KKR ಗೆಲ್ಲಲಿ ಎಂದು ಪ್ರಾರ್ಥಿಸುತ್ತಿದ್ದ ಜೂಹಿ ಚಾವ್ಲಾ ಟ್ರೋಲ್‌ಗೆ ಗುರಿ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿ ಸಹ ಮಾಲೀಕರಾದ , ನಟಿ ಜೂಹಿ ಚಾವ್ಲಾ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಗುರುವಾರ (ಅ.29) ದುಬೈ ಇಂಟರ್‌ನ್ಯಾಷ್‌ನಲ್ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಜೂಹಿ ಚಾವ್ಲಾ ಪಂದ್ಯದ ಕೊನೆಯಲ್ಲಿ ಕೆಕೆಆರ್ ಗೆಲ್ಲಲಿ ಎಂದು ಪ್ರಾರ್ಥನೆ ಮಾಡುತ್ತಿದ್ದರು. ಈ ವೇಳೆ ಪದೇ ಪದೇ ಕ್ಯಾಮೆರಾದಲ್ಲಿ ಅವರನ್ನು ತೋರಿಸಲಾಗುತ್ತಿತ್ತು.
ಆದರೆ ಈ ಪಂದ್ಯದಲ್ಲಿ ಸಿಎಸ್‌ಕೆ ತಂಡವು ಕೆಕೆಆರ್‌ಗಿದ್ದ ಪ್ಲೇ ಆಫ್ ಕನಸನ್ನು ಬಹುದೂರ ತಳ್ಳಿದೆ. ಸಿಎಸ್‌ಕೆ, ಕೆಕೆಆರ್ ಅನ್ನು ಆರು ವಿಕೆಟ್‌ಗಳಿಂದ ಸೋಲಿಸಿದ್ದರಿಂದ ಬಾಲಿವುಡ್ ನಟಿ ಪ್ರಾರ್ಥನೆಗಳು ವ್ಯರ್ಥವಾಗಿದೆ.
ಕೆಕೆಆರ್ ನೀಡಿದ 173 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಓಪನರ್ ರುತುರಾಜ್ ಗಾಯಕ್ವಾಡ್ 72, ಅಂಬಟಿ ರಾಯುಡು 38, ಕೊನೆಯಲ್ಲಿ ರವೀಂದ್ರ ಜಡೇಜಾ ಸ್ಪೋಟಕ 31ರನ್‌ಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಆರು ವಿಕೆಟ್‌ಗಳ ಗೆಲುವು ಸಾಧಿಸಿತು. ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಆಲ್‌ರೌಂಡರ್ ರವೀಂದ್ರ ಜಡೇಜಾ ಕೇವಲ 11 ಎಸೆತಗಳಲ್ಲಿ 31 ರನ್ ಸಿಡಿಸಿದ್ರು. ಇದರ ನಡುವೆ ಜೂಹಿ ಚಾವ್ಲಾ ಪ್ರಾರ್ಥನೆಯು ಟ್ರೋಲ್‌ಗೆ ಒಳಗಾಗಿದೆ.
ಕೆಕೆಆರ್ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದರೂ ಪ್ಲೇ ಆಫ್ ಹಂತಕ್ಕೇರುವ ಸಾಧ್ಯತೆಯು ಕಡಿಮೆ ಇದೆ. ಏಕೆಂದರೆ ಅವರು ತಮ್ಮ ಕೊನೆಯ ಲೀಗ್ ಪಂದ್ಯವನ್ನು ಗೆದ್ದರೂ ಸಹ, ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಇತರೇ ತಂಡದ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. 13 ಪಂದ್ಯಗಳಿಂದ ಆರು ಜಯಗಳಿಸಿದ ಕೆಕೆಆರ್ ಪ್ರಸ್ತುತ ಪಾಯಿಂಟ್ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಸಿಎಸ್‌ಕೆ ಈಗಾಗಲೇ ಪ್ಲೇ ಆಫ್ ಓಟದಿಂದ ಹೊರಗುಳಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications