Flashback 2022 : ಪದಾರ್ಪಣೆ ಮಾಡಿದ ಒಂದೇ ವರ್ಷದಲ್ಲಿ ಕ್ರಿಕೆಟ್‌ನಿಂದ ಮರೆಯಾದ 5 ಯುವ ಆಟಗಾರರು ಇವರು

2022 ಭಾರತೀಯ ಕ್ರಿಕೆಟ್‌ಗೆ ಅನೇಕ ಸಿಹಿ ಕಹಿಯನ್ನು ಕಂಡ ವರ್ಷವಾಗಿದೆ. ದ್ವಿಪಕ್ಷೀಯ ಸರಣಿಯಲ್ಲಿ ಅಮೋಘ ಸಾಧನೆ ಮಾಡಿದ ಭಾರತ ತಂಡ, ಟಿ20 ವಿಶ್ವಕಪ್ ಮತ್ತು ಏಷ್ಯಾಕಪ್‌ನಲ್ಲಿ ಚಾಂಪಿಯನ್ ಆಗುವಲ್ಲಿ ವಿಫಲವಾಯಿತು.
ಅನೇಕ ಭಾರತೀಯ ಕ್ರಿಕೆಟಿಗರಿಗೆ 2022 ಮರೆಯಲಾಗದ ಸ್ಮರಣೀಯ ವರ್ಷವಾಗಿದೆ. ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನಕ್ಕೆ ಏರಿದರು. ವಿರಾಟ್ ಕೊಹ್ಲಿ ಮೂರು ವರ್ಷಗಳ ತಮ್ಮ ಶತಕದ ಬರವನ್ನು 2022ರಲ್ಲಿ ನೀಗಿಸಿಕೊಂಡರು.
ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡಕ್ಕೆ ನಾಯಕನಾಗಿ ಬಡ್ತಿ ಹೊಂದಿರು. ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.
ಇನ್ನೂ ಕೆಲವು ಉತ್ತಮ ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. 2021ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರೂ, ಒಂದೇ ವರ್ಷದಲ್ಲಿ ಕ್ರಿಕೆಟ್‌ನಿಂದ ಮರೆಯಾದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಪ್ರಭಾವ ಬೀರುತ್ತಾರೆ ಎಂದು ನಿರೀಕ್ಷೆ ಮಾಡಿದ ಹೊರತಾಗಿಯೂ ನಂತರ ಭಾರತ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಅಂತಹ ಐದು ಯುವ ಕ್ರಿಕೆಟಿಗರ ಬಗ್ಗೆ ಮಾಹಿತಿ.

ಕೆಲವೇ ಪಂದ್ಯ ಆಡಿ ಮರೆಯಾದ ವೆಂಕಟೇಶ್ ಅಯ್ಯರ್
2022ರ ಆರಂಭದಲ್ಲಿ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ತಂಡದಿಂದ ಹೊರುಗುಳಿದಿದ್ದರು. ಪಾಂಡ್ಯ ಬದಲಿಗೆ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಆದರೆ, ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. 2022ರಲ್ಲಿ ಅಯ್ಯರ್ ಆರು ಟಿ20 ಪಂದ್ಯಗಳನ್ನು ಆಡಿದ್ದು, 179.63 ಸ್ಟ್ರೈಕ್‌ರೇಟ್‌ನಲ್ಲಿ 97 ರನ್ ಗಳಿಸಿದರು.
2022ರ ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧ ಅವರು ಆಡಿದ ಟಿ20 ಪಂದ್ಯ ಈ ವರ್ಷದ ಕೊನೆಯ ಪಂದ್ಯವಾಯಿತು. ನಂತರ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಪರವಾಗಿ ಆಡುವ ಅಯ್ಯರ್ ಉತ್ತಮ ಪ್ರದರ್ಶನ ನೀಡಲಿಲ್ಲ. ಇದೇ ಸಮಯದಲ್ಲಿ ಪಾಂಡ್ಯ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮತ್ತೆ ತಂಡಕ್ಕೆ ವಾಪಸಾದರು. ಭಾರತ ತಂಡದಲ್ಲಿ ಪಾಂಡ್ಯ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ವೆಂಕಟೇಶ್ ಅಯ್ಯರ್ ತಂಡದಲ್ಲಿ ಸ್ಥಾನ ಕಳೆದುಕೊಂಡರು.
IPL 2023: ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್; 'ನಾನು ಆಘಾತಕ್ಕೊಳಗಾಗಿದ್ದೇನೆ' ಎಂದ ಅನುಭವಿ ವೇಗಿ

ಮಿಂಚಿ ಮರೆಯಾದ ಟಿ ನಟರಾಜನ್
2022ರಲ್ಲಿ ಭಾರತ ತಂಡದಲ್ಲಿ ಅನೇಕ ವೇಗದ ಬೌಲರ್ ಗಳು ಸ್ಥಾನ ಪಡೆದರು. ಆದರೆ, ಆಯ್ಕೆದಾರರು ಎಡಗೈ ಬೌಲರ್ ಟಿ ನಟರಾಜನ್‌ರನ್ನು ಆಯ್ಕೆಗೆ ಪರಿಗಣಿಸಲೇ ಇಲ್ಲ. ನಟರಾಜನ್ 2021ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು ಮತ್ತು ದಿ ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ವಿಕೆಟ್ ಪಡೆಯುವ ಮೂಲಕ ಭಾರತದ ಸ್ಮರಣೀಯ ಗೆಲುವಿನಲ್ಲಿ ಸಹಾಯ ಮಾಡಿದರು.
ನಟರಾಜನ್ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಫಿಟ್ನೆಸ್ ಸಮಸ್ಯೆಯಿಂದಾಗಿ ಆಯ್ಕೆದಾರರು ನಟರಾಜನ್‌ಗೆ ಹೆಚ್ಚಿನ ಅವಕಾಶ ನೀಡಲಿಲ್ಲ. 2022ರಲ್ಲಿ ಅವರು ಭಾರತ ತಂಡಕ್ಕಾಗಿ ಒಂದೂ ಪಂದ್ಯವನ್ನಾಡಲಿಲ್ಲ.

2022ರಲ್ಲಿ ಅವಕಾಶ ಪಡೆಯದ ಚೇತನ್ ಸಕಾರಿಯಾ
ಚೇತನ್ ಸಕರಿಯಾ 2021ರಲ್ಲಿ ಶ್ರೀಲಂಕಾ ವಿರುದ್ಧದ ವಿದೇಶ ಸರಣಿಯ ವೇಳೆ ಭಾರತಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಮೊದಲ ಪಂದ್ಯದಲ್ಲೇ ಎರಡು ವಿಕೆಟ್ ಪಡೆದರು. ನಂತರ ಎರಡು ಟಿ20 ಪಂದ್ಯಗಳನ್ನಾಡಿದ ಸಕಾರಿಯ ಒಂದು ವಿಕೆಟ್ ಪಡೆದರು.
ಯುವ ಕ್ರಿಕೆಟಿಗ, ಮೊದಲನೇ ಪಂದ್ಯದಲ್ಲಿ ನೀಡಿದ ಪ್ರದರ್ಶನ ಉತ್ತಮವಾಗಿತ್ತು. ಆದರೂ ಆಯ್ಕೆದಾರರು ಅವರನ್ನು 2022ರಲ್ಲಿ ಪರಿಗಣಿಸಲಿಲ್ಲ. 2022ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಸಕಾರಿಯಾ, ಅಲ್ಲೂ ಕೂಡ ಒಂದು ಪಂದ್ಯವನ್ನಾಡಲಿಲ್ಲ.

ಯುವ ಬೌಲರ್ ರಾಹುಲ್ ಚಹಾರ್
ರಾಹುಲ್ ಚಹಾರ್ 2021 ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಪ್ರಮುಖ ಲೆಗ್ ಸ್ಪಿನ್ನರ್ ಆಗಿದ್ದರು. ಆದರೂ, ಅವರನ್ನು 2022ರಲ್ಲಿ ಭಾರತ ತಂಡಕ್ಕೆ ಆಯ್ಕೆ ಮಾಡಲಿಲ್ಲ. ಭಾರತ ತಂಡಕ್ಕಾಗಿ ಒಂದು ಏಕದಿನ ಪಂದ್ಯವನ್ನಾಡಿದ್ದು, 3 ವಿಕೆಟ್ ಪಡೆದಿದ್ದರು.
ಆರು ಟಿ20 ಪಂದ್ಯಗಳನ್ನಾಡಿರುವ ರಾಹುಲ್ ಚಹಾರ್ 7 ವಿಕೆಟ್‌ಗಳನ್ನು ಪಡೆದಿದ್ದಾರೆ, ಆದರೂ ಭಾರತ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಒಂದೇ ಬಾರಿಗೆ ಭಾರತ ಎರಡು ವಿಭಿನ್ನ ತಂಡಗಳನ್ನು ಹೊಂದಿದಾಗಲೂ ಅವರು ಸ್ಥಾನ ಪಡೆಯುವಲ್ಲಿ ವಿಫಲರಾದರು.

ಸಂದೀಪ್ ವಾರಿಯರ್
2021 ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಚೊಚ್ಚಲ ಪಂದ್ಯವನ್ನು ಮಾಡಿದ ಭಾರತೀಯ ಕ್ರಿಕೆಟಿಗರಲ್ಲಿ ಸಂದೀಪ್ ವಾರಿಯರ್ ಒಬ್ಬರು. ಚೊಚ್ಚಲ ಪಂದ್ಯನ್ನಾಡಿದ ಸಕಾರಿಯಾಗೆ ಎರಡನೇ ಪಂದ್ಯದಲ್ಲಿ ಆಡಲು ಇದುವರೆಗೆ ಅವಕಾಶವೇ ಸಿಕ್ಕಿಲ್ಲ. ಶ್ರೀಲಂಕಾ ವಿರುದ್ಧದ ಪಂದ್ಯವೇ ಅವರ ಮೊದಲ ಮತ್ತು ಕೊನೆಯ ಅವಕಾಶವಾಯಿತು.
ನಂತರ ಐಪಿಎಲ್‌ನಲ್ಲಿ ಕೂಡ ಅವರು ಮಾರಾಟವಾಗದೆ ಉಳಿದುಕೊಂಡರು. ಬಲಗೈ ವೇಗಿ 2023ರಲ್ಲಿ ಮತ್ತೆ ಕ್ರಿಕೆಟ್‌ಗೆ ವಾಪಸಾಗುವ ವಿಶ್ವಾಸದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications