ಜೀವನಗಾಥೆ ಸ್ಫೂರ್ತಿ : ಮೋದಿ]
ಇಂಗ್ಲೆಂಡ್ ಹಾಗೂ ವೆಲ್ಸ್ ಆತಿಥ್ಯದಲ್ಲಿ ಜೂನ್ 1 ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳು ಲಂಡನ್, ಬರ್ವಿುಂಗ್ ಹ್ಯಾಂ ಹಾಗೂ ಕಾರ್ಡಿಫ್ ನಲ್ಲಿ ನಡೆಯಲಿದೆ. [ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ಮೇಲೆ ಉಗ್ರರ ಕರಿನೆರಳು!]
ಮ್ಯಾಂಚೆಸ್ಟರ್ ನಲ್ಲಿ ಉಗ್ರರ ದಾಳಿ ಪ್ರಕರಣದ ಬಳಿಕ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಲು ದೆಹಲಿ ಪೊಲೀಸ್ನ ಮಾಜಿ ಆಯುಕ್ತ ಹಾಗೂ ಹಾಲಿ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳದ ಸಲಹೆಗಾರ ನೀರಜ್ ಕುಮಾರ್ ಮಂಗಳವಾರ ರಾತ್ರಿಯೇ ಇಂಗ್ಲೆಂಡ್ಗೆ ತೆರಳಿದ್ದಾರೆ.

ಮೋದಿ ಅವರಿಂದಲೂ ಹೊಗಳಿಕೆ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಸಚಿನ್ ದಂಪತಿ, ಚಿತ್ರದ ಬಗ್ಗೆ ಚರ್ಚಿಸಿದ್ದರು. ಸಚಿನ್ ಅವರ ಜೀವನಗಾಥೆ ಯುವ ಜನಾಂಗಕ್ಕೆ ಸ್ಪೂರ್ತಿ ಎಂದು ಮೋದಿ ಹೊಗಳಿದರು. 'ಸಚಿನ್: ಎ ಬಿಲಿಯನ್ ಡ್ರೀಮ್ಸ್ ' ಚಿತ್ರ ಮೇ 26ರಂದು ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ :(ಎಡದಿಂದ ಬಲಕ್ಕೆ : ಅಂಜಲಿ ತೆಂಡೂಲ್ಕರ್, ಅನುಷ್ಕಾ ಶರ್ಮ, ವಿರಾಟ್ ಕೊಹ್ಲಿ ಹಾಗೂ ಸಚಿನ್)

ಸಚಿನ್ ನಮ್ಮೆಲ್ಲರ ಸ್ಪೂರ್ತಿ
ಸಚಿನ್ ನಮ್ಮೆಲ್ಲರ ಸ್ಪೂರ್ತಿ ಎಂದ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ತಮ್ಮ ನೆಚ್ಚಿನ ತಾರೆ ಸಚಿನ್ ಜತೆ ಪೋಸ್ ನೀಡಿದ್ದು ಹೀಗೆ.

ಸಚಿನ್ ಹಾಗೂ ಧೋನಿ
ಜೇಮ್ಸ್ ಎರ್ ಸ್ಕಿನ್ ನಿರ್ದೇಶನದ ಚಿತ್ರವು ಸಚಿನ್ ತೆಂಡೂಲ್ಕರ್ ಅವರ ಜೀವನದ ಈವರೆಗಿನ ಪಯಣವನ್ನು ಅನಾವರಣಗೊಳಿಸಲಿದೆ. ಅಲ್ಲದೆ, ಸಚಿನ್ ಬಗ್ಗೆ ಈವರೆಗೆ ತಿಳಿಯದಿರುವ ಕೆಲವಾರು ಆಪ್ತ ವಿಚಾರಗಳನ್ನೂ ಹೇಳಲಾಗಿದೆ.

ಅನುಷ್ಕಾ ಹಾಗೂ ಅಂಜಲಿ
ಚಿತ್ರಕ್ಕೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಸಂಗೀತ ನೀಡಿದ್ದಾರೆ. ರವಿ ಭಗಚಂದ್ರ ಎಂಬ ನಿರ್ಮಾಪಕರು 200 ನಾಟೌಟ್ ಎಂಬ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಶುಭ ಹಾರೈಕೆಗಳು ಬರುತ್ತಿವೆ
ಕ್ರಿಕೆಟ್ ಆಗಲಿ, ಟೆನಿಸ್ ಆಗಲಿ ಎದುರಿಗೆ ಚೆಂಡು ಕಾಣಿಸಿದರೆ ಚೆಚ್ಚುವುದು ನನ್ನ ಗುರಿಯಾಗಿತ್ತು. ನನ್ನ ಅಣ್ಣ ನಾನು ಬಾರಿಸಿದ ಚೆಂಡುಗಳನ್ನು ಹೆಕ್ಕಿ ತರುತ್ತಿದ್ದ. ಆ ಕಾಲದಲ್ಲಿ ತೆಗೆದ ಚಿತ್ರಗಳು ಈಗ ಫಿಲ್ಮ್ ಗೆ ಬಳಕೆಯಾಗಿದೆ ಎಂದು ಸಚಿನ್ ಅವರು ಇತ್ತೀಚೆಗೆ ಚಿತ್ರದ ಬಗ್ಗೆ ಹೇಳಿಕೊಂಡಿದ್ದರು. ಭಾರಿ ಕುತೂಹಲ ಹುಟ್ಟಿಸಿರುವ ಈ ಚಿತ್ರ ಎಲ್ಲೆಡೆಯಿಂದ ಶುಭ ಹಾರೈಕೆಗಳು ಬರುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications