IPL 2023: ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್; 'ನಾನು ಆಘಾತಕ್ಕೊಳಗಾಗಿದ್ದೇನೆ' ಎಂದ ಅನುಭವಿ ವೇಗಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ ಹರಾಜು ಪ್ರಕ್ರಿಯೆಯಲ್ಲಿ ಯುವ ಕ್ರಿಕೆಟಿಗರು ರಾತ್ರೋರಾತ್ರಿ ಕೋಟ್ಯಧಿಪತಿ ಆಗುವ ಸ್ಪೂರ್ತಿದಾಯಕ ಕ್ಷಣಗಳು ಕಣ್ಮುಂದೆ ನಡೆಯುತ್ತವೆ. ಆದರೆ ಎಲ್ಲಾ ಹತ್ತು ಫ್ರಾಂಚೈಸಿಗಳಲ್ಲಿ ಸ್ಥಾನ ಪಡೆಯಲು ವಿಫಲವಾದ ಅನುಭವಿ ಕ್ರಿಕೆಟಿಗರಿಗೆ ನೋವು ತರಿಸುವ ಕ್ಷಣಗಳು ನಡೆದು ಬಿಡುತ್ತವೆ.
ಇನ್ನು ಭಾರತದ ವೇಗದ ಬೌಲರ್ ಸಂದೀಪ್ ಶರ್ಮಾ ಅವರು ಕೊಚ್ಚಿಯಲ್ಲಿ ಐಪಿಎಲ್ 2023 ಮಿನಿ ಹರಾಜಿನಲ್ಲಿ ಒಂದೇ ಒಂದು ಐಪಿಎಲ್ ಫ್ರಾಂಚೈಸಿ ಕೂಡ ಅವರ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಹೋದ ನಂತರ ಸಂದೀಪ್ ಶರ್ಮಾ ನಿರಾಶೆಗೊಂಡಿದ್ದಾರೆ.
ಬಲಗೈ ವೇಗಿ ಅವರು ಶ್ರೀಮಂತ ಲೀಗ್‌ನಲ್ಲಿ ಆಡಿದ ಪ್ರತಿಯೊಂದು ತಂಡದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಅವರ ಪ್ರದರ್ಶನವನ್ನು ಗಮನಿಸಿದರೆ, ವಿಕೆಟ್-ಟೇಕರ್‌ಗಳ ಟಾಪ್ 15 ಬೌಲರ್‌ಗಳ ಪಟ್ಟಿಯಲ್ಲಿ ಸಂದೀಪ್ ಶರ್ಮಾ ಇದ್ದಾರೆ.
ಸಂದೀಪ್ ಶರ್ಮಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 104 ಪಂದ್ಯಗಳಲ್ಲಿ ಒಟ್ಟು 114 ವಿಕೆಟ್ ಪಡೆದಿದ್ದಾರೆ. ಅವರು ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದಾರೆ.

ಐಪಿಎಲ್ ಮಿನಿ ಹರಾಜಿನಲ್ಲಿ ಬಿಡ್ ಆಗದಿರುವುದರಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ನಿರಾಶೆಗೊಂಡಿದ್ದೇನೆ ಎಂದು ಸಂದೀಪ್ ಶರ್ಮಾ Cricket.comಗೆ ತಿಳಿಸಿದ್ದಾರೆ.
"ನಾನು ಏಕೆ ಬಿಡ್ ಆಗದೆ ಹೋದೆ ಎಂದು ನನಗೆ ತಿಳಿದಿಲ್ಲ. ನಾನು ಯಾವ ತಂಡಕ್ಕಾಗಿ ಆಡಿದ್ದೀನೋ ಚೆನ್ನಾಗಿ ಪ್ರದರ್ಶನ ನೀಡಿದ್ದೇನೆ. ಕೆಲವು ತಂಡಗಳು ನನಗೆ ಬಿಡ್ ಮಾಡುತ್ತವೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸಿದ್ದೆ. ನಿಜ ಹೇಳಬೇಕೆಂದರೆ, ನಾನು ಇದನ್ನು ನಿರೀಕ್ಷಿಸಿರಲಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿಯೂ ನಾನು ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ. ರಣಜಿ ಟ್ರೋಫಿಯ ಕೊನೆಯ ಸುತ್ತಿನಲ್ಲಿ ನಾನು ಏಳು ವಿಕೆಟ್‌ಗಳನ್ನು ಪಡೆದಿದ್ದೇನೆ, ನಾನು ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ದೇನೆ," ಎಂದರು.
"ನಾನು ಯಾವಾಗಲೂ ನನ್ನ ಬೌಲಿಂಗ್‌ನಲ್ಲಿ ಸ್ಥಿರವಾಗಿರಲು ಶ್ರಮಿಸುತ್ತಿದ್ದೇನೆ ಮತ್ತು ಅದು ನನ್ನ ಕೈಯಲ್ಲಿದೆ. ನಾನು ಆಯ್ಕೆ ಅಥವಾ ಆಯ್ಕೆ ಮಾಡದಿರುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅವಕಾಶ ಬಂದರೆ ಒಳ್ಳೆಯದು, ಇಲ್ಲದಿದ್ದರೆ, ನಾನು ಉತ್ತಮ ಕೆಲಸವನ್ನು ಮಾಡುತ್ತಲೇ ಇರುತ್ತೇನೆ," ಎಂದು ಸಂದೀಪ್ ಶರ್ಮಾ ನೋವು ಹೊರಹಾಕಿದರು.
ಸಂದೀಪ್ ಶರ್ಮಾ ಮೂಲ ಬೆಲೆಯನ್ನು 50 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿತ್ತು. ಆದರೆ ಅವರಿಗೆ ಯಾರೂ ಬಿಡ್ ಕೂಗಲಿಲ್ಲ. ಗಾಯದ ಬದಲಿ ಆಟಗಾರನಾಗಿ ಅವರು ಇನ್ನೂ ಲೀಗ್‌ನಲ್ಲಿರುವ 10 ತಂಡಗಳಲ್ಲಿ ಯಾವುದಾದರೂ ಸ್ಥಾನವನ್ನು ಪಡೆಯಬಹುದು. ರಣಜಿ ಟ್ರೋಫಿ ಮತ್ತು ಸೈಯದ್ ಮುಸ್ತಾಕ್ ಅಲಿ ಟೂರ್ನಿಯಲ್ಲಿ ಸಂದೀಪ್ ಶರ್ಮಾ ಅದ್ಭುತವಾಗಿ ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications