For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ ಸರಣಿಗೆ ರೋಹಿತ್ ಶರ್ಮಾಗೆ ವಿಶ್ರಾಂತಿ: BCCI ನಿರ್ಧಾರ ಪ್ರಶ್ನಿಸಿದ ಫ್ಯಾನ್ಸ್‌

Rohit sharma

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬುಮ್ರಾ, ರಿಷಬ್ ಪಂತ್ ಮತ್ತು ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ.

ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವುದು ಸದ್ಯದ ವಿವಾದಕ್ಕೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಈಗಾಗಲೇ ರೋಹಿತ್, ಬುಮ್ರಾ ಮತ್ತು ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.
ಹೀಗಿರುವಾಗ ಜುಲೈ 22ರಿಂದ ಆರಂಭವಾಗಲಿರುವ ವೆಸ್ಟ್‌ ಇಂಡೀಸ್‌ ಸರಣಿಗೆ ವಿಶ್ರಾಂತಿ ನೀಡುವ ಅಗತ್ಯವಿದೆಯೇ ಎಂದು ಅನೇಕ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ರೋಹಿತ್ ಶರ್ಮಾ

ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ರೋಹಿತ್ ಶರ್ಮಾ

ಕೊರೊನಾ ವೈರಸ್‌ನಿಂದಾಗಿ ದಕ್ಷಿಣ ಆಫ್ರಿಕಾ ಸರಣಿ ಮತ್ತು ನಂತರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡದ ರೋಹಿತ್ ಶರ್ಮಾ ಸದ್ಯ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಐಪಿಎಲ್ ಸರಣಿಯ ಬಳಿಕ ಕಳೆದ 40 ದಿನಗಳಿಂದ ವಿಶ್ರಾಂತಿ ಪಡೆದಿರುವ ರೋಹಿತ್ ಇದೀಗ ಇಂಗ್ಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಆಡಲು ಸಜ್ಜಾಗಿದ್ದಾರೆ.

ರೋಹಿತ್‌ಗೆ ವಿಶ್ರಾಂತಿ ನೀಡುವುದು ಸರಿಯೇ?

ರೋಹಿತ್‌ಗೆ ವಿಶ್ರಾಂತಿ ನೀಡುವುದು ಸರಿಯೇ?

ಅಭಿಮಾನಿಗಳ ಪ್ರಶ್ನೆ ಹೀಗಿರುವಾಗ ಮತ್ತೆ ವೆಸ್ಟ್ ಇಂಡೀಸ್ ಸರಣಿಯಲ್ಲಿ ವಿಶ್ರಾಂತಿ ಪಡೆಯುವುದು ನ್ಯಾಯವೇ ಎಂದು ಅಭಿಮಾನಿಗಳು ಪ್ರಶ್ನಿಸಿದ್ದು, ರೋಹಿತ್ ಶರ್ಮಾ ನಾಯಕನ ಸ್ಥಾನದಿಂದ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂದು ಪ್ರಶ್ನಿಸಿದ್ದು, ರೋಹಿತ್ ಮುಂದುವರಿಯಬಹುದೇ ಎಂಬ ಪ್ರಶ್ನೆಯೂ ಮೂಡಿದೆ. ಐಪಿಎಲ್‌ನಲ್ಲಿ ಸತತ 14 ಪಂದ್ಯಗಳನ್ನು ಆಡಬಹುದಾದರೆ ದೇಶಕ್ಕಾಗಿ ಏಕೆ ಸತತ ಎರಡು ಸರಣಿಗಳನ್ನ ಆಡಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.

ವಿಶ್ರಾಂತಿ ನೀಡಿದರೆ ಫಾರ್ಮ್‌ಗೆ ಮರಳಲ್ಲ: ಹಿರಿಯ ಆಟಗಾರರ ವಿಶ್ರಾಂತಿಗೆ ಇರ್ಫಾನ್ ಪಠಾಣ್ ಅಸಮಾಧಾನ

ರೋಹಿತ್‌ಗೆ ವಿಶ್ರಾಂತಿ-ಇರ್ಫಾನ್ ಪಠಾಣ್ ಅಚ್ಚರಿ!

ರೋಹಿತ್‌ಗೆ ವಿಶ್ರಾಂತಿ-ಇರ್ಫಾನ್ ಪಠಾಣ್ ಅಚ್ಚರಿ!

ಅದೇ ರೀತಿ ವಿರಾಟ್ ಕೊಹ್ಲಿಗೆ ರೆಸ್ಟ್ ನೀಡಿ ಬಿಸಿಸಿಐ ಅಚ್ಚರಿ ಮೂಡಿಸಿದೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿ ಎರಡೂವರೆ ವರ್ಷ ಕಳೆದಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 20 ರನ್ ದಾಟಿರಲಿಲ್ಲ. ಕೊಹ್ಲಿ ವಿಶ್ರಾಂತಿ ಮುಂದುವರಿಸಿದರೆ ಹೇಗೆ ಫಾರ್ಮ್‌ಗೆ ಮರಳುತ್ತಾರೆ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಪ್ರಶ್ನಿಸಿದ್ದಾರೆ.

ವಿರಾಟ್ ಕೊಹ್ಲಿ ಕಳಪೆ ಫಾರ್ಮ್; ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಮಹತ್ವದ ಹೇಳಿಕೆ

ಪಂತ್‌ಗೆ ಮೊದಲು ವಿಶ್ರಾಂತಿ ನೀಡಬೇಕು!

ಪಂತ್‌ಗೆ ಮೊದಲು ವಿಶ್ರಾಂತಿ ನೀಡಬೇಕು!

ರಿಷಬ್ ಪಂತ್ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಸರಣಿಯಲ್ಲಿ ಆಡುವುದನ್ನು ಮುಂದುವರಿಸಿರುವುದರಿಂದ ಅವರಿಗೆ ವಿಶ್ರಾಂತಿ ನೀಡುವುದು ಮುಖ್ಯವಾಗಿದೆ. ಗಾಯವನ್ನು ತಡೆಯಲು ವೇಗದ ಬೌಲರ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ ಎಂದು ಹೇಳಿದರೆ, ನಾವು ಅದನ್ನು ಒಪ್ಪಿಕೊಳ್ಳಬಹುದು. ಆದರೆ ಉಳಿದಿರುವ ಟಿ20 ವಿಶ್ವಕಪ್ ತಯಾರಿಗಾಗಿ ಹಿರಿಯ ಆಟಗಾರರ ಲೋಡ್ ಅನ್ನು ಕಡಿಮೆ ಮಾಡುವುದು ಬಿಸಿಸಿಐ ನಡೆಯಾಗಿದೆ.

ಅತಿಯಾದ ನಾಯಕತ್ವ ಬದಲಾವಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ

ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ಸಿ ಹೈಡ್ರಾಮಾ!! ವಿರಾಟ್ ಬಿಟ್ರೆ ಸಮರ್ಥ ನಾಯಕ ಯಾರು ಇಲ್ಲ | OneIndia Kannada
 ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್‌

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್‌

ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್ ಪ್ರಕಟಗೊಂಡಿದೆ. ಆಟಗಾರರ ಹೆಸರು ಈ ಕೆಳಗಿನಂತಿದೆ.


ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜವೇಂದ್ರ ಚಹಾಲ್ ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

Story first published: Thursday, July 7, 2022, 8:23 [IST]
Other articles published on Jul 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+